ETV Bharat / bharat

Facebook love.. ಪ್ರೀತಿಯ ಹೆಸರಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​​ಗೆ ₹1 ಕೋಟಿ ವಂಚಿಸಿದ 'ದಂಪತಿ'

author img

By

Published : Nov 24, 2021, 3:44 PM IST

ಕೆಲವು ದಾಖಲೆ ಮಾಡಿಸಬೇಕು. ಇದಕ್ಕಾಗಿ 1 ಕೋಟಿ ರೂಪಾಯಿ ಬೇಕು ಎಂದು ತನ್ನ ಬ್ಯಾಂಕ್​ ಖಾತೆಯ ಸಂಖ್ಯೆ ನೀಡಿದ್ದಾನೆ. ವಿಜಯ್​ ಹಣವನ್ನು ವರ್ಗಾವಣೆ ಮಾಡಿದ್ದಾನೆ. ಕೆಲ ದಿನಗಳ ಬಳಿಕ ಕಲ್ಯಾಣಿ ಶ್ರೀ ನಾಪತ್ತೆಯಾಗಿದ್ದಾಳೆ..

ಹೈದರಾಬಾದ್: 'ಫೇಸ್​ಬುಕ್​ ಪ್ರೀತಿ'ಯಿಂದಾಗಿ ಹೈದರಾಬಾದ್​ನ ಸಾಫ್ಟವೇರ್​ ಇಂಜಿನಿಯರೊಬ್ಬ 1 ಕೋಟಿ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ವಿಶೇಷ ಅಂದರೆ ಫೇಸ್​ಬುಕ್​ ಪ್ರೀತಿ ಹೆಸರಲ್ಲಿ ವಂಚಿಸಿದ್ದು ಹುಡುಗಿಯಲ್ಲ, ಓರ್ವ ದಂಪತಿ..

ಎಂಎನ್​ಸಿ ಕಂಪನಿಯೊಂದರಲ್ಲಿ ಸಾಫ್ಟವೇರ್​ ಇಂಜಿನಿಯರ್​ ಆಗಿರುವ ಸಿಕಂದರಾಬಾದ್​ ನಿವಾಸಿಯಾದ ವಿಜಯ್​(40) ಎಂಬುವರು ವಂಚನೆಗೊಳಗಾದವರು. ಯಾರ್ಲಗಡ್ಡ ದಾಸು ದಂಪತಿ ಮೋಸ ಮಾಡಿದ ಆರೋಪಿಗಳು.

ಅವಿವಾಹಿತರಾಗಿರುವ ವಿಜಯ್​ಗೆ 1 ವರ್ಷದ ಹಿಂದೆ ಫೇಸ್​ಬುಕ್​ನಲ್ಲಿ ಕಲ್ಯಾಣಿ ಶ್ರೀ ಎಂಬ ಹೆಸರಲ್ಲಿ ಯಾರ್ಲಗಡ್ಡ ದಾಸು ರಿಕ್ವೆಸ್ಟ್ ಕಳಿಸಿದ್ದಾನೆ. ವಿಜಯ್​ ರಿಕ್ವೆಸ್ಟ್​ ಅನ್ನು ಸಮ್ಮಿತಿಸಿದ್ದಾರೆ. ಬಳಿಕ ಇಬ್ಬರ ಮಧ್ಯೆ ಪರಸ್ಪರ ಚಾಟಿಂಗ್​, ಮಾತುಕತೆ ನಡೆದಿದೆ.

ಬಳಿಕ ಕಲ್ಯಾಣಿ ಶ್ರೀ ಹೆಸರಿನ ದಾಸು ಫೇಸ್​ಬುಕ್​ನಲ್ಲಿ ವಿಜಯ್​ ಬಳಿ ಪ್ರೀತಿ ನಿವೇದನೆ ಮಾಡಿಕೊಂಡಿದ್ದಾರೆ. ಇದನ್ನು ನಂಬಿದ ವಿಜಯ್​ ಒಪ್ಪಿಗೆ ನೀಡಿದ್ದಾನೆ. ಕೆಲ ದಿನಗಳ ಬಳಿಕ ತನ್ನ ಬಳಿ 50 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ. ಅದಕ್ಕೆ ಕೆಲ ಅಡಚಣೆ ಇದೆ.

ತನ್ನ ಸ್ವತ್ತಾಗಲು ಕೆಲವು ದಾಖಲೆ ಮಾಡಿಸಬೇಕು. ಇದಕ್ಕಾಗಿ 1 ಕೋಟಿ ರೂಪಾಯಿ ಬೇಕು ಎಂದು ತನ್ನ ಬ್ಯಾಂಕ್​ ಖಾತೆಯ ಸಂಖ್ಯೆ ನೀಡಿದ್ದಾನೆ. ವಿಜಯ್​ ಹಣವನ್ನು ವರ್ಗಾವಣೆ ಮಾಡಿದ್ದಾನೆ.

ಕೆಲ ದಿನಗಳ ಬಳಿಕ ಕಲ್ಯಾಣಿ ಶ್ರೀ ನಾಪತ್ತೆಯಾಗಿದ್ದಾಳೆ. ಪರಿಶೀಲನೆ ಬಳಿಕ ತಾನು ಮೋಸ ಹೋಗಿದ್ದು ವಿಜಯ್​ಗೆ ಗೊತ್ತಾಗಿದೆ. ಈ ಬಗ್ಗೆ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.