ETV Bharat / bharat

ಚಿಕಿತ್ಸೆಗೆ ಬಂದ ಮಹಿಳೆ ಮೇಲೆ ಕಾಮುಕ ವೈದ್ಯನಿಂದ ಅತ್ಯಾಚಾರ - a doctor allegedly raped woman patient in rajasthan

ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೋರ್ವಳು ಚಿಕಿತ್ಸೆ ಪಡೆದುಕೊಳ್ಳಲು ಖಾಸಗಿ ಕ್ಲಿನಿಕ್​ಗೆ ಬಂದಾಗ ಅವರ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದೆ.

Doctor rape women patient
Doctor rape women patient
author img

By

Published : Aug 13, 2022, 6:01 PM IST

ಜೈಪುರ(ರಾಜಸ್ಥಾನ): ಚಿಕಿತ್ಸೆ ಪಡೆದುಕೊಳ್ಳಲು ಕ್ಲಿನಿಕ್​​ಗೆ ಬಂದ ಅನಾರೋಗ್ಯ ಪೀಡಿತ ಮಹಿಳೆಯೋರ್ವಳ ಮೇಲೆ ಕಾಮುಕ ವೈದ್ಯ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜೈಪುರದ ಕರ್ಧಾನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಚಿಕಿತ್ಸೆ ಪಡೆದುಕೊಳ್ಳಲು ಬಂದಿದ್ದ ತನಗೆ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧಿ ನೀಡಿರುವ ವೈದ್ಯ ದುಷ್ಕೃತ್ಯವೆಸಗಿದ್ದಾರೆಂದು ಸಂತ್ರಸ್ತೆ ಆರೋಪಿಸಿದ್ದಾರೆ. ಮಹಿಳೆಗೆ ಪ್ರಜ್ಞೆ ಬಂದ ಬಳಿಕ ಮನೆಗೆ ತೆರಳಿ ಕುಟುಂಬಸ್ಥರ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ. ಜೂನ್​​ 27ರಂದು ಈ ಘಟನೆ ನಡೆದಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ಬಿಸಿನೆಸ್ ಮಾತುಕತೆ ನಡೆಸುವ ಸೋಗಿನಲ್ಲಿ ಪರಿಚಯಸ್ಥ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಕಾಮುಕ

ಕರ್ಧಾನಿ ಪೊಲೀಸ್ ಠಾಣಾಧಿಕಾರಿ ಬಿ.ಎಲ್ ಮೀನಾ ಅವರ ಪ್ರಕಾರ, ಸರ್ನಾ ಡುಂಗರ್​ ಪ್ರದೇಶದಲ್ಲಿ ವಾಸವಾಗಿದ್ದ ಮಹಿಳೆ ಅನಾರೋಗ್ಯಕ್ಕೊಳಗಾಗಿದ್ದರು. ಮನೆ ಸಮೀಪದ ಖಾಸಗಿ ಕ್ಲಿನಿಕ್​​ಗೆ ಚಿಕಿತ್ಸೆ ಪಡೆದುಕೊಳ್ಳಲು ತೆರಳಿದ್ದರು. ವೈದ್ಯ ಕುಡಿಯಲು ತಂಪು ಪಾನೀಯ ನೀಡಿದ್ದಾರೆ. ಇದರ ಬೆನ್ನಲ್ಲೇ ಮಹಿಳೆ ಪ್ರಜ್ಞೆ ತಪ್ಪಿದ್ದು, ವೈದ್ಯ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ತಿಳಿಸಿದ್ದಾರೆ.

ಕೃತ್ಯಕ್ಕೆ ಸಂಬಂಧಿಸಿದಂತೆ ಮಹಿಳೆ ದೂರು ದಾಖಲು ಮಾಡಿದ್ದು, ಅತ್ಯಾಚಾರದ ಬಗ್ಗೆ ಹೊರಗಡೆ ಬಾಯಿ ಬಿಡದಂತೆ ತನಗೆ ಬೆದರಿಕೆ ಸಹ ಹಾಕಿರುವ ಬಗ್ಗೆ ಮಹಿಳೆ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.