ಹೈದರಾಬಾದ್(ತೆಲಂಗಾಣ): ಮನೆ ಮುಂದೆ ಟು - ಲೆಟ್ ಬೋರ್ಡ್ ಹಾಕಿದ್ರೆ ಪ್ರತಿದಿನ ಐದಾರು ಮಂದಿ ಬಂದು ರೂಂ ನೋಡುವುದು ಸರ್ವೆ ಸಾಮಾನ್ಯ. ಹೀಗೆ ಬಂದವರಿಗೆಲ್ಲ ಅವರ ಜೊತೆ ಹೋಗಿ, ಮನೆ ತೋರಿಸುವುದು ಸ್ವಲ್ಪ ಕಷ್ಟದ ಕೆಲಸ. ಹೀಗಾಗಿ, ಬೀಗದ ಕೈ ಅವರಿಗೆ ನೀಡಿ, ನೀವೇ ನೋಡ್ಕೋಳ್ಳಿ ಎಂದು ಮಾಲೀಕರು ಹೇಳುತ್ತಾರೆ. ಆದರೆ,ಇಂತಹ ತಪ್ಪು ನೀವೂ ಮಾಡುತ್ತಿದ್ದರೆ ಈ ಸ್ಟೋರಿಯನ್ನೊಮ್ಮೆ ನೋಡಿ.
ಹೈದರಾಬಾದ್ನ ಎಸ್ಆರ್ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಟು-ಲೆಟ್ ಬೋರ್ಡ್ ಹಾಕಿದ್ದ ಮನೆಗೆ ಬೈಕ್ನಲ್ಲಿ ಬಂದ ಜೋಡಿವೊಂದು ಮನೆಯ ಹೊರಗಡೆ ನಿಂತಿದ್ದ ಮಾಲೀಕನೊಂದಿಗೆ ಮಾತನಾಡಿದ್ದಾರೆ. ಈ ವೇಳೆ, ಅವರು ದಂಪತಿ ಎಂದು ಭಾವಿಸಿರುವ ಮಾಲೀಕ ಎರಡನೇ ಮಹಡಿಯಲ್ಲಿ ಮನೆ ಖಾಲಿ ಇದೆ ಎಂದು ಹೇಳಿ, ಅವರ ಕೈಗೆ ಕೀ ನೀಡಿದ್ದಾನೆ. ಅಲ್ಲಿಗೆ ತೆರಳಿರುವ ಜೋಡಿ, ಸ್ವಲ್ಪ ಸಮಯದ ನಂತರ ಕೆಳಗೆ ಬಂದಿದ್ದು, ಮಾಲೀಕರ ಹತ್ತಿರ ಏನೋ ಹೇಳಿ, ಮತ್ತೆ ಮೇಲೆ ಹೋಗಿದೆ.
ಇದನ್ನೂ ಓದಿ: ಅಂಗಡಿಯೊಂದರಲ್ಲಿ ಕುಳಿತಿದ್ದ ಯುವಕನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ.. ಭೀಕರ ವಿಡಿಯೋ ವೈರಲ್!
ರೋಮ್ಯಾನ್ಸ್ನಲ್ಲಿ ಮಗ್ನವಾದ ಜೋಡಿ: ಮತ್ತೊಮ್ಮೆ ಮೇಲೆ ಹೋಗಿರುವ ಜೋಡಿ, ರೊಮ್ಯಾನ್ಸ್ನಲ್ಲಿ ಮಗ್ನವಾಗಿದೆ. ತುಂಬಾ ಹೊತ್ತಿನವರೆಗೆ ಅವರು ಕೆಳಗೆ ಬಾರದ ಕಾರಣ ಮನೆಯ ಮುಂದೆ ನಿಂತಿದ್ದ ಮಾಲೀಕ ಮೇಲೆ ಹೋಗಿದ್ದಾನೆ. ಈ ವೇಳೆ ಜೋಡಿಯ ದೃಶ್ಯ ನೋಡಿ, ದಿಢೀರ್ ಶಾಕ್ಗೊಳಗಾಗಿದ್ದಾನೆ. ಇದರ ಬೆನ್ನಲ್ಲೇ ಇಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದಾದ ಬಳಿಕ ಮನೆಯ ಹೊರಗೆ ಮತ್ತು ರೂಂ ಮುಂದೆ ಅಳವಡಿಕೆ ಮಾಡಿರುವ ಸಿಟಿಸಿವಿ ಕ್ಯಾಮೆರಾದಲ್ಲಿ ಇವರ ದೃಶ್ಯ ಅದರಲ್ಲಿ ಸೆರೆಯಾಗಿದೆ. ಇದೀಗ ಪೊಲೀಸ್ ಠಾಣೆಗೆ ತೆರಳಿರುವ ಮನೆ ಮಾಲೀಕ ಸಾಕ್ಷಿ ಸಮೇತವಾಗಿ ದೂರು ದಾಖಲು ಮಾಡಿದ್ದಾರೆ.