ETV Bharat / bharat

ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹುಟ್ಟುವ ಶೇ 99 ರಷ್ಟು ಶಿಶುಗಳು ಸೇಫ್ - ಸಹಜ ಹೆರಿಗೆ

ಗರ್ಭಿಣಿಯರು ಸೋಂಕಿತರಾಗಿದ್ದರೂ ಅವರು ಗಾಬರಿಯಾಗಬೇಕಿಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೆ ಕೊರೊನಾ ಸಲುವಾಗಿ ಆಗಾಗ ಟೆಸ್ಟ್​ ಮಾಡುತ್ತಿರಬೇಕು ಹಾಗೂ ಪಾಸಿಟಿವ್ ಬಂದಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂಬುದು ವೈದ್ಯರ ಅಭಿಪ್ರಾಯ.

99% new born children of Corona positive mothers safe
ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹುಟ್ಟುವ ಶೇ 99 ರಷ್ಟು ಶಿಶುಗಳು ಸೇಫ್
author img

By

Published : Apr 28, 2021, 11:50 PM IST

ಔರಂಗಾಬಾದ್ (ಮಹಾರಾಷ್ಟ್ರ): ಕಳೆದ ಎರಡು ತಿಂಗಳಿಂದೀಚೆಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗತೊಡಗಿದೆ. ಇನ್ನು ಈ ಸೋಂಕಿತರಲ್ಲಿ ಗರ್ಭಿಣಿಯರೂ ಇದ್ದಾರೆ. ಏಪ್ರಿಲ್ 2020 ರಿಂದ 2021ರ ಅವಧಿಯಲ್ಲಿ ಒಟ್ಟು 357 ಗರ್ಭಿಣಿಯರಿಗೆ ಇಲ್ಲಿನ ಘಾಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ 197 ಮಹಿಳೆಯರು ಇದೇ ಘಾಟಿ ಆಸ್ಪತ್ರೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಕೊರೊನಾ ಪೀಡಿತವಾಗಿದ್ದರೂ ಶೇ 99 ರಷ್ಟು ಹೆರಿಗೆ ಪ್ರಕರಣಗಳಲ್ಲಿ ಶಿಶುಗಳಿಗೆ ಯಾವುದೇ ಬಾಧೆ ಉಂಟಾಗಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ.

ಘಾಟಿ ಆಸ್ಪತ್ರೆಯಲ್ಲಿ ಔರಂಗಾಬಾದಿನ 292 ಗರ್ಭಿಣಿಯರು ಹಾಗೂ ಇತರ ಜಿಲ್ಲೆಗಳ 66 ಗರ್ಭಿಣಿಯರಿಗೆ ಏಪ್ರಿಲ್ 2020 ರಿಂದ ಈವರೆಗೆ ಚಿಕಿತ್ಸೆ ನೀಡಲಾಗಿದೆ. ಬಹುತೇಕ ಇವರೆಲ್ಲ 6-7 ತಿಂಗಳ ಗರ್ಭಾವಧಿಯವರಾಗಿದ್ದು, ಕೊರೊನಾ ಸೋಂಕಿತರಾಗಿದ್ದರು. ಇವರಲ್ಲಿ ಬಹುತೇಕರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದು ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇನ್ನು ಇದರಲ್ಲಿ ಕೆಲವರು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಚಿಕಿತ್ಸೆಗಾಗಿ ಬಂದಿದ್ದ 357 ಗರ್ಭಿಣಿಯರಲ್ಲಿ 197 ಮಹಿಳೆಯರು ಘಾಟಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿರುವುದಾಗಿ ಆಸ್ಪತ್ರೆ ದಾಖಲೆಗಳು ಹೇಳುತ್ತವೆ.

ಗರ್ಭಿಣಿಯರು ಸೋಂಕಿತರಾಗಿದ್ದರೂ ಅವರು ಗಾಬರಿಯಾಗಬೇಕಿಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೆ ಕೊರೊನಾ ಸಲುವಾಗಿ ಆಗಾಗ ಟೆಸ್ಟ್​ ಮಾಡುತ್ತಿರಬೇಕು ಹಾಗೂ ಪಾಸಿಟಿವ್ ಬಂದಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂಬುದು ವೈದ್ಯರ ಅಭಿಪ್ರಾಯ.

ಇನ್ನು ಈ ಆಸ್ಪತ್ರೆಯಲ್ಲಿ ಸೋಂಕಿತ ಮಹಿಳೆಯರಿಗೆ ಜನಿಸಿದ ಶೇ 99ರಷ್ಟು ಶಿಶುಗಳಿಗೆ ಕೊರೊನಾ ಸೋಂಕು ಇರಲಿಲ್ಲ ಎಂಬುದು ಗಮನಾರ್ಹ. 197 ಗರ್ಭಿಣಿಯರಲ್ಲಿ 138 ಜನ ಸಹಜ ಹೆರಿಗೆ ಹಾಗೂ ಇನ್ನುಳಿದ 59 ಜನ ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದ್ದರು. ಒಟ್ಟಾರೆಯಾಗಿ ಇದರಲ್ಲಿ ಕೇವಲ ಮೂರು ನವಜಾತ ಶಿಶುಗಳು ಮಾತ್ರ ಕೊರೊನಾ ಪಾಸಿಟಿವ್ ಆಗಿದ್ದವು. ವಿಪರೀತ ಜ್ವರ ಹಾಗೂ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಸಿಗದ ಕಾರಣ ಒಟ್ಟು ಏಳು ನವಜಾತ ಶಿಶುಗಳು ಮೃತಪಟ್ಟಿದ್ದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.