ETV Bharat / bharat

92 ವರ್ಷದ ವೃದ್ಧನಿಗೆ ಸರಪಳಿ ಕಟ್ಟಿ ಚಿಕಿತ್ಸೆ.. ವೈರಲ್​ ಆಯ್ತು ಮಾನವೀಯತೆ ನಾಚಿಸುವ ಚಿತ್ರ

ಮಾನವೀಯತೆಯನ್ನು ನಾಚಿಸುವಂತಹ ಘಟನೆಯೊಂದು ಉತ್ತರ ಪ್ರದೇಶದ ಇಟಾದಲ್ಲಿನ ಆಸ್ಪತ್ರೆಯಲ್ಲಿ ನಡೆದಿದೆ. ಚಿಕಿತ್ಸೆ ಪಡೆಯಲು ಬಂದ ವೃದ್ಧನೋರ್ವನಿಗೆ ಸರಪಳಿಯಿಂದ ಕಟ್ಟಿಹಾಕಲಾಗಿದೆ.

author img

By

Published : May 13, 2021, 6:23 PM IST

92 Year Old Man Tied With Chains
92 Year Old Man Tied With Chains

ಇಟಾ(ಉತ್ತರ ಪ್ರದೇಶ): ಇಲ್ಲಿನ ಕೋವಿಡ್​ ಅಲ್ಲದ ವಾರ್ಡ್​ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 92 ವರ್ಷದ ವೃದ್ಧನೋರ್ವನ ಕಾಲು ಸರಪಳಿಯಿಂದ ಕಟ್ಟಿ ಹಾಕಿರುವ ಘಟನೆ ನಡೆದಿದ್ದು, ಇದೀಗ ಅದರ ಚಿತ್ರ ಎಲ್ಲೆಡೆ ವೈರಲ್​ ಆಗಿದೆ.

ಉತ್ತರ ಪ್ರದೇಶದ ಇಟಾದಲ್ಲಿನ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, 92 ವರ್ಷದ ಕೈದಿಯೋರ್ವನಿಗೆ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಈ ವೇಳೆ ಬೆಡ್​ ಮೇಲೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈ ವೇಳೆ ಅವರ ಕಾಲುಗಳನ್ನ ಸರಪಳಿಯಂದ ಕಟ್ಟಿಹಾಕಲಾಗಿದೆ. ಕೈಗಳನ್ನು ಬಟ್ಟೆ ಸಹಾಯದಿಂದ ಹಾಸಿಗೆಗೆ ಕಟ್ಟಿದ್ದಾರೆ. ಇಟಾ ಜೈಲಿನ ವಾರ್ಡನ್​ ಅಶೋಕ್ ಯಾದವ್ ಈ ರೀತಿಯಾಗಿ ನಡೆದುಕೊಂಡಿದ್ದಾನೆಂದು ತಿಳಿದು ಬಂದಿದ್ದು, ತಕ್ಷಣವೇ ಆತನನ್ನ ಅಮಾನತು ಮಾಡಲಾಗಿದೆ.

old man tied with chains in covid ward
ಆಸ್ಪತ್ರೆಯಲ್ಲಿ 92 ವರ್ಷದ ವೃದ್ಧನಿಗೆ ಸರಪಳಿ ಕಟ್ಟಿ ಚಿಕಿತ್ಸೆ

ತೀವ್ರ ಅನಾರೋಗ್ಯದ ಕಾರಣ ಚಿಕಿತ್ಸೆಗೋಸ್ಕರ ಈತನನ್ನು ಕರೆತರಲಾಗಿತ್ತು. ಆಕ್ಸಿಜನ್​ ಸಹ ನೀಡಲಾಗುತ್ತಿದ್ದು, ಅಲ್ಲಿನ ಸಿಬ್ಬಂದಿ ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎನ್ನಲಾಗ್ತಿದೆ.

ಹಬೀಪುರ ಪೊಲೀಸ್ ಠಾಣೆ ನಿವಾಸಿ ಬಲ್ವಂತ್ ಸಿಂಗ್​ ಕಳೆದ ಕೆಲ ವರ್ಷಗಳಿಂದ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಇಂದು ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಆದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.

ಚಿಕಿತ್ಸೆ ನೀಡುತ್ತಿದ್ದ ವೇಳೆ ಸರಪಳಿಯಿಂದ ಕಟ್ಟಲಾಗಿದೆ. ಇದರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಉತ್ತರ ಪ್ರದೇಶ ಡಿಜಿ ಆನಂದ್ ಕುಮಾರ್ ಈ ನಿರ್ಧಾರ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.