ತಿರುಚಿ(ತಮಿಳುನಾಡು): ತಿರುಚಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ವಾಯು ಗುಪ್ತಚರ ಅಧಿಕಾರಿಗಳು ಹತ್ತು ಪ್ರಯಾಣಿಕರಿಂದ 4.25 ಕೋಟಿ ರೂ. ಮೌಲ್ಯದ 8.5 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಯಾಣಿಕರು ದುಬೈನಿಂದ ತಿರುಚಿ ವಿಮಾನ ನಿಲ್ದಾಣಕ್ಕೆ ಇಂಡಿಗೊ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಮೂಲಕ ಆಗಮಿಸಿದ್ದರು. ಕೇಂದ್ರ ವಾಯು ಗುಪ್ತಚರ ಅಧಿಕಾರಿಗಳು ಪ್ರಯಾಣಿಕರ ವಸ್ತುಗಳನ್ನು ಹುಡುಕಿದ್ದು, 10 ಪ್ರಯಾಣಿಕರಿಂದ ಸುಮಾರು 8.5 ಕೆಜಿ ಚಿನ್ನವನ್ನು ಪತ್ತೆ ಮಾಡಿದ್ದಾರೆ.
ಓದಿ: ಜಗತ್ತಿನಲ್ಲಿ 15 ಲಕ್ಷ ಗಡಿ ದಾಟಿದ ಕೊರೊನಾಗೆ ಬಲಿಯಾದವರ ಸಂಖ್ಯೆ
ಪ್ರಯಾಣಿಕರು ತಮ್ಮ ದೇಹದ ಮೇಲೆ ಚಿನ್ನವನ್ನು ಇರಿಸಿ ಮರೆ ಮಾಚುವ ಮೂಲಕ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದರು. ಸದ್ಯ ಎಲ್ಲ 10 ಪ್ರಯಾಣಿಕರನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಿದ್ದಾರೆ.
ಇದಕ್ಕೂ ಮೊದಲು ಕಸ್ಟಮ್ಸ್ ಇಲಾಖೆ ದುಬೈನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಇಬ್ಬರು ಪ್ರಯಾಣಿಕರಿಂದ 35.5 ಲಕ್ಷ ಮೌಲ್ಯದ 706 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿತ್ತು.