ಗುಂಟೂರು(ತೆಲಂಗಾಣ): ಅಮೆರಿಕದಲ್ಲಿ ಕೆಲಸ ಮಾಡ್ತಿದ್ದ ಯುವಕನೊಬ್ಬ ಬರೋಬ್ಬರಿ 8 ಯುವತಿಯರ ಜೊತೆ ಮದುವೆ ಮಾಡಿಕೊಂಡು ಮೋಸ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇದೀಗ ಆತನ ನಿಜ ಬಣ್ಣ ಬಯಲಾಗಿದ್ದು, ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಮೂಲತಃ ವಿಜಯವಾಡದ 46 ವರ್ಷದ ವ್ಯಕ್ತಿ ಸದ್ಯ ಅಮೆರಿಕದಲ್ಲಿ ವಾಸವಾಗಿರುವುದಾಗಿ ತಿಳಿದು ಬಂದಿದೆ.
ಲಂಡನ್‌ನಲ್ಲಿ ಎಂಬಿಎ ವ್ಯಾಸಂಗ ಮಾಡಿ ಅಮೆರಿಕದಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿರುವ ವ್ಯಕ್ತಿ ವರ್ಷದಲ್ಲಿ ಎರಡು ತಿಂಗಳು ಹೈದರಾಬಾದ್ಗೆ ಆಗಮಿಸುತ್ತಾರೆ. ಈ ವೇಳೆ ಯುವತಿಯರ ಜೊತೆ ಮದುವೆ ಮಾಡಿಕೊಂಡು, ಅವರಿಂದ ಲಕ್ಷ ಲಕ್ಷ ರೂಪಾಯಿ ವರದಕ್ಷಿಣೆ ಹಾಗೂ ಚಿನ್ನಾಭರಣ ಪಡೆದುಕೊಳ್ಳುತ್ತಾನೆ. ಎರಡು ತಿಂಗಳ ಕಾಲ ಐಷಾರಾಮಿ ಜೀವನ ನಡೆಸಿ, ಅಮೆರಿಕಕ್ಕೆ ವಾಪಸ್ ಹೋಗುತ್ತಾರೆ.
ಎರಡು ತಿಂಗಳ ಐಷಾರಾಮಿ ಜೀವನ: ಮದುವೆ ಮಾಡಿಕೊಂಡು ಎರಡು ತಿಂಗಳ ಕಾಲ ಐಷಾರಾಮಿ ಜೀವನ ನಡೆಸಿ, ಅವರ ನಗ್ನ ಫೋಟೋ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದುಕೊಳ್ಳುತ್ತಾನೆ. ಈತನ ಬಗ್ಗೆ ಯುವತಿಯರಿಗೆ ಗೊತ್ತಾಗುತ್ತಿದ್ದಂತೆ ಅವರಿಗೆ ಹಣ ನೀಡಿ ಸೆಟಲ್ಮೆಂಟ್ ಮಾಡಿಕೊಳ್ಳುತ್ತಾನೆ. ಅಥವಾ ವಿಚ್ಛೇದನ ನೀಡುತ್ತಾನೆ. ಪೊಲೀಸ್ ಠಾಣೆಯಲ್ಲಿ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದಾಗ ಮಹಿಳೆಯರ ಬೆತ್ತಲೆ ಚಿತ್ರ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಾನೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ: ಈ ವ್ಯಕ್ತಿಯಿಂದ ಮೋಸ ಹೋಗಿರುವ ಸಂತ್ರಸ್ತ ಮಹಿಳೆಯರು ಎರಡು ದಿನಗಳ ಹಿಂದೆ ಗುಂಟೂರು ದಿಶಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 2019ರಲ್ಲಿ ಎಂಬಿಎ ವ್ಯಾಸಂಗ ಮಾಡಿರುವ ಯುವತಿಯಿಂದ ವರದಕ್ಷಿಣೆಯಾಗಿ 25 ಲಕ್ಷ ರೂ, 500 ಗ್ರಾಂ. ಚಿನ್ನಾಭರಣ ತೆಗೆದುಕೊಂಡು ಮದುವೆಯಾಗಿ ಎರಡು ತಿಂಗಳ ನಂತರ ಬಿಟ್ಟು ಹೋಗಿದ್ದಾನೆ.
ಇದಾದ ಬಳಿಕ ಗುಂಟೂರಿನ ಶ್ಯಾಮಲಾನಗರದ ಯುವತಿ ಜೊತೆ ಮದುವೆ ಮಾಡಿಕೊಂಡು 80 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ್ದಾನೆ. ಪ್ರಾಥಮಿಕ ಮಾಹಿತಿ ಪ್ರಕಾರ ಇಲ್ಲಿಯವರೆಗೆ ಒಟ್ಟು ಎಂಟು ಯುವತಿಯರೊಂದಿಗೆ ಮದುವೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿರಿ: PSI scam: ಪರೀಕ್ಷಾ ಕೇಂದ್ರದ ಶೌಚಾಲಯದಲ್ಲಿ ಬ್ಲ್ಯೂಟೂತ್ ಡಿವೈಸ್ ಬಚ್ಚಿಟ್ಟಿದ್ದನಂತೆ ಅಭ್ಯರ್ಥಿ!
ಹೈದರಾಬಾದ್, ಸತ್ತೇನಪಲ್ಲಿ, ವಿಶಾಖಪಟ್ಟಣಂ, ನರಸಾರಾವ್‌ಪೇಟೆ, ಪಥಗುಂಟೂರು ಸೇರಿ ಅಮೆರಿಕದಲ್ಲಿ ಇಬ್ಬರು, ಲಂಡನ್‌ನಲ್ಲಿ ಓರ್ವ ಯುವತಿ ಜೊತೆ ಮದುವೆ ಮಾಡಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.