ETV Bharat / bharat

ನಿರ್ಮಾಣ ಹಂತದ ಸುರಂಗ ಕುಸಿತ ದುರಂತ.. ಎಲ್ಲ 10 ಮೃತದೇಹಗಳು ಹೊರಕ್ಕೆ ತೆಗೆದ ರಕ್ಷಣಾ ಸಿಬ್ಬಂದಿ - ಜಮ್ಮು ಕಾಶ್ಮೀರದಲ್ಲಿ ಸುರಂಗ ಕುಸಿತ ದುರಂತ

ಜಮ್ಮು- ಕಾಶ್ಮೀರದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದ ದುರಂತದಲ್ಲಿ 10 ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

dead-body-recovered
ನಿರ್ಮಾಣ ಹಂತದ ಸುರಂಗ ಕುಸಿತ ದುರಂತ
author img

By

Published : May 21, 2022, 7:12 PM IST

Updated : May 21, 2022, 9:58 PM IST

ಜಮ್ಮು- ಕಾಶ್ಮೀರ: ರಾಂಬಾನ್​ ಜಿಲ್ಲೆಯ ಖೂನಿ ನಾಲಾದಲ್ಲಿ ನಿರ್ಮಾಣ ಹಂತದ ಸುರಂಗದ ಒಂದು ಭಾಗ ಕುಸಿದು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಎಲ್ಲ 10 ಕಾರ್ಮಿಕರ ಮೃತದೇಹಗಳನ್ನು 2 ದಿನಗಳ ಕಾರ್ಯಾಚರಣೆಯ ಬಳಿಕ ಹೊರತೆಗೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

4 ಪಥಗಳ ಯೋಜನೆ ಇದಾಗಿದ್ದು, ಶುಕ್ರವಾರ ರಾತ್ರಿ ಸುರಂಗದ ಟಿ-3 ಭಾಗ ಕುಸಿದಿತ್ತು. ಈ ವೇಳೆ ಅಲ್ಲಿ 10 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎಲ್ಲ ಕಾರ್ಮಿಕರೂ ಅವಶೇಷಗಳಡಿ ಸಿಲುಕಿದ್ದರು. ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಿಳಿದರೂ ಒಳ ಸಿಲುಕಿದ್ದ ಕಾರ್ಮಿಕರು ಪತ್ತೆಯಾಗಿರಲಿಲ್ಲ.

ನಿರ್ಮಾಣ ಹಂತದ ಸುರಂಗ ಕುಸಿತ ದುರಂತ

ಇಂದಿನ ಎರಡನೇ ದಿನದ ಕಾರ್ಯಾಚರಣೆಯಲ್ಲಿ ಸಂಜೆಯ ವೇಳೆಗೆ 9 ಕಾರ್ಮಿಕರ ಶವಗಳನ್ನು ಪತ್ತೆ ಮಾಡಲಾಗಿತ್ತು. ಇನ್ನೊಂದು ಶವಕ್ಕಾಗಿ ಪತ್ತೆ ಕಾರ್ಯ ಮುಂದುವರಿದಿತ್ತು. ರಾತ್ರಿ 8 ಗಂಟೆ ಸುಮಾರಿನಲ್ಲಿ ಕೊನೆಯ ಕಾರ್ಮಿಕನೂ ಬಳಿಕ ಎಲ್ಲ ಶವಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಪರೀಕ್ಷೆ ನಡೆಸಲಾಗಿದೆ.

ಸುರಂಗ ದುರಂತದಲ್ಲಿ ಐವರು ಪಶ್ಚಿಮ ಬಂಗಾಳದವರು, ಒಬ್ಬರು ಅಸ್ಸೋಂ, ಇಬ್ಬರು ನೇಪಾಳದವರು ಮತ್ತು ಮೂವರು ಸ್ಥಳೀಯರಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆಯ ಬಳಿಕ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ಸಿದ್ಧತೆ ನಡೆಸಲಾಗಿದೆ.

ಗುತ್ತಿಗೆ ಕಂಪನಿ ಮೇಲೆ ಎಫ್​ಐಆರ್​: ಇನ್ನು ಸುರಂಗವನ್ನು ನಿರ್ಮಾಣ ಮಾಡಲು ಗುತ್ತಿಗೆ ಪಡೆದ ಕಂಪನಿಯ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ಕಲಂ 287, 336, 337 ಮತ್ತು 304 ಎ ಇಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಓದಿ: ​ಕಲ್ಲಿದ್ದಲು ಗಣಿಯಲ್ಲಿ ಯೋಧರನ್ನೇ ಬೆದರಿಸಿ ಡೀಸೆಲ್​ ಕಳ್ಳತನ: ವಿಡಿಯೋ ವೈರಲ್

Last Updated : May 21, 2022, 9:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.