ETV Bharat / bharat

'ಮಾನವ ಜನ್ಮ ದೊಡ್ಡದಲ್ಲ, ಮಾನವೀಯತೆ ದೊಡ್ಡದು..' ಸಮಾನತೆಯ ಹರಿಕಾರ ಜಗಜ್ಯೋತಿ ಬಸವಣ್ಣ

ಇಂದು ಸಮಸ್ತ ನಾಡಿನ ಜನತೆ 888ನೇ ಬಸವ ಜಯಂತಿ ಆಚರಿಸುತ್ತಿದ್ದು, ಟ್ವಿಟರ್​ನಲ್ಲಿ ಕೂಡ​ ಅಭಿಯಾನ ಆರಂಭವಾಗಿದೆ.

888th Basava jayanti
888ನೇ ಬಸವ ಜಯಂತಿ
author img

By

Published : May 14, 2021, 7:26 AM IST

"ಮಾನವ ಜನ್ಮ ದೊಡ್ಡದಲ್ಲ, ಮಾನವೀಯತೆ ದೊಡ್ಡದು.. ಧರ್ಮ ದೊಡ್ಡದಲ್ಲ, ದಯೆ ದೊಡ್ಡದು" - ಗುರು ಬಸವಣ್ಣರ ಈ ಮಾತು ಸಾರ್ವಕಾಲಿಕ. ಇಂದು ಕಾಯಕ, ದಾಸೋಹ, ಸಮಾನತೆಯ ತತ್ವಗಳನ್ನು ವಿಶ್ವಕ್ಕೆ ಸಾರಿದ 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನ ಜಯಂತಿ.

ಕೋವಿಡ್​ ಉಲ್ಬಣದಿಂದಾಗಿ ಈ ಬಾರಿ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ಟ್ವಿಟರ್​ ಅಭಿಯಾನ ಆರಂಭವಾಗಿದೆ. #BasavaJayanti ಹ್ಯಾಷ್​ ಟ್ಯಾಗ್​ ಅಡಿಯಲ್ಲಿ ಬಸವಣ್ಣನವರ ತತ್ವ -ಸಂದೇಶದ ಕುರಿತು ಟ್ವೀಟ್​ ಮಾಡುವಂತೆ ಕರ್ನಾಟಕದ ಕೆಲವು ಶ್ರೀಗಳು ಕೋರಿದ್ದರು. ಇದೀಗ ಟ್ವಿಟರ್​ನಲ್ಲಿ ಬಸವಣ್ಣನವರ ಬೋಧನೆಗಳ ಸುರಿಮಳೆಯೇ ಆಗುತ್ತಿದೆ.

ಬಸವಣ್ಣನವರ ನೀತಿ ಬೋಧನೆಗಳು 888 ವರ್ಷಗಳ ಹಿಂದೆಯೇ ಉದಯವಾಗಿದ್ದರೂ, ಅವು ಸರ್ವ ಧರ್ಮಿಯರಿಗೂ ಸದಾಕಾಲ ಅನುಕರಣೀಯ.

"ಲೋಕದ ಡೊಂಕ ನೀವೇಕೆ ತಿದ್ದುವಿರಿ

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ" - ಬಸವಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.