ತಿರುವನಂತಪುರಂ: ಕೋವಿಡ್ ಮೊದಲ ಲಸಿಕೆ ಬಳಿಕ 84 ದಿನಗಳ ಅಂತರವನ್ನು ಅನುಸರಿಸಿದೆ ಎರಡನೇ ಡೋಸ್ ಪಡೆಯಲು ಅವಕಾಶ ನೀಡಿದ್ದ ತನ್ನದೇ ಏಕ ಸದಸ್ಯ ಪೀಠ ನೀಡಿದ್ದ ಆದೇಶವನ್ನು ಕೇರಳ ಹೈಕೋರ್ಟ್ ರದ್ದು ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶಗಳನ್ನು ರದ್ದುಗೊಳಿಸಿ ತೀರ್ಪು ನೀಡಿದೆ. ಕೋವಿಡ್ -19 ಲಸಿಕೆಯ ಎರಡನೇ ಡೋಸ್ ಪಡೆಯಲು ನಿಗದಿತ 84 ದಿನಗಳ ಅಂತರ ಪಾಲನೆ ಕಡ್ಡಾಯವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸೆ.3ರಂದು ನ್ಯಾಯಮೂರ್ತಿ ಪಿ.ಬಿ.ಸುರೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠವು ಕಾರ್ಯನಿರ್ವಹಿಸಿದ್ದು, ಪಾವತಿಸಿದ ಡೋಸ್ ಪಡೆದ ಬಳಿಕ ಎರಡನೇ ಡೋಸ್‌ನ ಆರಂಭಿಕ ಅಂತರವನ್ನು ಅನುಸರಿಸಬೇಕು ಎಂದು ಹೇಳಿದೆ. ಕೋವಿಡ್ ಪೋರ್ಟಲ್‌ನಲ್ಲಿ ಅಗತ್ಯ ನಿಬಂಧನೆಗಳನ್ನು ಮಾಡಲು ನ್ಯಾಯಾಧೀಶರು ಕೇಂದ್ರಕ್ಕೆ ನಿರ್ದೇಶನ ನೀಡಿದ್ದರು. ಇದರಿಂದಾಗಿ ಮೊದಲ ಡೋಸ್‌ನ ನಾಲ್ಕು ವಾರಗಳ ಬಳಿಕ ಎರಡನೇ ಡೋಸ್ ಪಡೆಯಲು ಸಿದ್ಧರಿರುವ ಜನರಿಗೆ ಅನುಕೂಲವಾಗಿತ್ತು ಎನ್ನಲಾಗಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವವರು ಸೇರಿದಂತೆ ಸರ್ಕಾರಿ ಅಧಿಕಾರಿಗಳು, ಶೈಕ್ಷಣಿಕ ಅಥವಾ ಕೆಲಸದ ನಿಮಿತ್ತ ವಿದೇಶಕ್ಕೆ ಪ್ರಯಾಣಿಸುವ ವ್ಯಕ್ತಿಗಳಿಗೆ ಕಡಿಮೆ ಅಂತರದಲ್ಲಿ ಎರಡೂ ಲಸಿಕೆಗಳನ್ನು ಪಡೆಯಲು ಕೇಂದ್ರ ಸರ್ಕಾರ ಅನುಮತಿಸಿತ್ತು ಎಂದು ಕೋರ್ಟ್ ಹೇಳಿದೆ.
ಕೊಚ್ಚಿ ಮೂಲದ ಕಿಟೆಕ್ಸ್ ಗಾರ್ಮೆಂಟ್ಸ್ ತನ್ನ ಉದ್ಯೋಗಿಗಳಿಗೆ 84 ದಿನಗಳ ಅಂತರವನ್ನು ಕಾಯದೇ ಎರಡನೇ ಡೋಸ್ ಲಸಿಕೆ ನೀಡಲು ಅನುಮತಿ ಕೋರಿತ್ತು. ಇದೇ ಆಗಸ್ಟ್‌ನಲ್ಲಿ ಈ ವಿಷಯವು ಮೊದಲು ಕೇರಳ ಹೈಕೋರ್ಟ್‌ಗೆ ಬಂದಿತ್ತು.
ಇದನ್ನೂ ಓದಿ: ಕೇರಳ ಮಾಡೆಲ್‌ಗಳ ಸಾವಿಗೆ ಸ್ಫೋಟಕ ಟ್ವಿಸ್ಟ್; ಕಾರು ಅಪಘಾತಕ್ಕೆ ಡ್ರಗ್ ಪೆಡ್ಲರ್ ಕಾರಣ!