ETV Bharat / bharat

84 ಕೋಟಿ ಮೌಲ್ಯದ 12 ಕೆ.ಜಿ ಹೆರಾಯಿನ್ ವಶ: ಇಬ್ಬರು ಡ್ರಗ್ ಸ್ಮಗ್ಲರ್‌ಗಳು ಅರೆಸ್ಟ್​...

ದೇಶದ ಗಡಿಭಾಗದಲ್ಲಿ ಪಂಜಾಬ್ ಪೊಲೀಸರು, 84 ಕೋಟಿ ಮೌಲ್ಯದ 12 ಕೆ.ಜಿ ಹೆರಾಯಿನ್ ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಇಬ್ಬರು ಡ್ರಗ್ ಸ್ಮಗ್ಲರ್‌ಗಳನ್ನು ಬಂಧಿಸಿದ್ದಾರೆ.

84 crore worth 12 kg heroin seized
84 ಕೋಟಿ ಮೌಲ್ಯದ 12 ಕೆ.ಜಿ ಹೆರಾಯಿನ್ ವಶ: ಇಬ್ಬರು ಭಾರತೀಯ ಡ್ರಗ್ ಸ್ಮಗ್ಲರ್‌ಗಳ ಅರೆಸ್ಟ್​...
author img

By ETV Bharat Karnataka Team

Published : Oct 12, 2023, 11:43 AM IST

ಚಂಡೀಗಢ: ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದ ಕಳ್ಳಸಾಗಣೆದಾರರಿಗೆ ಪಂಜಾಬ್ ಪೊಲೀಸರು ಬಿಗ್​ ಶಾಕ್​ ನೀಡಿದ್ದಾರೆ. ಪಂಜಾಬ್ ಪೊಲೀಸರು ದೇಶದ ಗಡಿಭಾಗಕ್ಕೆ ಕಳುಹಿಸಲಾದ 12 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. ಅಷ್ಟೇ ಅಲ್ಲ, ಫಿರೋಜ್‌ಪುರದ ಕೌಂಟರ್ ಇಂಟೆಲಿಜೆನ್ಸ್ (ಸಿಐ) ತಂಡ ಇಬ್ಬರು ಭಾರತೀಯ ಕಳ್ಳಸಾಗಣೆದಾರರನ್ನು ಬಂಧಿಸಿದೆ. ಕಳ್ಳಸಾಗಾಣಿಕೆದಾರರು ಈ ಸರಕುಗಳನ್ನು ಗಡಿಯಾಚೆಯಿಂದ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದರು ಎಂದು ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು.

  • Big Blow to Trans Border narcotic network: In an intelligence-led operation, CI Ferozepur has apprehended 2 persons and recovered 12 Kg Heroin.

    FIR under NDPS Act is registered and Investigations on-going to establish backward & forward linkages (1/2) pic.twitter.com/NsK48hQBwV

    — DGP Punjab Police (@DGPPunjabPolice) October 12, 2023 " class="align-text-top noRightClick twitterSection" data=" ">

ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡ ಪಂಜಾಬ್ ಡಿಜಿಪಿ: ಪಂಜಾಬ್ ಡಿಜಿಪಿ ಗೌರವ್ ಯಾದವ್ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 'ಟ್ರಾನ್ಸ್-ಬಾರ್ಡರ್ ಡ್ರಗ್ ನೆಟ್‌ವರ್ಕ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಗುಪ್ತಚರ ಸಂಸ್ಥೆ ನೇತೃತ್ವದ ಕಾರ್ಯಾಚರಣೆ ಸಂದರ್ಭದಲ್ಲಿ, ಸಿಐ ಫಿರೋಜ್‌ಪುರ 2 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 12 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ'' ಎಂದು ಅವರು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.

4.94 ಕೋಟಿ ರೂ. ನಗದು ವಶ: ಇದಕ್ಕೂ ಮುನ್ನ ಮಾಹಿತಿ ನೀಡಿದ ಪಂಜಾಬ್ ಡಿಜಿಪಿ, 'ಅಂತರ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಪಂಜಾಬ್ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಮುಲ್ಲನ್‌ಪುರ ದಖಾದಿಂದ ಮಾದಕವಸ್ತು ಕಳ್ಳಸಾಗಣೆದಾರನನ್ನು ಬಂಧಿಸಿದ್ದಾರೆ. ಜೊತೆಗೆ 38 ನಕಲಿ ವಾಹನ ನಂಬರ್ ಪ್ಲೇಟ್‌ಗಳು ಮತ್ತು 1 ಪಿಸ್ತೂಲ್‌ನೊಂದಿಗೆ 4.94 ಕೋಟಿ ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನ್ಯೂಸ್​ಕ್ಲಿಕ್​ ಮೇಲೆ ಸಿಬಿಐ ದಾಳಿ: ವಿದೇಶಿ ದೇಣಿಗೆ ಕಾಯ್ದೆಯಡಿ ಕೇಸ್​, ಕಚೇರಿ-ನಿವಾಸಗಳಲ್ಲಿ ಶೋಧ

ಕಳೆದ ಒಂದೂವರೆ ತಿಂಗಳಲ್ಲಿ ಸುಮಾರು 145 ಕೆಜಿ ಹೆರಾಯಿನ್ ವಶ: ಮತ್ತೊಂದೆಡೆ, ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಫಾಜಿಲ್ಕಾದಲ್ಲಿರುವ ಪೊಲೀಸ್ ಇಲಾಖೆಯ ಎಸ್‌ಎಸ್‌ಒಸಿ ತಂಡವು 145 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದೆ ಎಂಬ ಮಾಹಿತಿಯನ್ನು ಪಂಜಾಬ್ ಡಿಜಿಪಿ ಸೆಪ್ಟೆಂಬರ್ 9 ರಂದು ಎಕ್ಸ್​ನಲ್ಲಿ ಹಂಚಿಕೊಂಡಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವ್ಯಾಪಕ ಕ್ರಮ ಕೈಗೊಳ್ಳುತ್ತಿರುವ ಪೊಲೀಸರು ಕಳ್ಳಸಾಗಣೆದಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಈ ಬಗ್ಗೆ ಸುಳಿವು ಸಿಕ್ಕಲ್ಲಿ ತಕ್ಷಣ ಜಾಲ ಭೇದಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ : ಸುಕೇಶ್​ ಚಂದ್ರಶೇಖರ್​ಗೆ ಜೈಲಿನಲ್ಲಿ ಸಹಕರಿಸಿದ ಆರೋಪ.. ಅಧಿಕಾರಿಗಳ ವಿರುದ್ಧ ತನಿಖೆಗೆ ಸೂಚಿಸಿದ ಎಲ್​​ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.