ಪುಣೆ( ಮಹಾರಾಷ್ಟ್ರ): ಒಂದು ವಸ್ತು ಅಥವಾ ಪದಾರ್ಥವನ್ನು ಮಾರುವುದೂ ಒಂದು ಕಲೆ. ಇದಕ್ಕಾಗಿ ಅನೇಕ ವಿಶ್ವವಿದ್ಯಾಲಯಗಳು ತಮ್ಮದೇ ಆದ ಕೋರ್ಸ್ಗಳು ಮತ್ತು ಪದವಿಗಳನ್ನೂ ಹೊಂದಿವೆ. ಇನ್ನು ಮಾರಾಟಗಾರರು ತಮ್ಮಲ್ಲಿರುವ ವಸ್ತು ಅಥವಾ ಪದಾರ್ಥವನ್ನು ಮಾರಲು ಅನೇಕ ತಂತ್ರಗಳನ್ನು ಉಪಯೋಗಿಸ್ತಾರೆ. ಮಹಾರಾಷ್ಟ್ರದ ಬಾಳೆಹಣ್ಣು ಮಾರಾಟಗಾರನೊಬ್ಬ ಕೂಡಾ ಹೊಸದೊಂದು 'ತಂತ್ರ' ಅನುಸರಿಸಿದ್ದಾನೆ.
ಹೌದು, ಪುಣೆಯಲ್ಲಿ ವ್ಯಕ್ತಿಯೊಬ್ಬ ಬಾಳೆಹಣ್ಣು ಮಾರುವುದೇ ವಿಚಿತ್ರ. ನಾಮದೇವ್ ಎಂಬಾತ ರಸ್ತೆ ಬದಿಯಲ್ಲಿ ಡ್ಯಾನ್ಸ್ ಮಾಡುತ್ತಾ ಬಾಳೆ ಹಣ್ಣು ಮಾರುವ ಕಾಯಕದಲ್ಲಿ ತೊಡಗಿಕೊಂಡಿದ್ದಾನೆ. ಈ ಮೂಲಕ ಗ್ರಾಹಕರನ್ನು ಆಕರ್ಷಿಸುವ ಯತ್ನ ಅವನದ್ದು.
ಕೊರೊನಾ ಮೊದಲ ಅಲೆಯಲ್ಲಿ ಕೆಲಸ ಕಳೆದುಕೊಂಡ ನಾಮದೇವ್ ಹಣ್ಣಿನ ವ್ಯಾಪಾರವನ್ನು ಆರಂಭಿಸಿದನು. ಈಗಲೂ ಕೂಡಾ ಅದೇ ಕಾಯಕವನ್ನು ಮುಂದುವರೆಸಿದ್ದು, ತಲೆಯ ಮೇಲೆ ಮತ್ತು ಕೊರಳಿಗೆ ಬಾಳೆ ಹಣ್ಣು ಕಟ್ಟಿಕೊಂಡು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾನೆ.
ಅತ್ಯಂತ ಕಡಿಮೆ ಅವಧಿಯಲ್ಲಿ ಬಾಳೆಹಣ್ಣು ಮಾರಾಟ ವಿಚಾರದಲ್ಲಿ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾದ ನಾಮದೇವ್, ಕೊರೊನಾ ಕಾರಣಕ್ಕೆ ಮತ್ತೊಮ್ಮೆ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾನೆ.
ಇದನ್ನೂ ಓದಿ: ಸೈನಾ ನೆಹ್ವಾಲ್ ವಿರುದ್ಧ ಆಕ್ಷೇಪಾರ್ಹ ಟ್ವೀಟ್: ನಟ ಸಿದ್ಧಾರ್ಥ್ ವಿರುದ್ಧ ಪ್ರಕರಣ ದಾಖಲು