ನಾಗ್ಪುರ: ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಇನ್ನು ವೈದ್ಯರು ತಮ್ಮ ಕುಟುಂಬವನ್ನೂ ಲೆಕ್ಕಿಸದೆ ಇತರರ ಪ್ರಾಣ ಉಳಿಸಲು ಪಣ ತೊಟ್ಟಿದ್ದಾರೆ. ಇದೀಗ ಮಹಾರಾಷ್ಟ್ರದ ಬಾಲಾಘಾಟ್ನ ಓರ್ವ ವೈದ್ಯೆ ಪ್ರದ್ನ್ಯಾ ಎಂಬುವರು ರೋಗಿಗಳಿಗೆ ಚಿಕಿತ್ಸೆ ನೀಡಲು ತಮ್ಮ ಸ್ಕೂಟಿಯಲ್ಲಿ ಬರೋಬ್ಬರಿ 180 ಕಿ.ಮೀ, ಪ್ರಯಾಣ ಬೆಳೆಸುತ್ತಿದ್ದಾರೆ.
ಬಾಲಘಾಟ್‌ನ ಡಾ. ಪ್ರದ್ನ್ಯಾ ಘರ್ಡೆ ಎಂಬುವರು ನಾಗ್ಪುರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಈ ಸಂದರ್ಭದಲ್ಲಿ ತಮ್ಮ ಊರಿಗೆ ತೆರಳಿದ್ದರು. ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಅವರು ಜನರಿಗೆ ಚಿಕಿತ್ಸೆ ನೀಡಲು ನಿರ್ಧರಿಸಿದರು. ಹೀಗಾಗಿ ಅವರು ಸುಮಾರು 180 ಕಿ.ಮೀ. ಪ್ರಯಾಣ ಬೆಳೆಸಿ ಜನರಿಗೆ ಆರೈಕೆ ಮಾಡುತ್ತಿದ್ದಾರೆ.
ಇದನ್ನು ಓದಿ: ಭಾರತದಲ್ಲಿ ಕೊರೊನಾರ್ಭಟ: ಒಂದೇ ದಿನ 2,263 ಮಂದಿ ಬಲಿ.. 3,32,730 ಜನರಿಗೆ ಸೋಂಕು
ಮಧ್ಯಪ್ರದೇಶದಲ್ಲಿ ಲಾಕ್ಡೌನ್ ಘೋಷಣೆ ಮಾಡಿದಾಗ ನಾಗ್ಪುರಕ್ಕೆ ಹೇಗೆ ತೆರಳುವುದು ಎಂದು ಅವರು ಚಿಂತಿತರಾಗಿದ್ದಾಗ ತಮ್ಮ ಸ್ಕೂಟಿಯನ್ನ ಬಳಸಲು ನಿರ್ಧರಿಸಿದರು. ಮೊಪೆಡ್ ಬೈಕ್‌ನಲ್ಲಿ ಪ್ರಯಾಣಿಸುವ ಅವರ ನಿರ್ಧಾರವನ್ನು ಆರಂಭದಲ್ಲಿ ಕುಟುಂಬ ವಿರೋಧಿಸಿತು. ಆದರೆ ಪರಿಸ್ಥಿತಿಯ ಗಂಭೀರತೆಯನ್ನು ಅವರು ವಿವರಿಸುತ್ತಿದ್ದಂತೆ, ಒಪ್ಪಿಗೆ ನೀಡಿದರು.
ಡಾ. ಪ್ರದ್ನ್ಯಾ ಅವರಂತಹ ಅನೇಕ ವೈದ್ಯರು ತಮ್ಮ ಜೀವದ ಬಗ್ಗೆ ಕಾಳಜಿ ವಹಿಸದೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ.