ETV Bharat / bharat

75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗೆ 75 ಯುದ್ಧ ವಿಮಾನಗಳ ಹಾರಾಟ - 5 ರಾಫೆಲ್​ ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನ

17 ಜಾಗ್ವಾರ್​ ವಿಮಾನಗಳು 75ರ ಮಾದರಿಯಲ್ಲಿ ಹಾರಾಟ ನಡೆಸಿ ರಂಜಿಸಲಿವೆ. ನೌಕಾಪಡೆಯ ಮಿಗ್​-29ಕೆ ಮತ್ತು ಪಿ-81 ಕೂಡ ಇದರಲ್ಲಿ ಇರಲಿವೆ ಎಂದು ಮಾಹಿತಿ ನೀಡಿದ್ದಾರೆ..

celebrations
ವಿಮಾನಗಳ ಹಾರಾಟ
author img

By

Published : Jan 17, 2022, 3:46 PM IST

ನವದೆಹಲಿ : 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತ ಜ.26ರ ಗಣರಾಜ್ಯೋತ್ಸವದಂದು 75 ಸೇನಾ ವಿಮಾನಗಳು ಆಗಸದಲ್ಲಿ ಹಾರಾಟ ನಡೆಸುವ ಮೂಲಕ ಅತಿದೊಡ್ಡ ವೈಮಾನಿಕ ಪ್ರದರ್ಶನ ನೀಡಲಿವೆ. ಸೇನೆಗೆ ಹೊಸದಾಗಿ ಸೇರಿಕೊಂಡ 5 ರಾಫೆಲ್​ ಯುದ್ಧ ವಿಮಾನಗಳೂ ಪ್ರದರ್ಶನದಲ್ಲಿ ಮೈನವಿರೇಳಿಸಲಿವೆ.

ವಾಯುಸೇನೆ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, 75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನೆಲೆ ದೆಹಲಿಯ ರಾಜಪಥದಲ್ಲಿ ಭಾರತೀಯ ವಾಯುಸೇನೆ, ನೌಕಾದಳ, ಭೂಸೇನೆಯ 75 ಯುದ್ಧ ವಿಮಾನಗಳು ಅದ್ಭುತ ವೈಮಾನಿಕ ಪ್ರದರ್ಶನಕ್ಕೆ ಸಜ್ಜಾಗಿವೆ. 5 ರಾಫೆಲ್​ ಯುದ್ಧ ವಿಮಾನಗಳು ಗಮನ ಸೆಳೆಯಲಿವೆ ಎಂದು ತಿಳಿಸಿದ್ದಾರೆ.

ಅಲ್ಲದೇ, 17 ಜಾಗ್ವಾರ್​ ವಿಮಾನಗಳು 75ರ ಮಾದರಿಯಲ್ಲಿ ಹಾರಾಟ ನಡೆಸಿ ರಂಜಿಸಲಿವೆ. ನೌಕಾಪಡೆಯ ಮಿಗ್​-29ಕೆ ಮತ್ತು ಪಿ-81 ಕೂಡ ಇದರಲ್ಲಿ ಇರಲಿವೆ ಎಂದು ಮಾಹಿತಿ ನೀಡಿದ್ದಾರೆ. ಇದಲ್ಲದೇ, 73ನೇ ಗಣರಾಜ್ಯೋತ್ಸವದಲ್ಲಿ ನಡೆಯುವ ಸೇನಾ ಪಥಸಂಚಲನ(ಪರೇಡ್) ಜನರ ಗಮನ ಸೆಳೆಯಲಿದೆ. ಕಜಕಿಸ್ತಾನ್​, ​ಕರ್ಗ್ಯಸ್ತಾನ್​​, ತಜಕಿಸ್ತಾನ, ತುರ್ಕುಮೆನಿಸ್ತಾನ್​, ಉಜ್ಬೇಕಿಸ್ತಾನ್​ ರಾಷ್ಟ್ರಗಳ ಅತಿಥಿಗಳು ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಪಂಜಾಬ್​ ವಿಧಾನಸಭೆ ಎಲೆಕ್ಷನ್​​ ಮುಂದೂಡಿಕೆ: ಹೊಸ ಡೇಟ್​​ ಘೋಷಿಸಿದ ಚು.ಆಯೋಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.