ಹೈದರಾಬಾದ್: ಸಿಪಿಎಂ ಒಮ್ಮೆ ಪಶ್ಚಿಮ ಬಂಗಾಳದ ರಾಜಕೀಯ ರಂಗದಲ್ಲಿ ಪ್ರಾಬಲ್ಯ ಸಾಧಿಸಿತು. 1972 ರಿಂದ 2006ರವರೆಗೆ ರಾಜ್ಯದಲ್ಲಿ ಸತತ ಏಳು ಬಾರಿ ಸರ್ಕಾರ ರಚಿಸಿದ ಸಿಪಿಎಂಗೆ ಅಜೇಯ ಕೋಟೆಯಾಗಿತ್ತು. ಈಗ ಇದೇ ನಾಡಲ್ಲಿ ಕಾಮ್ರೇಡ್ಗಳು ನೆಲಕಚ್ಚಿದ್ದಾರೆ.
2011ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸಿಪಿಎಂಗೆ ಸೋಲಿನ ರುಚಿ ಉಣಿಸುವ ಮೂಲಕ ಕಮ್ಯುನಿಸ್ಟ್ ಪಕ್ಷದ ಅವನತಿ ಪ್ರಾರಂಭವಾಯಿತು. 2011ರ ಚುನಾವಣೆಯ ನಂತರ ಕಮ್ಯುನಿಸ್ಟರ ಭವಿಷ್ಯ ಸರರ್ನೆ ಪಾತಳ ಕಂಡಿತು.
2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶಗಳ ವರದಿಗಳ ಪ್ರಕಾರ, ಪಕ್ಷವು ಸಂಪೂರ್ಣವಾಗಿ ನಾಶವಾಗಿದೆ. ಅದು ಕೇವಲ ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಪಶ್ಚಿಮ ಬಂಗಾಳದ ಸಿಪಿಎಂಗೆ ಇದು ನಿಜವಾಗಿಯೂ ಕರಾಳ ದಿನವಾಗಿದೆ. ರಾಜ್ಯದ ಕಮ್ಯುನಿಸ್ಟರ ರಾಜಕೀಯಕ್ಕೆ ಭಾರಿ ಹೊಡೆತ ಬಿದ್ದಿದೆ.