ETV Bharat / bharat

ಕೋವಿಡ್ ಎರಡನೇ ಅಲೆ ಇನ್ನೂ ಮುಗಿದಿಲ್ಲ: ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ - ಕೇಂದ್ರ ಆರೋಗ್ಯ ಸಚಿವಾಲಯದ ಲವ ಅಗರ್ವಾಲ್​

ದೇಶದ ಈಶಾನ್ಯ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದು ಅತ್ಯಂತ ಮುಖ್ಯ ಎಂದು ಲವ ಅಗರ್ವಾಲ್ ತಿಳಿಸಿದ್ದಾರೆ.

80-per-cent-of-new-cases-are-coming-from-90-districts-in-india-centre
ಇನ್ನೂ ಕೋವಿಡ್ ಎರಡನೇ ಅಲೆ ಮುಗಿದಿಲ್ಲ: ಕೇಂದ್ರ ಆರೋಗ್ಯ ಇಲಾಖೆ ವಾರ್ನಿಂಗ್​
author img

By

Published : Jul 6, 2021, 8:13 PM IST

ನವದೆಹಲಿ: ದೇಶದಲ್ಲಿ ಎಲ್ಲಾ ಕಡೆಗಳಲ್ಲೂ ಕೋವಿಡ್ ಸೋಂಕಿತರ ಪ್ರಮಾಣ ಒಂದೇ ತೆರನಾಗಿಲ್ಲ. ಶೇಕಡಾ 80ರಷ್ಟು ಕೋವಿಡ್ ಪ್ರಕರಣಗಳು ಕೇವಲ 90 ಜಿಲ್ಲೆಗಳಲ್ಲಿ ಕಂಡುಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೋವಿಡ್ ಸ್ಥಿತಿಗತಿಗಳ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್​​, ನಾವು ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಎಲ್ಲಾದರೂ ಒಂದೆಡೆ ಕೋವಿಡ್ ಪ್ರಕರಣಗಳು ದಾಖಲಾದರೆ, ಎಲ್ಲಾ ರಾಜ್ಯಗಳು ಕಟ್ಟುನಿಟ್ಟಾದ ನಿರ್ಬಂಧಗಳನ್ನು ಜಾರಿಗೆ ತರಲೇಬೇಕು. ಸಾಂಕ್ರಾಮಿಕ ರೋಗದ ಎರಡನೇ ಅಲೆ ಇನ್ನೂ ಮುಗಿದಿಲ್ಲ ಎಂದು ಎಚ್ಚರಿಸಿದ್ದಾರೆ.

ಈಶಾನ್ಯ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದೂ ಆತಂಕಕ್ಕೆ ಕಾರಣವಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದು ಅತ್ಯಂತ ಮುಖ್ಯ ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ರಾಜ್ಯಗಳಲ್ಲಿ ಲಾಕ್​ಡೌನ್ ಸಡಿಲಿಕೆ ಮಾಡಲಾಗಿದೆ. ಜನರು ಮಾಸ್ಕ್​ ಇಲ್ಲದೇ ಓಡಾಡಲು ಮುಂದಾಗಿದ್ದಾರೆ. ಲಾಕ್​ಡೌನ್ ಮುಗಿದಿದ್ದು, ನಾವು ಆರಾಮಾಗಿ ಓಡಾಡಬಹುದು ಎಂದು ಜನರು ಭಾವಿಸಿದ್ದಾರೆ. ಆದರೆ ಈ ರೀತಿಯ ಭಾವನೆ ಇಟ್ಟುಕೊಳ್ಳಬಾರದು ಏಕೆಂದರೆ ಇನ್ನೂ ನಾವು ಎರಡನೇ ಅಲೆಯೊಂದಿಗೆ ಹೋರಾಡುತ್ತಿದ್ದೇವೆ ಎಂದು ಲವ ಅಗರ್ವಾಲ್ ಹೇಳಿದ್ದಾರೆ.

ಆರೋಗ್ಯ ಸಚಿವಾಲಯದ ಸಮೀಕ್ಷೆ ನಡೆಸಿದ್ದು, ಮಾಸ್ಕ್​ ಬಳಕೆ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಎಲ್ಲರೂ ಮರೆತಿದ್ದಾರೆ. ಶೇಕಡಾ 24ರಷ್ಟು ಮಂದಿ ಮಾಸ್ಕ್ ಧರಿಸುವ ಕಾಳಜಿ ಹೊಂದಿಲ್ಲ. ಶೇಕಡಾ 58ರಷ್ಟು ಮಂದಿ ಮಿತಿಯಲ್ಲಿ ಮಾರ್ಗಸೂಚಿ ಪಾಲಿಸುತ್ತಾರೆ. ಶೇಕಡಾ 15ರಷ್ಟು ಮಂದಿ ಅತ್ಯುತ್ತಮವಾಗಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: ನಾಳೆ ಸಂಜೆಯೇ ಕೇಂದ್ರ ಸಚಿವ ಸಂಪುಟ ಪುನರ್​ರಚನೆ.!

ಮಹಾರಾಷ್ಟ್ರದಲ್ಲಿ 15, ತಮಿಳುನಾಡಿನಲ್ಲಿ 15, ಕೇರಳದಲ್ಲಿ 14, ಒಡಿಶಾದಲ್ಲಿ 11, ಆಂಧ್ರಪ್ರದೇಶದಲ್ಲಿ 10, ಅಸ್ಸಾಂನಲ್ಲಿ 9 ಮತ್ತು ಕರ್ನಾಟಕದಲ್ಲಿ 8 ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣ ಕೋವಿಡ್ ಪ್ರಕರಣಗಳು ಕಂಡುಬಂದಿವೆ. ಜೂನ್ 29ರಿಂದ ಜುಲೈ 5ರ ನಡುವೆ ಒಟ್ಟು 73 ಜಿಲ್ಲೆಗಳಲ್ಲಿ ಶೇಕಡಾ 10ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವಿಟಿ ಕಂಡುಬಂದಿದೆ ಎಂದು ಲವ ಅಗರ್ವಾಲ್ ಸ್ಪಷ್ಟನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.