ನವದೆಹಲಿ: 84 ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆ ಪ್ರಮಾಣ ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ. ಮುಂದಿನ ಮೂರು ದಿನಗಳಲ್ಲಿ 53 ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ಲಸಿಕೆಯನ್ನು ವಿತರಿಸಲಾಗುವುದು ಎಂದು ಕೇಂದ್ರ ಶನಿವಾರ ತಿಳಿಸಿದೆ.
ಅಧಿಕೃತ ಹೇಳಿಕೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈವರೆಗೆ ರಾಜ್ಯಗಳಿಗೆ /ಕೇಂದ್ರಾಡಳಿತ ಪ್ರದೇಶಗಳಿಗೆ 17.49 ಕೋಟಿ ಪ್ರಮಾಣದಷ್ಟು ಲಸಿಕೆ ಪೂರೈಸಲಾಗಿದೆ, ಅದರಲ್ಲಿ ಸುಮಾರು 16.7 ಕೋಟಿ ಡೋಸ್‌ಗಳನ್ನು ಈಗಾಗಲೇ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಈಗಾಗಲೇ ಒದಗಿಸಿದ ಲಸಿಕೆ ಪ್ರಮಾಣಗಳಲ್ಲಿ, ವೇಸ್ಟೇಜ್ ಸೇರಿದಂತೆ ಒಟ್ಟು 16,65,49,583 ಪ್ರಮಾಣದ ಲಸಿಕೆ ಬಳಕೆಯಾಗಿದೆ. (ಶನಿವಾರ ಬೆಳಗ್ಗೆ 8 ಗಂಟೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ). 84 ಲಕ್ಷಕ್ಕೂ ಹೆಚ್ಚು ಲಸಿಕೆಗಳು (84,08,187) ಇನ್ನೂ ಲಭ್ಯವಿದೆ ಎಂದು ಸಚಿವಾಲಯ ಹೇಳಿದೆ. ಇದಲ್ಲದೆ, ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳು / ಯುಟಿಗಳು ಹೆಚ್ಚುವರಿಯಾಗಿ 53 ಲಕ್ಷ (53,25,000) ಲಸಿಕೆ ಪ್ರಮಾಣವನ್ನು ಪಡೆಯಲಿವೆ ಎಂದು ಸಚಿವಾಲಯ ಪ್ರಕಟಿಸಿದೆ.
ದೆಹಲಿಗೆ 40.22 ಲಕ್ಷ ಲಸಿಕೆ ಪ್ರಮಾಣಗಳು ಬಂದಿದ್ದು, ಅದರಲ್ಲಿ 36.09 ಲಕ್ಷ ಡೋಸ್‌ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿದೆ. ರಾಷ್ಟ್ರ ರಾಜಧಾನಿಯಲ್ಲಿ ಇನ್ನೂ 4.12 ಲಕ್ಷ ಡೋಸ್‌ಗಳ ಬಾಕಿ ಉಳಿದಿದೆ ಮತ್ತು ಮುಂದಿನ ಮೂರು ದಿನಗಳಲ್ಲಿ ಒಂದು ಲಕ್ಷ ಪ್ರಮಾಣದ ಲಸಿಕೆಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಸಚಿವಾಲಯ ತಿಳಿಸಿದೆ.
ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿತರಿಸಲಾಗುವುದು ಎಂದು ನಿರೀಕ್ಷಿಸಲಾಗಿರುವ 53.25 ಲಕ್ಷ ಲಸಿಕೆ ಪ್ರಮಾಣದಲ್ಲಿ, ಗುಜರಾತ್‌ಗೆ 8.98 ಲಕ್ಷ ಲಸಿಕೆ ಸಿಗಲಿದೆ, ಇದು ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಪಡೆಯುವ ಗರಿಷ್ಠ ಪ್ರಮಾಣವಾಗಿದೆ. ಸದ್ಯ ಗುಜರಾತ್ ರಾಜ್ಯವು 1.39 ಕೋಟಿ ಡೋಸ್‌ಗಳನ್ನು ಪಡೆದಿದ್ದರೆ, 1.35 ಕೋಟಿ ಡೋಸ್‌ಗಳನ್ನು ಈಗಾಗಲೇ ನೀಡಿದೆ.
ಮಹಾರಾಷ್ಟ್ರ 6.03 ಲಕ್ಷ ಲಸಿಕೆ ಪ್ರಮಾಣವನ್ನು ಪಡೆಯುವ ಸಾಧ್ಯತೆಯಿದೆ. ರಾಜಸ್ಥಾನಕ್ಕೆ 4.50 ಲಕ್ಷ ಡೋಸ್ ಮತ್ತು ಉತ್ತರ ಪ್ರದೇಶಕ್ಕೆ ನಾಲ್ಕು ಲಕ್ಷ ಡೋಸ್ ಸಿಗಲಿದೆ. ಇತರ ರಾಜ್ಯಗಳಾದ ಪಶ್ಚಿಮ ಬಂಗಾಳ, ಬಿಹಾರ ಮತ್ತು ಛತ್ತೀಸ್‌ಗಢಗಳಿಗೆ ಕ್ರಮವಾಗಿ 3.95 ಲಕ್ಷ, 3.64 ಲಕ್ಷ ಮತ್ತು 3 ಲಕ್ಷ ಡೋಸ್ ಲಸಿಕೆ ಸಿಗಲಿದೆ. ಮುಂದಿನ ಮೂರು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ 84,700 ಪ್ರಮಾಣ ಸಿಗಲಿದೆ.
ಸಚಿವಾಲಯವು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಮುಂದಿನ ಮೂರು ದಿನಗಳಲ್ಲಿ ಹೆಚ್ಚಿನ ಲಸಿಕೆ ಪಡೆಯದ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇವೆ. ಅವುಗಳೆಂದರೆ ಹರಿಯಾಣ, ಲಡಾಖ್, ಉತ್ತರಾಖಂಡ್, ಜಾರ್ಖಂಡ್, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ತ್ರಿಪುರ, ಸಿಕ್ಕಿಂ, ಪುದುಚೇರಿ, ನಾಗಾಲ್ಯಾಂಡ್ , ಮಿಜೋರಾಂ, ಮೇಘಾಲಯ, ಮಣಿಪುರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಮತ್ತು ಗೋವಾ.
ಲಕ್ಷದ್ವೀಪದಲ್ಲಿ ಲಸಿಕೆ ಪ್ರಮಾಣವನ್ನು ಗರಿಷ್ಠ ಪ್ರಮಾಣದಲ್ಲಿ ವ್ಯರ್ಥ ಮಾಡಲಾಗಿದ್ದು, ಅದು ಪಡೆದ ಶೇಕಡಾ 22.7 ರಷ್ಟು ವ್ಯರ್ಥಮಾಡಿದೆ . ಇದರ ನಂತರ ಹರಿಯಾಣದಲ್ಲಿ 6.65 ಶೇಕಡಾ ವ್ಯರ್ಥ, ಅಸ್ಸಾಂ 6.07, ರಾಜಸ್ಥಾನ 5.50, ಪಂಜಾಬ್ ಶೇ 5.05, ಬಿಹಾರ 4.96, ದಾದ್ರಾ ಮತ್ತು ನಗರ ಹವೇಲಿ ಶೇ 4.93, ಮೇಘಾಲಯ ಶೇ 4.21, ಶೇಕಡಾ 3.94 ರೊಂದಿಗೆ ತಮಿಳುನಾಡು ಮತ್ತು ಶೇಕಡಾ 3.56 ರಷ್ಟು ಲಸಿಕೆ ವ್ಯರ್ಥಮಾಡಿದೆ