ETV Bharat / bharat

ನೇತಾಜಿ 125ನೇ ಜನ್ಮ ದಿನೋತ್ಸವ: ಪ್ರಧಾನಿ ಅಧ್ಯಕ್ಷತೆಯಲ್ಲಿ ದೇವೇಗೌಡ, ಡಾ.ಸಿಂಗ್​ ಸೇರಿ 82 ಸದಸ್ಯರ ಸಮಿತಿ ರಚನೆ - 82 ಜನ ಸದಸ್ಯರ ಉನ್ನತ ಸಮಿತಿ ರಚನೆ

ನೇತಾಜಿಯವರ ರಾಷ್ಟ್ರ ಸೇವೆಯನ್ನು ಸ್ಮರಿಸಲು ಕೇಂದ್ರ ಸರ್ಕಾರ 021ರ ಜನವರಿ 19ರಂದು ಅವರ ಜನ್ಮದಿನವನ್ನು 'ಪರಾಕ್ರಮ್ ದಿವಸ್' ಎಂದು ಆಚರಿಸಲು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಈಗ 125ನೇ ಜನ್ಮ ದಿನೋತ್ಸವ ಅಂಗವಾಗಿ 82 ಜನ ಸದಸ್ಯರ ಉನ್ನತ ಸಮಿತಿಯನ್ನು ರಚನೆ ಮಾಡಿದೆ.

Netaji Bose
Netaji Bose
author img

By

Published : Mar 14, 2022, 3:30 PM IST

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಸುಭಾಷ್​ಚಂದ್ರ ಬೋಸ್​ ಅವರ 125ನೇ ಜನ್ಮ ದಿನೋತ್ಸವ ಸ್ಮರಣಾರ್ಥ ಕೇಂದ್ರ ಸರ್ಕಾರ 82 ಜನ ಸದಸ್ಯರ ಉನ್ನತ ಸಮಿತಿಯನ್ನು ರಚನೆ ಮಾಡಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಮಾಜಿ ಪ್ರಧಾನಿಗಳಾದ ಎಚ್​.ಡಿ.ದೇವೇಗೌಡ, ಡಾ.ಮನಮೋಹನ್​ ಸಿಂಗ್​ ಮತ್ತು ಲೋಕಸಭೆಯ ಸ್ಪೀಕರ್​ ಓಂ ಬಿರ್ಲಾ ಸೇರಿ ಹಲವರು ಇದ್ದಾರೆ.

ಸುಭಾಷ್​ಚಂದ್ರ ಬೋಸ್​ ಅವರು 1897ರ ಜನವರಿ 23ರಂದು ಓಡಿಶಾದ ಕಟಕ್​ನಲ್ಲಿ ಜನಿಸಿದ್ದರು. ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಂಡಿಯನ್​ ನ್ಯಾಷನಲ್​ ಆರ್ಮಿ (ಐಎನ್​ಎ) ಸ್ಥಾಪಿಸಿದ್ದರು. ಅವರ ಜನ್ಮ ದಿನೋತ್ಸವ ನಿಮಿತ್ತ ಕೇಂದ್ರ ಸರ್ಕಾರ ಪ್ರಮುಖ ರಾಜಕೀಯ ನಾಯಕರು, ಸಾಂಸ್ಕೃತಿಕ ಪ್ರಮುಖರು ಹಾಗೂ ಕ್ರೀಡಾಪಟುಗಳು ಮತ್ತು ಸಿನಿಮಾ ತಾರೆಗಳನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಿದೆ.

ಲೋಕಸಭೆಯ ಸ್ಪೀಕರ್​ ಓಂ ಬಿರ್ಲಾ, ಮಾಜಿ ಪ್ರಧಾನಿಗಳಾದ ಎಚ್​.ಡಿ.ದೇವೇಗೌಡ, ಡಾ.ಮನಮೋಹನ್​ ಸಿಂಗ್​, ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್​​ ಗಂಗೂಲಿ, ಹಿರಿಯ ನಟ ಮಿಥುನ್ ಚಕ್ರವರ್ತಿ ಮತ್ತು ನಟಿ ಕಾಜೋಲ್ ಮತ್ತು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಈ ಸಮಿತಿಯಲ್ಲಿದ್ದಾರೆ.

ಕೇಂದ್ರ ಸಚಿವರು, ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ಸಲಹೆಗಾರ ಅಮಿತ್​ ಖರೆ, ಪಶ್ಚಿಮ ಬಂಗಾಳ, ಮಣಿಪುರ ರಾಜ್ಯಪಾಲರು, ಒಡಿಶಾ, ಪಶ್ಚಿಮ ಬಂಗಾಳ, ಮಣಿಪುರ, ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್, ಮಿಜೋರಾಂ ಮುಖ್ಯಮಂತ್ರಿಗಳು ಮತ್ತು ರಾಜ್ಯಸಭೆಯ ಉಪ ಸಭಾಪತಿ, ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರೂ ಸಮಿತಿಯಲ್ಲಿದ್ದಾರೆ.

ಅಲ್ಲದೇ, ಎನ್​ಸಿಪಿ ವರಿಷ್ಠ ಶರದ್​ ಪವಾರ್​, ಕಾಂಗ್ರೆಸ್​ ನಾಯಕ ಗುಲಾಂನಬಿ ಆಜಾದ್​ ಕೂಡ 82 ಜನ ಸದಸ್ಯರ ಸಮಿತಿಯಲ್ಲಿ ಇದ್ದು, ನೇತಾಜಿ ಬೋಸ್ ಅವರ ಪುತ್ರಿ ಅನಿತಾ ಬೋಸ್, ಅವರ ಸೋದರಳಿಯ ಅರ್ಧೇಂದು ಬೋಸ್, ಅವರ ಮೊಮ್ಮಗ ಚಂದ್ರಕುಮಾರ್ ಬೋಸ್ ಮತ್ತು ಮೊಮ್ಮಗಳು ರೇಣುಕಾ ಮಾಲಕರ್ ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಇಂಡಿಯನ್​ ನ್ಯಾಷನಲ್​ ಆರ್ಮಿಯ ಪದಾಧಿಕಾರಿಗಳನ್ನೂ ಸಮಿತಿ ಒಳಗೊಂಡಿದೆ.

ಪತ್ರಕರ್ತ ಕಾಂಚನ್ ಗುಪ್ತಾ, ಲೇಖಕ, ಶಿಕ್ಷಣ ತಜ್ಞ ಅನಿರ್ಬನ್ ಗಂಗೂಲಿ, ಭಾರತೀಯ ರಾಷ್ಟ್ರೀಯ ಫುಟ್‌ಬಾಲ್ ತಂಡದ ಮಾಜಿ ಆಟಗಾರ ಸುಬ್ರತಾ ಭಟ್ಟಾಚಾರ್ಯ, ಚಲನಚಿತ್ರ ನಿರ್ಮಾಪಕ ಕೌಶಿಕ್ ಗಂಗೂಲಿ, ಮೇದಾಂತ ಆಸ್ಪತ್ರೆಯ ರವಿ ಕಾಸ್ಲಿವಾಲ್ ಮತ್ತು ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ನ ಪ್ರಧಾನ ಕಾರ್ಯದರ್ಶಿ ಸ್ವಾಮಿ ಸುವೀರಾನಂದ ಮಹಾರಾಜ್ ಕೂಡ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕಳೆದ 2021ರ ಜನವರಿ 19ರಂದು ನೇತಾಜಿಯವರ ರಾಷ್ಟ್ರ ಸೇವೆಯನ್ನು ಸ್ಮರಿಸಲು ಅವರ ಜನ್ಮದಿನವನ್ನು 'ಪರಾಕ್ರಮ್ ದಿವಸ್' ಎಂದು ಆಚರಿಸಲು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು.

ಇದನ್ನೂ ಓದಿ: ಸಂಸತ್ತಿನ ಬಜೆಟ್​ ಅಧಿವೇಶನ: ಆರೋಗ್ಯಕರ ಚರ್ಚೆ ಬಗ್ಗೆ ಸ್ಪೀಕರ್​ ಓಂಬಿರ್ಲಾ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.