ETV Bharat / bharat

ಬಾಂಬ್​​ ಸ್ಫೋಟ ಪ್ರಕರಣ: 3 ಉಗ್ರರಿಗೆ ಜೀವಾವಧಿ, ಐವರಿಗೆ 10 ವರ್ಷ ಜೈಲು ಶಿಕ್ಷೆ - ಬೋಧ್‌ ಗಯಾ ಸ್ಫೋಟ ಪ್ರಕರಣದ ಅಪರಾಧಿಗಳಿಗೆ ಜೈಲು ಶಿಕ್ಷೆ

ಬೋಧ್‌ ಗಯಾ ಬಾಂಬ್​​ ಸ್ಫೋಟ ಪ್ರಕರಣದ ಮೂವರು ಅಪರಾಧಿಗಳಿಗೆ ಜೀವಾವಧಿ ಹಾಗೂ ಐವರು ಉಗ್ರರಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

bodh gaya
ಬೋಧ್‌ ಗಯಾ
author img

By

Published : Dec 17, 2021, 7:08 PM IST

ಪಾಟ್ನಾ (ಬಿಹಾರ): 2018ರ ಬೋಧ್‌ ಗಯಾ ಬಾಂಬ್​​ ಸ್ಫೋಟ ಪ್ರಕರಣದ 8 ಅಪರಾಧಿಗಳಿಗೆ ಇಂದು ಶಿಕ್ಷೆ ವಿಧಿಸಲಾಗಿದೆ. ಮೂವರು ಉಗ್ರರಿಗೆ ಜೀವಾವಧಿ ಹಾಗೂ ಐವರು ಉಗ್ರರಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಪಾಟ್ನಾದ ಎನ್‌ಐಎ ವಿಶೇಷ ನ್ಯಾಯಾಲಯ ಮಹತ್ತರ ತೀರ್ಪು ನೀಡಿದೆ.

ಡಿಸೆಂಬರ್ 10 ರಂದು ಪ್ರಕರಣದ 8 ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಒಂಬತ್ತನೇ ಆರೋಪಿ ಜಹಿದುಲ್ ಇಸ್ಲಾಂ ಮಾತ್ರ ತನ್ನ ತಪ್ಪು ಒಪ್ಪಿಕೊಂಡಿಲ್ಲ. ಹೀಗಾಗಿ ಆತನಿಗೆ ಇಂದು ಶಿಕ್ಷೆ ಪ್ರಕಟವಾಗಿಲ್ಲ.

ಅಹ್ಮದ್ ಅಲಿ, ಪ್ರವಾದಿ ಶೇಖ್, ನೂರ್ ಆಲಂ ಮೊಮಿನ್ - ಈ ಮೂವರಿಗೆ ಜೀವಾವಧಿ ಶಿಕ್ಷೆಯಾಗಿದೆ. ದಿಲಾವರ್ ಹುಸೇನ್, ಮುಸ್ತಫಾ ರೆಹಮಾನ್, ಆರಿಫ್ ಹುಸೇನ್, ಮೊಹಮ್ಮದ್ ಆದಿಲ್ ಶೇಖ್ ಹಾಗೂ ಅಬ್ದುಲ್ ಕರೀಂಗೆ 10 ವರ್ಷ ಸೆರೆವಾಸ ಅನುಭವಿಸಬೇಕಿದೆ.

ಇದನ್ನೂ ಓದಿ: ಮದುವೆ ಸಿದ್ಧತೆಯಲ್ಲಿದ್ದ ಜೋಡಿ ನಡುವೆ ಹಣಕ್ಕಾಗಿ ಮನಸ್ತಾಪ.. ಕತ್ತು ಹಿಸುಕಿ ಕೊಂದೇ ಬಿಟ್ಟ ಪಾಪಿ ಪ್ರೇಮಿ

ಏನಿದು ಬೋಧ್‌ ಗಯಾ ಬಾಂಬ್​​ ಸ್ಫೋಟ ಪ್ರಕರಣ?

2018ರ ಜನವರಿ 19ರಂದು ಬಿಹಾರದ ಗಯಾ ಜಿಲ್ಲೆಯಲ್ಲಿನ ಬೋಧ್‌ ಗಯಾ ಪ್ರದೇಶದಲ್ಲಿರುವ ಕಾಲಚಕ್ರ ಮೈದಾನದ ಬಳಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿತ್ತು. ಘಟನೆ ವೇಳೆ ಬೌದ್ಧ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರು ಧರ್ಮೋಪದೇಶವನ್ನು ನೀಡಲು ಬೋಧ್​ ಗಯಾದಲ್ಲಿದ್ದರು. ಸ್ಫೋಟ ನಡೆದ ಕೆಲವೇ ಹೊತ್ತಿನಲ್ಲಿ ಮಹಾಬೋಧಿ ದೇವಾಲಯದ ಆವರಣ ಸೇರಿ ಮೂರು ಪ್ರದೇಶಗಳಲ್ಲಿ ಐಇಡಿಗಳು ಭದ್ರತಾ ಪಡೆಗಳು ಪತ್ತೆಮಾಡಿತ್ತು. ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ (JAB) ಕೃತ್ಯ ಎಸಗಿರುವುದು ಬಯಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.