ಜೈಪುರ (ರಾಜಸ್ಥಾನ): ಸರ್ಕಾರದ ಅನುದಾನದಡಿ ಖಾಸಗಿವರು ನಡೆಸುತ್ತಿದ್ದ ಚುರು ಜಿಲ್ಲೆಯ ಗೋಶಾಲೆಯೊಂದರಲ್ಲಿ ವಿಷಾಹಾರ ಸೇವಿಸಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 78 ಹಸುಗಳು ಮೃತಪಟ್ಟಿವೆ ಎನ್ನಲಾಗುತ್ತಿದೆ. ಅಧಿಕಾರಿಯೊಬ್ಬರು ಶನಿವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸರ್ಕಾರದ ಅನುದಾನದಡಿ ಚುರು ಜಿಲ್ಲೆಯ ಬಿಲ್ಯುಬಾಸ್ನ ರಾಂಪುರ ಗ್ರಾಮದಲ್ಲಿ ಈ ಗೋಶಾಲೆಯನ್ನು ನಡೆಸಲಾಗುತ್ತಿದ್ದು, ಶುಕ್ರವಾರ ರಾತ್ರಿಯಿಂದ ಇಲ್ಲಿಯವರೆಗೆ ಒಟ್ಟು 78 ಹಸುಗಳು ಮೃತಪಟ್ಟಿವೆ. ವಿಷಹಾರ ಸೇವನೆಯಿಂದ ಹಲವು ಗೋವುಗಳು ಅನಾರೋಗ್ಯದಿಂದ ಬಳಲುತ್ತಿವೆ ಎಂದು ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಗದೀಶ್ ಹೇಳಿದ್ದಾರೆ.
ಮೇವಿನ ಮಾದರಿಗಳನ್ನು ಪರೀಕ್ಷೆಗೆ ಕಳಿಸಿಕೊಡಲಾಗಿದೆ. ಗೋಪಾಷ್ಟಮಿ ಹಬ್ಬಕ್ಕೂ ಮುನ್ನ ಕೃಷ್ಣನಿಗೆ ಪ್ರಿಯವಾದ ಗೋವುಗಳ ಸಾವು ಕಂಡು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.