ETV Bharat / bharat

ಒಂದು ನಾಯಿ.. ಎರಡು ಗುಂಪುಗಳ ನಡುವೆ ಜಗಳ... ಮೆಣಸಿನ ಪುಡಿ, ಚಾಕುಗಳಿಂದ.. ಪರಸ್ಪರ ಹಲ್ಲೆ..!!

ನಾಯಿಯ ಸಲುವಾಗಿ ಎರಡು ಗುಂಪುಗಳ ಜಗಳ ನಡೆದಿದೆ. ಘಟನೆಯಲ್ಲಿ 11 ಮಂದಿಗೆ ಗಾಯಗೊಂಡಿದ್ದಾರೆ. ಹಾಗಾದರೆ ಆ ನಾಯಿ ಏನು ಮಾಡಿದೆ..? ಈ ಸಂಘರ್ಷ ಶುರುವಾಗಿದ್ದು ಹೇಗೆ..? ಇದನ್ನು ತಿಳಿಯಲು ನೀವು ಈ ಸುದ್ದಿಯನ್ನು ಓದಲೇಬೇಕು.

A dog caused fight between the two groups.. 11 injured seriously..!
ಒಂದು ನಾಯಿ ಎರಡು ಗುಂಪುಗಳ ನಡುವೆ ಜಗಳ... ಮೆಣಸಿನ ಪುಡಿ, ಚಾಕುಗಳಿಂದ.. ಪರಸ್ಪರ ಹಲ್ಲೆ..!!
author img

By

Published : May 18, 2022, 10:26 PM IST

ವಿಜಯವಾಡ( ಆಂಧ್ರಪ್ರದೇಶ): ನಾಯಿಯೊಂದು ಎರಡು ಗುಂಪುಗಳ ನಡುವೆ ಜಗಳಕ್ಕೆ ಕಾರಣವಾಗಿದೆ. ಇದೇ ಕಾರಕ್ಕಾಗಿ ಮೆಣಸಿನ ಪುಡಿ, ಚಾಕುಗಳಿಂದ.. ಪರಸ್ಪರ ಹಲ್ಲೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ಈ ಮಹಾ ಸಂಘರ್ಷ ನಡೆದಿದೆ. ಕೆವಿಬಿಪುರಂ ವಲಯದ ಅಂಗೇರಿ ಹೊಂಡ ಗ್ರಾಮದ ನಿವಾಸಿ ಮಹೇಶ್ ಮನೆಯಿಂದ ಹೊರ ಬಂದು ಕೆಲಸಕ್ಕೆ ಹೋಗುತ್ತಿದ್ದ. ಸ್ವಲ್ಪ ದೂರ ನಡೆದ ನಂತರ.. ಒಂದು ನಾಯಿ ಅವರನ್ನ ಕಚ್ಚಲು ಬಂದಿತು. ಇದರಿಂದ ಆತ್ಮರಕ್ಷಣೆ ಮಾಡಿಕೊಳ್ಳಲು ಮಹೇಶ್​ ನಾಯಿಗೆ ಕಲ್ಲು ತೆಗೆದುಕೊಂಡು ಹೊಡೆದಿದ್ದಾನೆ. ಆ ಕಲ್ಲು ಗುರಿ ತಪ್ಪಿ ಮನೆಯೊಂದರ ಒಳಗೆ ಹೋಗಿದೆ.

ಆ ಕಲ್ಲು ಬೇರೆಯವರ ಮನೆಗೆ ಬಿದ್ದಿದ್ದರೆ ಅಷ್ಟೊಂದು ಸಮಸ್ಯೆಯೇನೂ ಆಗುತ್ತಿರಲಿಲ್ಲವೇನೋ.. ಆದರೆ ನಾಯಿಗೆ ಎಸೆದ ಕಲ್ಲು ಮಹೇಶನ ಶತ್ರುವಿನ ಮನೆಯೊಳಗೆ ಬಿದ್ದು ಬಿಟ್ಟಿದೆ. ಇದೇ ದೊಡ್ಡ ಹೊಡೆದಾಟಕ್ಕೆ ನಾಂದಿ ಹಾಡಿದೆ. ಮಹೇಶ ಎಸೆದ ಕಲ್ಲು ಇವರ ಮನೆಯ ಸಮೀಪದ ವೆಂಕಟರಾಮಯ್ಯ ಎಂಬುವವರ ಮನೆ ಮೇಲೆ ಬಿದ್ದಿದೆ. ಹೇಳಿ ಕೇಳಿ, ಈ ಎರಡು ಕುಟುಂಬಗಳ ನಡುವೆ ಹತ್ತು ವರ್ಷಗಳಿಂದ ಜಗಳ ನಡೆಯುತ್ತಿತ್ತು. ಇದೀಗ ನಾಯಿಗೆ ಎಸೆದ ಕಲ್ಲು.. ಮತ್ತೊಮ್ಮೆ ಆ ವಿವಾದ ಹಾಗೂ ವೈಷಮ್ಯ ಮುನ್ನೆಲೆಗೆ ಬರುವಂತೆ.

ಮೊದಲೇ ಇತ್ತು ದ್ವೇಷ.. ಬೇಕಿತ್ತು ಸಣ್ಣ ಕಿಡಿ: ಮಹೇಶ ಎಸೆದ ಕಲ್ಲಿ ಮನೆಯೊಳಗೆ ಬೀಳುತ್ತಿದ್ದಂತೆ ಕೂಡಲೇ ಸಿಟ್ಟಿಗೆದ್ದ ವೆಂಕಟರಾಮಯ್ಯ ಕುಟುಂಬಸ್ಥರು ಮಹೇಶ್ ಜೊತೆ ಜಗಳವಾಡಿದ್ದಾರೆ. ಈ ಜಗಳದ ಬಗ್ಗೆ ಮಹೇಶ್ ತನ್ನ ಕುಟುಂಬಸ್ಥರಿಗೆ ತಿಳಿಸಿದಾಗ ಎರಡೂ ಕುಟುಂಬಗಳ ನಡುವೆ ಹೊಡೆದಾಟವಾಗಿದೆ.

ಎರಡು ಕುಟುಂಬಗಳು ಪರಸ್ಪರ ಚಾಕು, ದೊಣ್ಣೆ, ಮೆಣಸಿನ ಪುಡಿಯಿಂದ ಹಲ್ಲೆ ನಡೆಸಿದ್ದಾರೆ. ಘರ್ಷಣೆಯಲ್ಲಿ ಎರಡೂ ಕಡೆಯ 11 ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶ್ರೀಕಾಳಹಸ್ತಿ ಏರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ವಿಷಯ ತಿಳಿದ ಪೊಲೀಸರು ಗ್ರಾಮಕ್ಕೆ ಆಗಮಿಸಿ ಭದ್ರತೆ ಒದಗಿಸಿದ್ದಾರೆ.

ಇದನ್ನು ಓದಿ:ಹೊಸ ಮದರಸಾಗಳಿಗೆ ಸರ್ಕಾರದ ಅನುದಾನ ಕಟ್​: ಉತ್ತರಪ್ರದೇಶ ಸರ್ಕಾರದ ಮಹತ್ವದ ನಿರ್ಧಾರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.