ಥಾಣೆ(ಮಹಾರಾಷ್ಟ್ರ): ಮಹಿಳೆಯೋರ್ವಳ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಮದ್ಯಪಾನ ಮಾಡಿದ್ದ ವ್ಯಕ್ತಿಗೆ ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಹಾರಾಷ್ಟ್ರದ ಥಾಣೆ ಬಳಿಯ ಮನೋರಮಾ ನಗರದಲ್ಲಿ ನಡೆದಿದೆ.
ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ನಡುಬೀದಿಯಲ್ಲೇ ಚಪ್ಪಲಿಗಳಿಂದ ಥಳಿಸಲಾಗಿದೆ. ಈ ವೇಳೆ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮೃಣಾಲ್ ಪೆಂಡ್ಸೆ ಕೂಡಾ ಆರೋಪಿಗೆ ಥಳಿಸಿದ್ದಾರೆ.
ಆರೋಪಿಗೆ ಥಳಿಸಿದ ನಂತರ ಆತನನ್ನು ಸ್ಥಳೀಯ ಪೊಲೀಸರ ವಶಕ್ಕೆ ನೀಡಲಾಗಿದ್ದು, ದೂರು ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಆ ಪ್ರದೇಶದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತನೆ ಮಾಡುವ ಪ್ರಕರಣಗಳು ಹೆಚ್ಚಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: 2 ರೂಪಾಯಿಗೆ ಔಷಧ, 8 ಲಕ್ಷ ರೋಗಿಗಳ ಸೇವೆ: ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಡಾ.ಮಹೇಂದ್ರಭಾಯ್