ETV Bharat / bharat

ಮಹಿಳೆಯರ ಮೇಲೆ ಹೆಚ್ಚಿದ ಕಿರುಕುಳ:  ಹೀಗೆ ಹೇಳ್ತಿದೆ ವಿಶ್ವಸಂಸ್ಥೆ ವರದಿ! - ಮಹಿಳೆಯರ ಮೇಲೆ ಹೆಚ್ಚಿದ ಕಿರುಕುಳ ವರದಿ

ಈ ಹೊಸ ವಿಶ್ಲೇಷಣೆಯನ್ನು ಯುಎನ್ ವುಮೆನ್, ಯುಎನ್‌ಎಫ್‌ಪಿಎ ಮತ್ತು ವಿಶ್ಲೇಷಣಾ ಕಂಪನಿ ಕ್ವಿಲ್ಟ್ ಬಿಡುಗಡೆ ಮಾಡಿದೆ. ಎಐ - ಮಹಿಳೆಯರು ತಮ್ಮ ಸುರಕ್ಷತೆಗಾಗಿ ಎಷ್ಟು ವ್ಯಾಪಕವಾಗಿ ಭಯಪಡುತ್ತಾರೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದೆ.

ಮಹಿಳೆಯರ ಮೇಲೆ ಹೆಚ್ಚಿದ ಕಿರುಕುಳ
ಮಹಿಳೆಯರ ಮೇಲೆ ಹೆಚ್ಚಿದ ಕಿರುಕುಳ
author img

By

Published : Mar 6, 2021, 5:20 PM IST

ಏಷ್ಯಾ-ಪೆಸಿಫಿಕ್ ಪ್ರದೇಶದ ಹೊಸ ವಿಶ್ಲೇಷಣೆಯು ಕೊರೊನಾ ಸಾಂಕ್ರಾಮಿಕದ ಮಧ್ಯೆ ಡಿಜಿಟಲ್ ಮೀಡಿಯಾ ದುರ್ಬಳಕೆ ಮತ್ತು ಮಹಿಳೆಯರ ಮೇಲಿನ ಕಿರುಕುಳದ ಬಗ್ಗೆ ಬೆಳಕು ಹಾಯಿಸಿದೆ. ಈ ಸಂಶೋಧನೆಗಳು ಜಾಗತಿಕ ಬಿಕ್ಕಟ್ಟಿನ ಮಧ್ಯೆ ಮಹಿಳೆಯರ ಸುರಕ್ಷತೆ ಮತ್ತು ಕಲ್ಯಾಣದ ಬಗ್ಗೆ ದೀರ್ಘಕಾಲದ ಕಾಳಜಿಯನ್ನು ತೋರಿಸುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯ ಲಾಕ್‌ಡೌನ್ ಸಮಯದಲ್ಲಿ ನೆರವು ಹೆಚ್ಚಾಗಿದೆ ಎಂದು ಅಧ್ಯಯನವು ಕಂಡು ಹಿಡಿದಿದೆ.

ಈ ಹೊಸ ವಿಶ್ಲೇಷಣೆಯನ್ನು ಯುಎನ್ ವುಮೆನ್, ಯುಎನ್‌ಎಫ್‌ಪಿಎ ಮತ್ತು ವಿಶ್ಲೇಷಣಾ ಕಂಪನಿ ಕ್ವಿಲ್ಟ್ ಬಿಡುಗಡೆ ಮಾಡಿದೆ. ಎಐ - ಮಹಿಳೆಯರು ತಮ್ಮ ಸುರಕ್ಷತೆಗಾಗಿ ಎಷ್ಟು ವ್ಯಾಪಕವಾಗಿ ಭಯಪಡುತ್ತಾರೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದೆ.

ಅಧ್ಯಯನವು ಬಾಂಗ್ಲಾದೇಶ, ಭಾರತ, ಇಂಡೋನೇಷ್ಯಾ, ಮಲೇಷ್ಯಾ, ನೇಪಾಳ, ಫಿಲಿಪೈನ್ಸ್, ಸಿಂಗಾಪುರ್ ಮತ್ತು ಥಾಯ್ಲೆಂಡ್​ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಆನ್‌ಲೈನ್ ವಿಷಯದ ಜೊತೆಗೆ ಇಂಟರ್ನೆಟ್ ಹುಡುಕಾಟ ಡೇಟಾವನ್ನು ಅಧ್ಯಯನ ಮಾಡಿದೆ. ಈ ವಿಶ್ಲೇಷಣೆಯು ಸೆಪ್ಟೆಂಬರ್ 2019 ರಿಂದ ನವೆಂಬರ್ 2020 ರವರೆಗಿನ ಮಾಹಿತಿಯನ್ನು ಒಳಗೊಂಡಿದೆ. ಸುಮಾರು 20.5 ಮಿಲಿಯನ್ ಅನನ್ಯ ಹುಡುಕಾಟಗಳು, ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ 3,500 ಕೀವರ್ಡ್​ಗಳು ಮತ್ತು ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಮತ್ತು ಶೇರ್‌ಚಾಟ್‌ನಲ್ಲಿ 2,000 ಪೋಸ್ಟ್‌ಗಳನ್ನು ಒಳಗೊಂಡಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದ ಹುಡುಕಾಟಗಳು ದೈಹಿಕ ಕಿರುಕುಳ ಚಿಹ್ನೆಗಳು, ಹಿಂಸಾತ್ಮಕ ಸಂಬಂಧದಂತಹ ಮುಂತಾದ ವಿಚಾರಗಳನ್ನು ಒಳಗೊಂಡಿವೆ. ಮಲೇಷ್ಯಾದಲ್ಲಿ ಶೇಕಡಾ 47, ಫಿಲಿಪೈನ್ಸ್‌ನಲ್ಲಿ 63 ಮತ್ತು ನೇಪಾಳದಲ್ಲಿ 55 ಪ್ರತಿಶತದಷ್ಟು ದೌರ್ಜನ್ಯ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗದ ಮೊದಲು ಮತ್ತು ಸೆಪ್ಟೆಂಬರ್ 2020ರ ಸಮಯದಲ್ಲಿ ಹಿಂಸಾತ್ಮಕ ಪತಿ ಅಥವಾ ಹಿಂಸಾತ್ಮಕ ಪಾಲುದಾರ ಎಂಬ ಕುರಿತ ಪ್ರಶ್ನೆಗಳು ಹೆಚ್ಚಿನ ಹುಡುಕಾಟಕ್ಕೊಳಗಾಗಿವೆ.

ಲೈಂಗಿಕ ಕಿರುಕುಳ ಹುಡುಕಾಟಗಳು ಹೆಚ್ಚುತ್ತಿವೆ. ಅದೇ ಸಮಯದಲ್ಲಿ, ಟ್ರೋಲಿಂಗ್, ಲೈಂಗಿಕ ಕಿರುಕುಳ ಮತ್ತು ಬಲಿಪಶು - ದೂಷಣೆಯಂತಹ ಆನ್‌ಲೈನ್ ದುರ್ಬಳಕೆ ಕೂಡ ಹೆಚ್ಚಾಗಿದೆ.

ಈ ಅಧ್ಯಯನವು ಸಾಮಾಜಿಕ ಮಾಧ್ಯಮಗಳತ್ತ ಗಮನಹರಿಸಿತು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸರ್ಕಾರದ ಪ್ರತಿಕ್ರಿಯೆಗಳ ಬಗ್ಗೆ ವ್ಯಾಪಕ ಹತಾಶೆ ಕಂಡು ಬಂದಿದೆ. ಜೊತೆಗೆ ನ್ಯಾಯ ಸಂಸ್ಥೆಗಳಲ್ಲಿ ವ್ಯಾಪಕ ಅಪನಂಬಿಕೆ ಕಂಡುಬಂದಿದೆ. ಅನೇಕ ಮಹಿಳೆಯರು ಬೆಂಬಲಕ್ಕಾಗಿ ಹೆಣಗಾಡುತ್ತಾರೆ. ಕೌಟುಂಬಿಕ ಹಿಂಸಾಚಾರದ ಹಾಟ್‌ಲೈನ್​ನಂತಹ ಸಹಾಯ-ಹುಡುಕುವ ಕೀವರ್ಡ್‌ಗಳ ಹುಡುಕಾಟಗಳು ವಿಶ್ಲೇಷಿಸಲ್ಪಟ್ಟ ಬಹುತೇಕ ಎಲ್ಲ ದೇಶಗಳಲ್ಲಿ ಹೆಚ್ಚಾಗಿದೆ.

ಅದೇ ಸಮಯದಲ್ಲಿ, ಆನ್‌ಲೈನ್ ಬೆಂಬಲ ಗುಂಪುಗಳು, ವೈಯಕ್ತಿಕ ಕಥೆಗಳ ಹಂಚಿಕೆ, ವಕಾಲತ್ತು ಅಭಿಯಾನಗಳು ಮತ್ತು ನ್ಯಾಯಕ್ಕಾಗಿ ಕರೆಗಳು ಸೇರಿದಂತೆ ಬದುಕುಳಿದವರಿಗೆ ಆನ್‌ಲೈನ್ ಬೆಂಬಲವೂ ಹೆಚ್ಚಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಪರಿಹರಿಸಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ವಹಿಸಬಹುದಾದ ನಿರ್ಣಾಯಕ ಪಾತ್ರವನ್ನು ಅಧ್ಯಯನವು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಯುಎನ್‌ಎಫ್‌ಪಿಎ ಏಷ್ಯಾ - ಪೆಸಿಫಿಕ್ ಪ್ರಾದೇಶಿಕ ನಿರ್ದೇಶಕ ಜಾರ್ನ್ ಆ್ಯಂಡರ್ಸನ್ ಹೇಳಿದ್ದಾರೆ.

ಮುಖಾಮುಖಿ ಸಂವಹನಗಳನ್ನು ಸೀಮಿತಗೊಳಿಸಬೇಕಾದ ಸಮಯದಲ್ಲಿ, ಮಾಹಿತಿ ಸಂಗ್ರಹಿಸಲು ಮತ್ತು ಹುಡುಕಲು, ಹಾಗೆಯೇ ಬೆಂಬಲವನ್ನು ಹುಡುಕಲು ಮತ್ತು ಒದಗಿಸಲು ಆನ್‌ಲೈನ್ ತಂತ್ರಜ್ಞಾನಗಳ ಸಾಮರ್ಥ್ಯವನ್ನು ಈ ಬಿಕ್ಕಟ್ಟು ಎತ್ತಿ ತೋರಿಸಿದೆ. ಬಿಕ್ಕಟ್ಟು ಮತ್ತು ಬಿಕ್ಕಟ್ಟಿಲ್ಲದ ಅವಧಿಗಳಲ್ಲಿ, ದುರ್ಬಲ ಗುಂಪುಗಳಲ್ಲಿ ಇಂಟರ್ನೆಟ್ ನಡವಳಿಕೆ, ಸ್ಮಾರ್ಟ್‌ಫೋನ್ ಬಳಕೆ ಮತ್ತು ಆನ್‌ಲೈನ್ ಸಹಾಯ - ಬೇಡಿಕೆಯ ನಡವಳಿಕೆಯ ಕುರಿತು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ದೊಡ್ಡ ಡೇಟಾ ಮತ್ತು ಆನ್‌ಲೈನ್ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.