ಪುಣೆ(ಮಹಾರಾಷ್ಟ್ರ): ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನ ಮೃತದೇಹದ ಅಂತ್ಯಸಂಸ್ಕಾರದ ವೇಳೆ ಅಗ್ನಿ ಅವಘಡ ಸಂಭವಿಸಿ 11 ಮಂದಿಗೆ ಸುಟ್ಟಗಾಯಗಳಾಗಿರುವ ಘಟನೆ ಪುಣೆಯಲ್ಲಿ ನಡೆಯಿತು. ಶೇಕಡಾ 30ರಿಂದ 35ರಷ್ಟು ಸುಟ್ಟ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪುಣೆಯ ಮುಂಡ್ವಾ ಪ್ರದೇಶದ ದೀಪಕ್ ಪ್ರಕಾಶ್ ಕಾಂಬ್ಳೆ (45) ಮಹಾತ್ಮ ಫುಲೆ ಕಾಲೋನಿಯ ತಡಿವಾಲಾ ರಸ್ತೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಅಂತ್ಯಕ್ರಿಯೆಯ ವೇಳೆ ಚಿತೆಗೆ ಬೆಂಕಿ ಹಚ್ಚುವಾಗ ಸೀಮೆಎಣ್ಣೆಯ ಕ್ಯಾನ್‌ಗೆ ಬೆಂಕಿ ಹೊತ್ತಿಕೊಂಡು ಅವಘಡ ಜರುಗಿದೆ.
ಕೈಲಾಶ್ ಸ್ಮಶಾನದಲ್ಲಿ ಶನಿವಾರ ಸಂಜೆ ಸುಮಾರು 7 ಗಂಟೆಗೆ ಘಟನೆ ನಡೆದಿದೆ. ಕಾಂಬ್ಳೆ ಅವರ ಪುತ್ರನ ಪ್ರಕಾರ, ಕುಟುಂಬ ಸದಸ್ಯರು ಸೇರಿದಂತೆ ಸುಮಾರು 80 ಮಂದಿ ಸ್ಮಶಾನದ ಬಳಿ ಇದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮುಸ್ಲಿಮರ ವಿರುದ್ಧ ದ್ವೇಷ ಭಾಷಣ: ಕೇರಳ ಮಾಜಿ ಶಾಸಕ ಪಿ.ಸಿ.ಜಾರ್ಜ್ ಪೊಲೀಸ್ ವಶಕ್ಕೆ