ETV Bharat / bharat

ಒನ್​ ಸೈಡ್​ ಲವ್​ಗೆ ಬಾಲಕಿ ಬಲಿ..ಕದ್ದು ಮುಚ್ಚಿ ಪ್ರೀತಿಸುತ್ತಿದ್ದ ಅಂಕಲ್​ ಸೆರೆ - ಗುಜರಾತ್​ ಅಪರಾಧ ಪ್ರಕರಣ

ಒನ್​ ಸೈಡ್​ ಲವ್​ಗೆ ಬಾಲಕಿ ಬಲಿಯಾಗಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. 15 ವರ್ಷದ ಬಾಲಕಿಯನ್ನು ಇಷ್ಟಪಟ್ಟಿದ್ದ 42 ವರ್ಷದ ಅಂಕಲ್​ವೊಬ್ಬ ಈ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

one side love  girl was murdered by uncle  Man killed girl in Gujarat  Gujarat crime news  ಒನ್​ ಸೈಡ್​ ಲವ್​ಗೆ ಬಾಲಕಿ ಬಲಿ  ಕದ್ದು ಮುಚ್ಚಿ ಪ್ರೀತಿಸುತ್ತಿದ್ದ ಅಂಕಲ್​ ಸೆರೆ  ಸೊಸೆಯ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ ಮಾವ  ಪೊಲೀಸ್​ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು  ಗುಜರಾತ್​ನಲ್ಲಿ ಬಾಲಕಿಯನ್ನು ಕೊಲೆ ಮಾಡಿದ ವ್ಯಕ್ತಿ  ಗುಜರಾತ್​ ಅಪರಾಧ ಪ್ರಕರಣ
ಕುಟುಂಬಸ್ಥರ ಪ್ರತಿಭಟನೆ
author img

By

Published : Aug 19, 2022, 12:31 PM IST

ಖೇಡಾ, ಗುಜರಾತ್​: ಜಿಲ್ಲೆಯಲ್ಲಿ ದುರಂತ ಘಟನೆಯೊಂದು ಬೆಳಕಿಗೆ ಬಂದಿದೆ. 42 ವರ್ಷದ ಅಂಕಲ್​ವೊಬ್ಬ ಕದ್ದು ಮುಚ್ಚಿ ಪ್ರೀತಿಸುತ್ತಿದ್ದ 15 ವರ್ಷದ ಬಾಲಕಿಯನ್ನು ಕಟರ್​ನಿಂದ ದಾಳಿ ಮಾಡಿದ್ದಾನೆ. ಬಳಿಕ ಆಕೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ತ್ರಾಜ್​ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ರಾಜೇಶ್​ ಪಟೇಲ್​ ಎಂದು ಗುರುತಿಸಲಾಗಿದೆ.

ಸೊಸೆಯ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ ಮಾವ: ಆರೋಪಿ ರಾಜೇಶ್​ ಪಟೇಲ್​ ಸೊಸೆ ಮತ್ತು ಮೃತ ಕೃಪಾ ಪಟೇಲ್​ ಇಬ್ಬರು ಸ್ನೇಹಿತರು. ಆಗಾಗ ಕೃಪಾ ಪಟೇಲ್​ ತನ್ನ ಸ್ನೇಹಿತೆ ಮನೆಗೆ ಹೋಗಿ ಬರುತ್ತಿದ್ದಳು. ಈ ಕ್ರಮದಲ್ಲಿ ಕೃಪಾ ಪಟೇಲ್​ ಮೇಲೆ ಅಂಕಲ್​ ರಾಜೇಶ್​ ಪಟೇಲ್​ಗೆ ಲವ್​ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಒನ್​ ಸೈಡ್​ ಲವ್​ಗೆ ಬಾಲಕಿ ಬಲಿ: ಆಗಸ್ಟ್​ 17ರಂದು ರಾಜೇಶ್​​ ಪಟೇಲ್ ಸೊಸೆ​ ಮತ್ತು ಕೃಪಾ ಪಟೇಲ್​ ಇಬ್ಬರು ತಂಪು ಪಾನೀಯ ಕುಡಿಯಲು ಗ್ರಾಮದ ಅಂಗಡಿಯೊಂದಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ರಾಜೇಶ್​ ಪಟೇಲ್ ಹರಿತವಾದ ಪೇಪರ್​ ಕಟರ್​ನಿಂದ ಕೃಪಾ ಪಟೇಲ್ ಕೈ ಮೇಲೆ ದಾಳಿ ಮಾಡಿ​ ಕತ್ತನ್ನು ಸೀಳಿದ್ದಾನೆ.

ಹಾಡಹಗಲೇ ಎಲ್ಲರೂ ನೋಡ - ನೋಡುತ್ತಿದ್ದಂತೆ ಬಾಲಕಿಯ ದಾಳಿ ನಡೆದು ಹೋಯಿತು. ಕೂಡಲೇ ಸ್ಥಳೀಯರು ದಾಳಿಗೊಳಗಾದ ಬಾಲಕಿಯನ್ನು ಖೇಡಾ ಸಿವಿಲ್​ ಆಸ್ಪತ್ರೆಗೆ ಕರೆದೊಯ್ದರು. ಆದರೆ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದರು. ದಾಳಿ ಬಳಿಕ ಆರೋಪಿ ರಾಜೇಶ್​ ಪಟೇಲ್​ ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಪ್ರೀತಿಸಿದ ರೌಡಿ​​ಗೋಸ್ಕರ ಕಾಲುವೆ ಹಾರಿ ಹೋದ ಬಾಲಕಿ: ಹುಡುಕಾಟಕ್ಕಿಳಿದ ಪೊಲೀಸರಿಗೆ ಸುಸ್ತು

ಪೊಲೀಸ್​ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು: ಇದಕ್ಕೂ ಮುನ್ನ ಕೊಲೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ಬಾಲಕಿ ಶವವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಆರೋಪಿಯನ್ನು ಸೆರೆ ಹಿಡಿದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೃತ ಬಾಲಕಿ ಕುಟುಂಬಸ್ಥರಿಂದ ಪ್ರತಿಭಟನೆ: ಮುದ್ದಾದ ಮಗಳನ್ನು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆರೋಪಿಗೆ ತಕ್ಕ ಶಿಕ್ಷೆಯಾಗುವಂತೆ ಪೊಲೀಸ್ ಉನ್ನತ ಅಧಿಕಾರಿಗಳಿಗೆ ಮೃತ ಬಾಲಕಿಯ ಸಂಬಂಧಿಕರು ಆಗ್ರಹಿಸಿದ್ದಾರೆ. ಪೊಲೀಸರು ಸಹ ನ್ಯಾಯಯುತ ತನಿಖೆ ನಡೆಸಿ ಆರೋಪಿಗೆ ಶಿಕ್ಷೆಯಾಗುವಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಪೊಲೀಸರು ಭರವಸೆ ಬಳಿಕ ಮೃತ ಬಾಲಕಿಯ ಸಂಬಂಧಿಕರು ತಮ್ಮ ಪ್ರತಿಭಟನೆಯನ್ನು ವಾಪಾಸ್​ ಪಡೆದರು.

ಕೊಲೆ ಬಳಿಕ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಸಹ ಗ್ರಾಮಸ್ಥರ ಚಲನವಲನಗಳ ಮೇಲೆ ನಿಗಾ ವಹಿಸಿದ್ದಾರೆ.

ಓದಿ: ಕುಟುಂಬಸ್ಥರಿಂದ ಪ್ರಾಣ ಬೆದರಿಕೆ, ರಕ್ಷಣೆ ನೀಡುವಂತೆ ಪ್ರೇಮಿಗಳ ಮನವಿ: ವಿಡಿಯೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.