ಫೋರ್ಬಂದರ್(ಗುಜರಾತ್) : ಅರಬ್ಬೀ ಸಮುದ್ರದ ಮೂಲಕ 800 ಕೆಜಿಯಷ್ಟು ಡ್ರಗ್ಸ್ ಸಾಗಣೆ ಮಾಡುತ್ತಿದ್ದ ಹಡಗಿನ ಮೇಲೆ ದಾಳಿ ಮಾಡಿ 2 ಸಾವಿರ ಕೋಟಿ ರೂಪಾಯಿ ಮೌಲ್ಯದ ಅಫೀಮನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ಮತ್ತು ಭಾರತೀಯ ನೌಕಾದಳ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ. ಅಲ್ಲದೇ, ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಡ್ರಗ್ಸ್ ಅನ್ನು ಸಮುದ್ರದ ಮೂಲಕ ವಶಪಡಿಸಿಕೊಳ್ಳಲಾಗಿದೆ.
-
In a well coordinated multi-agency operation at sea, the Narcotics Control Bureau #NCB, with active support of #IndianNavy, successfully seized 800 kgs of #narcotics substances (1/2).#Maritimesecurity@narcoticsbureau@SpokespersonMoD @DefenceMinIndia @PIBHomeAffairs pic.twitter.com/wpuwLVXWFC
— SpokespersonNavy (@indiannavy) February 12, 2022 " class="align-text-top noRightClick twitterSection" data="
">In a well coordinated multi-agency operation at sea, the Narcotics Control Bureau #NCB, with active support of #IndianNavy, successfully seized 800 kgs of #narcotics substances (1/2).#Maritimesecurity@narcoticsbureau@SpokespersonMoD @DefenceMinIndia @PIBHomeAffairs pic.twitter.com/wpuwLVXWFC
— SpokespersonNavy (@indiannavy) February 12, 2022In a well coordinated multi-agency operation at sea, the Narcotics Control Bureau #NCB, with active support of #IndianNavy, successfully seized 800 kgs of #narcotics substances (1/2).#Maritimesecurity@narcoticsbureau@SpokespersonMoD @DefenceMinIndia @PIBHomeAffairs pic.twitter.com/wpuwLVXWFC
— SpokespersonNavy (@indiannavy) February 12, 2022
ಅರಬ್ಬೀ ಸಮುದ್ರದಿಂದ ಭಾರತ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡಲು ಡ್ರಗ್ಸ್ ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಎನ್ಸಿಬಿ ಮತ್ತು ನೌಕಾದಳದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದಾಗ, 800 ಕೆಜಿಯಷ್ಟು ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ.
2 ಸಾವಿರ ಕೋಟಿ ಬೆಲೆಬಾಳುವ ಡ್ರಗ್ಸ್ : ಅರಬ್ಬೀ ಸಮುದ್ರದಲ್ಲಿ ವಶಪಡಿಸಿಕೊಂಡ ಡ್ರಗ್ಸ್ನಲ್ಲಿ ಭಾರಿ ಬೇಡಿಕೆಯ, ಉತ್ತಮ ಗುಣಮಟ್ಟದ ಹ್ಯಾಶಿಶ್ ಮತ್ತು 234 ಕೆಜಿ ಕ್ರಿಸ್ಟಲ್ ಮೆಥಾಂಫೆಟಮೈನ್ ಮತ್ತು ಅಲ್ಪ ಪ್ರಮಾಣದ ಹೆರಾಯಿನ್ ಇದೆ. ಈ ಡ್ರಗ್ಸ್ನ ಬೆಲೆ ವಿದೇಶಿ ಮಾರುಕಟ್ಟೆಯಲ್ಲಿ 2 ಸಾವಿರಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
ಓದಿ: -45 ಡಿಗ್ರಿ ತಾಪಮಾನದಲ್ಲೂ ಗಡಿ ರಕ್ಷಣೆ ಕಾರ್ಯದಲ್ಲಿ 'ಹಿಮವೀರ್' ಪಡೆ