ETV Bharat / bharat

ಒಂದು ದಿನ ಮೊದಲು ಫೋನ್​ ಕಳ್ಳತನ, ಮರುದಿನ 87 ವರ್ಷದ ವೃದ್ಧೆ ಮೇಲೆ ಅತ್ಯಾಚಾರ - ದೆಹಲಿ ಅತ್ಯಾಚಾರ ಸುದ್ದಿ

ಒಂದು ದಿನ ಮೊದಲು ಫೋನ್​ ಕಳ್ಳತನ ಮಾಡಿರುವ ದುಷ್ಕರ್ಮಿಗಳು ಅದರ ಮರುದಿನ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

87 Year Old Woman Raped In Delhi, Grandma raped in Delhi, Delhi crime news, Delhi rape news, Tilak Nagar news, ದೆಹಲಿಯಲ್ಲಿ 87 ವರ್ಷದ ಮಹಿಳೆ ಮೇಲೆ ಅತ್ಯಾಚಾರ, ದೆಹಲಿಯಲ್ಲಿ ಅಜ್ಜಿ ಮೇಲೆ ಅತ್ಯಾಚಾರ, ದೆಹಲಿ ಅಪರಾಧ ಸುದ್ದಿ, ದೆಹಲಿ ಅತ್ಯಾಚಾರ ಸುದ್ದಿ,
ajji
author img

By

Published : Feb 15, 2022, 6:51 AM IST

ನವದೆಹಲಿ: ಪಶ್ಚಿಮ ದೆಹಲಿಯ ತಿಲಕ್ ನಗರದ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸುಮಾರು 87 ವರ್ಷದ ಅಜ್ಜಿಯ ಮೇಲೆ ದುರುಳರು ಅತ್ಯಾಚಾರವೆಸಗಿದ್ದಾರೆ.

ಅಜ್ಜಿ ತನ್ನ 65 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು. ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಮಗಳು ಹೊರಗಡೆ ಹೋಗಿದ್ದಾಗ ಅಪರಿಚಿತನೊಬ್ಬ ಮನೆಗೆ ನುಗ್ಗಿ ಅಮಾನವೀಯ ಕೃತ್ಯ ಎಸಗಿದ್ದಾನೆ. ಬಳಿಕ ಆತ ಮಧ್ಯಾಹ್ನ 1.30ರೊಳಗೆ ಅಲ್ಲಿಂದ ತೆರಳಿರಬಹುದು ಎಂದು ಕುಟುಂಬಸ್ಥರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದುಷ್ಕೃತ್ಯಕ್ಕೂ ಮೊದಲು ಫೋನ್​ ಕಳ್ಳತನ: ಅತ್ಯಾಚಾರಕ್ಕೂ ಒಂದು ದಿನ ಮೊದಲು ಅಂದ್ರೆ 13ರಂದು ಸಂತ್ರಸ್ತೆಯ ಮಗಳ ಮೊಬೈಲ್ ಫೋನ್ ಮನೆಯಿಂದಲೇ ಕಳ್ಳತನವಾಗಿತ್ತು. ಈ ಬಗ್ಗೆ ಪೊಲೀಸರಿಗೆ ಲಿಖಿತ ದೂರು ನೀಡಲಾಗಿತ್ತು.

ಇದನ್ನೂ ಓದಿ: ಬಿಎಸ್​ವೈ ಭೇಟಿಯಾದ ಕೇಂದ್ರ ಸಚಿವ ಜೋಶಿ; ಕುತೂಹಲ ಕೆರಳಿಸಿದ ಉಭಯ ನಾಯಕರ ಭೇಟಿ!

ನಿನ್ನೆ(ಸೋಮವಾರ) ತನ್ನ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಗಳು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಗೆ ಅಗತ್ಯವಿರುವ ಎಲ್ಲಾ ಕಾನೂನು ನೆರವು ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.