ETV Bharat / bharat

ಕೇರಳದ ತೃತೀಯಲಿಂಗಿ ದಂಪತಿಗೆ ಮಗು ಜನನ.. ದೇಶದಲ್ಲೇ ಮೊದಲ ಪ್ರಕರಣ - kerala transgender couple

ಕೇರಳದ ತೃತೀಯಲಿಂಗಿ ದಂಪತಿಗೆ ಮಗು ಜನನ - ದೇಶದಲ್ಲೇ ಮೊದಲ ವಿಚಿತ್ರ ಪ್ರಕರಣ - ಜಿಯಾ ಜಿಹಾದ್​ ಜೋಡಿಗೆ ಮಗು - ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಮಗು ಜನನ

a-baby-was-born-to-a-transgender-couple
ಕೇರಳದ ತೃತೀಯಲಿಂಗಿ ದಂಪತಿಗೆ ಮಗು ಜನನ
author img

By

Published : Feb 8, 2023, 12:52 PM IST

Updated : Feb 8, 2023, 1:25 PM IST

ಕೋಯಿಕ್ಕೋಡ್(ಕೇರಳ): ಕೆಲ ದಿನಗಳ ಹಿಂದಷ್ಟೇ ತಾವಿಬ್ಬರೂ ತಂದೆ - ತಾಯಿಯಾಗಲಿದ್ದೇವೆ ಎಂದು ಘೋಷಿಸಿಕೊಂಡಿದ್ದ ಕೇರಳದ ತೃತೀಯಲಿಂಗಿ ದಂಪತಿ ಜಹಾದ್​ ಮತ್ತು ಜಿಯಾ ಪಾವಲ್​ಗೆ ಇಂದು ಮಗು ಜನಿಸಿದೆ. ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಗರ್ಭಧರಿಸಿದ್ದ ಜಿಯಾ ಪಾವಲ್​ಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದೆ. ಮಗುವಿನ ಲಿಂಗವನ್ನು ಸದ್ಯಕ್ಕೆ ಬಹಿರಂಗಪಡಿಸಿಲ್ಲ.

ತೃತೀಯಲಿಂಗಿಗೆ ಮಗು ಜನಿಸಿದ್ದು ದೇಶದಲ್ಲೇ ಮೊದಲ ಪ್ರಕರಣವಾಗಿದೆ. ಟ್ರಾನ್ಸ್​ಜೆಂಡರ್​ ಜೋಡಿಯಾದ ಜಹಾದ್ ಮತ್ತು ಜಿಯಾ ಪಾವಲ್ ಕೋಯಿಕೋಡ್ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಮೂರು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ. ಇತರ ತೃತೀಯಲಿಂಗಿಗಳಿಗಿಂತ ಭಿನ್ನವಾಗಿರಬೇಕು ಎಂದು ಬಯಸಿ, ಅವರು ಮಗುವನ್ನು ಹೊಂದಲು ಯೋಚಿಸಿದ್ದರು. ಲಿಂಗ, ಗರ್ಭ ಪರಿವರ್ತನೆಯ ಪ್ರಕ್ರಿಯೆಯ ಭಾಗವಾಗಿ ಇಬ್ಬರೂ ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಮಗುವನ್ನು ಪಡೆದುಕೊಂಡಿದ್ದಾರೆ.

ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ: ತಾಯಿ- ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮಾರ್ಚ್​ನಲ್ಲಿ ಮಗು ಜನಿಸುವ ದಿನಾಂಕ ನೀಡಲಾಗಿತ್ತು, ಆದರೆ, ವೈದ್ಯರು ಆರೋಗ್ಯ ದೃಷ್ಟಿಯಿಂದ ಶಸ್ತ್ರಚಿಕಿತ್ಸೆಗೆ ಸೂಚಿಸಿದ ಹಿನ್ನೆಲೆ ತೃತೀಯಲಿಂಗಿ ದಂಪತಿ ವೃದ್ಯರ ನೇತೃತ್ವದಲ್ಲಿ ಹೆರಿಗೆ ಮಾಡಿಸಿಕೊಂಡಿದ್ದಾರೆ.

ಓದಿ: ಪೋಷಕರಾಗಲಿರುವ ತೃತೀಯಲಿಂಗಿ ದಂಪತಿ: ಬೇಬಿ ಬಂಪ್ ಫೋಟೋಶೂಟ್ ನೋಡಿ

ಇಬ್ಬರೂ ತೃತೀಯಲಿಂಗಿಗಳಾಗಿದ್ದು, ಗಂಡಾಗಿದ್ದ ಜಿಯಾ ಪಾವಲ್​ ಬಳಿಕ ದೇಹ ಪರಿವರ್ತನೆಯಾಗಿ ಹೆಣ್ಣಾಗಿ ಬದಲಾಗಿದ್ದರು. ಜಹಾದ್​ ಹೆಣ್ಣಾಗಿ ಹುಟ್ಟಿ ಪುರುಷನಾಗಿ ಬದಲಾಗಿದ್ದ. ಮಹಿಳೆಯಿಂದ ಪುರುಷನಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆ ಸಂದರ್ಭದಲ್ಲಿ ಗರ್ಭಾಶಯ ಮತ್ತು ಇತರ ಕೆಲವು ಅಂಗಗಳನ್ನು ತೆಗೆಯದ ಕಾರಣ ಜಹಾದ್ ಗರ್ಭಧರಿಸಿದ್ದರು. ಜಿಯಾ ಶಾಸ್ತ್ರೀಯ ನೃತ್ಯ ಶಿಕ್ಷಕಿಯಾಗಿದ್ದರೆ, ಜಹಾದ್​ ಕೋಯಯಿಕೋಡ್​ನ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿದ್ದಾರೆ.

ನೆರವು ನೀಡಲು ಸರ್ಕಾರಕ್ಕೆ ಮನವಿ: ಜಿಹಾದ್​ ಗರ್ಭಿಣಿ ಎಂದು ತಿಳಿದಾಗ ಇಬ್ಬರಿಗೂ ಖುಷಿಯಾಯಿತು. ಮೊದಲ ಮೂರು ತಿಂಗಳು ಜಿಹಾದ್​ ದೊಡ್ಡ ದೈಹಿಕ ಬದಲಾವಣೆ ಕಂಡುಬಂತು. ದಣಿವು ಮತ್ತು ವಾಂತಿ ಅವನನ್ನು ಬಳಲಿಸಿತು. ನಂತರ ಸುಧಾರಿಸಿಕೊಂಡರು. ಗರ್ಭಿಣಿಯಾದ ನಂತರ ಜಿಹಾದ್​ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ. ಅವರ ಗುರುಗಳಾದ ನಾಡಕಾವ್ ಓಂ ಸ್ಕೂಲ್ ಆಫ್ ಡ್ಯಾನ್ಸ್‌ನ ಡಾ.ಹರ್ಶನ್ ಸೆಬಾಸ್ಟಿಯನ್ ಅಂತೋನಿ ಅವರ ನೆರವಿನಿಂದ ಜೀವನ ಸಾಗುತ್ತಿದೆ. ಸರ್ಕಾರ ಅಥವಾ ತೃತೀಯಲಿಂಗಿ ಸಮುದಾಯ ನಮ್ಮ ನೆರವಿಗೆ ಬರಬೇಕು ಎಂದು ದಂಪತಿ ಕೋರಿದ್ದರು.

ನೆರವು ನೀಡುವಂತೆ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಮಗು ಬೆಳೆದಂತೆಲ್ಲಾ ಎದುರಿಸಬಹುದಾದ ಸಮಸ್ಯೆಗಳ ಬಗ್ಗೆ ಚಿಂತಿತರಾಗಿದ್ದೇವೆ. ಆದರೆ, ಮಗು ನಮ್ಮನ್ನು ಅರ್ಥಮಾಡಿಕೊಳ್ಳುತ್ತದೆ. ನಮ್ಮೊಂದಿಗೆ ಇರುತ್ತದೆ ಎಂಬ ನಂಬಿಕೆಯಿದೆ. ನಮ್ಮ ಮಗು ಈ ಸಮಾಜದಲ್ಲಿ ತಲೆ ಎತ್ತಿ ಬದುಕಬೇಕು ಎಂಬುದು ದಂಪತಿಯ ಆಸೆಯಾಗಿದೆ.

ತಾವಿಬ್ಬರೂ ಪೋಷಕರಾಗಲಿದ್ದೇವೆ ಎಂದು ಇನ್​ಸ್ಟಾಗ್ರಾಂ ಮೂಲಕ ದಂಪತಿ ಘೋಷಿಸಿದ್ದರು. ಬೇಬಿ ಬಂಪ್ ಫೋಟೋಶೂಟ್ ಕೂಡ ಮಾಡಿಸಿ, ಹರಿಬಿಟ್ಟಿದ್ದರು. ಆ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು ಕೂಡಾ

ಓದಿ: ತೂಕ ಇಳಿಸಿಕೊಳ್ಳಲು ಬಯಸುವಿರಾ?.. ಇವುಗಳನ್ನು ಕುಡಿಯುವುದರಿಂದ ಉಪಯೋಗವಾಗಬಹುದು!

Last Updated : Feb 8, 2023, 1:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.