ಚಾರ್ಖಿ ದಾದ್ರಿ(ಹರಿಯಾಣ): ಬಿಹಾರದ ದಶರಥ್ ಮಾಂಜಿ ಕಥೆಯನ್ನು ಎಲ್ಲರೂ ಕೇಳಿರುತ್ತಾರೆ. ಜೊತೆಗೆ ಸಿನಿಮಾಗಳಲ್ಲಿ ನೋಡಿರುತ್ತಾರೆ. ಮತ್ತೊಬ್ಬ ವ್ಯಕ್ತಿ ಸಹ ದಶರಥ್ ಮಾಂಜಿ ಅವರ ಹಾಗೆ ಬೆಟ್ಟ ತುಂಡರಿಸಿ ನೀರಿನ ಕೊಳ ನಿರ್ಮಿಸಿದ್ದಾರೆ. ಅದಕ್ಕೋಸ್ಕರ ಅವರು ಬರೋಬ್ಬರಿ 50 ವರ್ಷ ತೆಗೆದುಕೊಂಡಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
90 ವರ್ಷದ ಕಲ್ಲುರಾಮ್ ಈ ಸಾಧನೆ ಮಾಡಿದ್ದಾರೆ. ಸತತ 50 ವರ್ಷಗಳ ಕಾಲ ಪರ್ವತ ಅಗೆದು ನೀರಿನ ಕೊಳ ನಿರ್ಮಿಸಿದ್ದಾರೆ. ಇವರ ಕೆಲಸಕ್ಕೆ ಇದೀಗ ಎಲ್ಲರೂ ಫಿದಾ ಆಗಿದ್ದಾರೆ. ಈ ಕೊಳ ನೂರಾರು ಪ್ರಾಣಿಗಳ ಬಾಯಾರಿಕೆ ನೀಗಿಸುತ್ತಿದ್ದು, ಜನರಿಗೂ ಸಹಕಾರಿಯಾಗಿದೆ. ಚಾರ್ಖಿ ದಾದ್ರಿಯ ಅಟೆಲಾ ಗ್ರಾಮದ ನಿವಾಸಿ ಕಲ್ಲುರಾಮ್ ಕಳೆದ 50 ವರ್ಷಗಳಿಂದ ಬೆಳಗ್ಗೆ 4 ಗಂಟೆಗೆ ಎದ್ದು ತಮ್ಮ ಕೆಲಸ ಪ್ರಾರಂಭಿಸುತ್ತಿದ್ದರು.
ಅಪಹಾಸ್ಯ ಮಾಡಿದ್ದ ಜನರು: ಕಲ್ಲುರಾಮ್ ಕೆಲಸ ಆರಂಭಿಸಿದಾಗ ಅನೇಕರು ಅವರನ್ನ ಅಪಹಾಸ್ಯ ಮಾಡಿದ್ದಾರೆ. ಕುಟುಂಬದ ಸದಸ್ಯರು ಅಸಮಾಧಾನ ಸಹ ವ್ಯಕ್ತಪಡಿಸಿದ್ದರು. ಆದರೆ, ಹಿಡಿದ ಛಲ ಬಿಡದ ಕಲ್ಲುರಾಮ್ ಕೊಳ ನಿರ್ಮಿಸಲು ಯಶಸ್ವಿಯಾಗಿದ್ದಾರೆ. ಈ ಕೆಲಸಕ್ಕೆ ಅವರ ಮಗ ವೇದಪ್ರಕಾಶ್ ಹಾಗೂ ಮೊಮ್ಮಗ ರಾಜೇಶ್ ಸಹ ಸಾಥ್ ನೀಡಿದ್ದಾರೆ.
18 ವರ್ಷದವನಾಗಿದ್ದಾಗ ಕಲ್ಲುರಾಮ್ ಮೇಕೆ ಮತ್ತು ಹಸು ಮೇಯಿಸಲು ಹೋಗುತ್ತಿದ್ದರು. ಈ ವೇಳೆ ಅವುಗಳು ನೀರಿನ ಸಮಸ್ಯೆಯಿಂದ ಸಾವನ್ನಪ್ಪಿದ್ದವು. ಪ್ರಾಣಿಗಳಿಗೋಸ್ಕರ ಏನನ್ನಾದರೂ ಮಾಡಬೇಕೆಂದು ನಿರ್ಧಾರ ಕೈಗೊಳ್ಳುತ್ತಾರೆ. ಹೀಗಾಗಿ, ಪರ್ವತಗಳ ಮಧ್ಯೆ ಕೊಳ ನಿರ್ಮಿಸುವ ದೃಢ ಸಂಕಲ್ಪ ಕೈಗೊಳ್ಳುತ್ತಾರೆ. ಅದಕ್ಕೋಸ್ಕರ ಸುಮಾರು 50 ವರ್ಷ ತೆಗೆದುಕೊಳ್ಳುತ್ತಾರೆ. ಸತತ ಪ್ರಯತ್ನದಿಂದ ಇದೀಗ ಕೊಳ ನಿರ್ಮಾಣಗೊಂಡಿದೆ. ಆದರೆ, ಈ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿರುವ ಕಾರಣ ನೀರು ಆವಿಯಾಗುವ ಭಯ ಶುರುವಾಗಿದೆ.
ಇದನ್ನೂ ಓದಿರಿ: ಗ್ರಾಮಸ್ಥರ ಪಾಲಿಗೆ ಇವರು ಜಲ'ಜನಕ' : 22 ವರ್ಷ ಕಾಲುವೆ ತೋಡಿ ನೀರು ಹರಿಸಿದ ವೃದ್ಧ!
ಒಡಿಶಾದಲ್ಲೂ ಇಂತಹದೊಂದು ಘಟನೆ ನಡೆದಿದ್ದು, ಬರೋಬ್ಬರಿ 30 ವರ್ಷಗಳ ಕಠಿಣ ಪರಿಶ್ರಮದಿಂದ ವ್ಯಕ್ತಿಯೋರ್ವ ತಮ್ಮ ಊರಿಗೆ ರಸ್ತೆ ನಿರ್ಮಾಣ ಮಾಡಿಕೊಂಡಿದ್ದರು. ವರ್ಷದ 8 ಗಂಟೆಗಳ ಕಾಲ ಶ್ರಮಿಸಿ ಒಟ್ಟು 15 ಕಿಲೋ ಮೀಟರ್ ರಸ್ತೆ ನಿರ್ಮಾಣ ಮಾಡಿ, ಗಮನ ಸೆಳೆದಿದ್ದರು.