ETV Bharat / bharat

80ನೇ ವಯಸ್ಸಿಗೆ ಪಿಎಚ್​ಡಿ ಪದವಿ ಪಡೆದ ಶಶಿಕಲಾ ರಾವಲ್ - 80ನೇ ವಯಸ್ಸಿಗೆ ಪಿಹೆಚ್‌.ಡಿ. ಪದವಿ ಪಡೆದ ಶಶಿಕಲಾ ರಾವಲ್

ವಿಕ್ರಮ್ ವಿಶ್ವವಿದ್ಯಾಲಯದ 24 ನೇ ಸಮ್ಮೇಳನ ಸಮಾರಂಭದಲ್ಲಿ ಸಂಸ್ಕೃತದಲ್ಲಿ ಪಿಎಚ್​ಡಿ ಪಡೆದ 80 ವರ್ಷದ ಶಶಿಕಲಾ ರಾವಲ್ ಅವರನ್ನು ಗೌರವಿಸಲಾಯಿತು.

Vikram University
Vikram University
author img

By

Published : Feb 21, 2021, 11:44 AM IST

ಮಧ್ಯಪ್ರದೇಶ: ಕಲಿಕೆಗೆ ವಯಸ್ಸಿನ ನಿರ್ಬಂಧವಿಲ್ಲವೆಂದು ಆಗಾಗ ಕೆಲವರು ತಮ್ಮ ಪ್ರಯತ್ನಗಳ ಮೂಲಕ ತೋರಿಸುತ್ತಿರುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯೊಂದು ಇಲ್ಲಿದೆ ನೋಡಿ.

ಪಿಎಚ್​ಡಿ ಪದವೀಧರ ಎಂದರೆ ಅದೊಂದು ಗೌರವ. ತನ್ನ ಹೆಸರಿನ ಮುಂದೆ ಡಾಕ್ಟರ್‌ ಎಂಬ ಪದ ಇರಬೇಕೆಂಬ ಆಸೆ ಅನೇಕರಿಗಿರುತ್ತದೆ. ಆದರೆ ಇಲ್ಲೊಬ್ಬರು ತಮ್ಮ 80ನೇ ವಯಸ್ಸಿನಲ್ಲಿ ಪಿಎಚ್​ಡಿ ಪಡೆದು ಅಪೂರ್ವ ಸಾಧನೆ ಮಾಡಿದ್ದಾರೆ. ಅವರೇ ಶಶಿಕಲಾ ರಾವಲ್. ವಿಕ್ರಮ್ ವಿಶ್ವವಿದ್ಯಾಲಯದ 24 ನೇ ಸಮ್ಮೇಳನ ಸಮಾರಂಭದಲ್ಲಿ 80 ನೇ ವಯಸ್ಸಿಗೆ ಸಂಸ್ಕೃತದಲ್ಲಿ ಪಿಎಚ್​ಡಿ ಪದವಿ ಪಡೆದ ಶಶಿಕಲಾ ರಾವಲ್ ಅವರನ್ನು ಗೌರವಿಸಲಾಯಿತು.

ಮಧ್ಯಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್, ಶಶಿಕಲಾ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. 80ರ ವಯಸ್ಸಿನಲ್ಲೂ ಕಠಿಣ ಪರಿಶ್ರಮದಿಂದ ನೀವು ಪದವಿ ಪಡೆದುಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾದರಿಯಾಗಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಸಮಾರಂಭದಲ್ಲಿ ಒಟ್ಟು 342 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅದರಲ್ಲಿ 239 ವಿದ್ಯಾರ್ಥಿಗಳಿಗೆ ಪಿಎಚ್​ಡಿ ಪದವಿ, 69 ಮಂದಿಗೆ ಸ್ನಾತಕೋತ್ತರ ಪ್ರಮಾಣ ಪತ್ರ ಮತ್ತು 34 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಕುಲಪತಿ ಪ್ರೊ. ಅಖಿಲೇಶ್ ಕುಮಾರ್ ಪಾಂಡೆ, ಉನ್ನತ ಶಿಕ್ಷಣ ಸಚಿವ ಡಾ. ಯಾದವ್, ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಡಿ.ಪಿ. ಸಿಂಗ್ ಮತ್ತು ವಿದ್ಯಾರ್ಥಿಗಳು, ಗಣ್ಯರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.