ವಾರಣಾಸಿ(ಉತ್ತರ ಪ್ರದೇಶ): ಸಾಧಿಸುವ ಛಲವಿದ್ದರೆ ಯಾವುದೂ ಕಷ್ಟವಲ್ಲ ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ವಾರಾಣಸಿ ನಿವಾಸಿಯೊಬ್ಬರು ತಮ್ಮ 84ನೇ ವಯಸ್ಸಿನಲ್ಲಿ ಡಿ.ಲಿಟ್ ಪಡೆದು ಗಮನ ಸೆಳೆದಿದ್ದಾರೆ.

ಇವರ ಹೆಸರು ಅಮಲಧಾರಿ ಸಿಂಗ್. ಸರ್ವವಿದ್ಯೆಯ ರಾಜಧಾನಿ ಎಂಬ ಖ್ಯಾತಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಇವರು ಡಿ.ಲಿಟ್ (ಡಾಕ್ಟರ್ ಆಫ್ ಲಿಟರೇಚರ್) ಪದವಿ ಪಡೆದುಕೊಂಡಿದ್ದಾರೆ. ಈ ಮೂಲಕ ಈ ಪಡೆದ ಅತ್ಯಂತ ಹಿರಿಯ ವಿದ್ಯಾರ್ಥಿಯಾಗಿ(ಬನಾರಸ್ ವಿಶ್ವವಿದ್ಯಾಲಯ) ಹೊರಹೊಮ್ಮಿದ್ದಾರೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಿಂದ 82 ವರ್ಷದ ವೆಲ್ಲಯ್ಯನಿ ಅರ್ಜುನ್ ಎಂಬುವವರು 2015ರಲ್ಲಿ ಡಾಕ್ಟರೇಟ್ ಪಡೆದುಕೊಂಡಿದ್ದರು.

ಇದನ್ನೂ ಓದಿ: ಬಂಡಾಯ ಶಾಸಕರ ವಿರುದ್ಧ ಸಂಜಯ್ ರಾವತ್ ಕಟುಟೀಕೆ; ಏಕನಾಥ್ ಶಿಂದೆ ಪುತ್ರನ ಪ್ರತಿಕ್ರಿಯೆ ಹೀಗಿದೆ..
ಅಮಲಧಾರಿ ಸಿಂಗ್ 1938ರ ಜುಲೈ 22ರಂದು ಜೌನ್ಪುರ ಜಿಲ್ಲೆಯಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೂ ಓದಿನಲ್ಲಿ ಜಾಣ. 1966ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಮಾಡಿ ನಾಲ್ಕು ವರ್ಷಗಳ ಕಾಲ NCC ವಾರಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 1963ರಲ್ಲಿ ಅಂದಿನ ಭಾರತದ ಪ್ರಧಾನಿ ದಿ.ಜವಾಹರಲಾಲ್ ನೆಹರು ಅವರಿಂದ ವಿಶೇಷ ಗೌರವಕ್ಕೂ ಪಾತ್ರರಾಗಿದ್ದರು. 1967ರಲ್ಲಿ ಜೋಧ್ಪುರ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡು 11 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1999ರವರೆಗೆ ರಾಯ್ಬರೇಲಿನ ಪಿಜಿ ಕಾಲೇಜಿನಲ್ಲಿ ಕೆಲಸ ಮಾಡಿದ್ದಾರೆ.

2021ರಲ್ಲಿ ಇವರು ಡಿ.ಲಿಟ್ ಪದವಿಗಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಪ್ರಪಂಚದ ಅತ್ಯಂತ ಪುರಾತನ ವೇದಗಳ ಬಗೆಗಿನ ವಿಷಯ ಆಯ್ಕೆ ಮಾಡಿಕೊಂಡು, ಅಧ್ಯಯನ ನಡೆಸಿರುವುದಾಗಿ ಅಮಲಧಾರಿ ಸಿಂಗ್ ತಿಳಿಸಿದ್ದಾರೆ.