ETV Bharat / bharat

730 ವೈದ್ಯರು ಕೊರೊನಾಗೆ ಬಲಿ : ಇಲ್ಲೇ ಅತಿ ಹೆಚ್ಚು ಡಾಕ್ಟರ್​ಗಳ ಸಾವು! - ವೈದ್ಯರ ಮೇಲೆ ಕೊರೊನಾ ಪ್ರಭಾವ

ಕೋವಿಡ್​ನ ಎರಡನೇ ಅಲೆಯಿಂದಾಗಿ ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಬಿಹಾರದಲ್ಲಿ 115, ದೆಹಲಿಯಲ್ಲಿ 109, ಉತ್ತರಪ್ರದೇಶದಲ್ಲಿ 79 ಮಂದಿ ವೈದ್ಯರು ಸಾವನ್ನಪ್ಪಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ಆಂಧ್ರಪ್ರದೇಶ 38, ತೆಲಂಗಾಣ 37, ಕರ್ನಾಟಕ 9, ಕೇರಳ 24, ಮತ್ತು ಒಡಿಶಾದಲ್ಲಿ 31 ಮಂದಿ ವೈದ್ಯರು ಮೃತಪಟ್ಟಿದ್ದಾಗಿ ವರದಿಯಾಗಿದೆ..

IMA
ಭಾರತೀಯ ವೈದ್ಯಕೀಯ ಸಂಘ
author img

By

Published : Jun 16, 2021, 10:02 PM IST

ನವದೆಹಲಿ : ಕೋವಿಡ್​ ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ 730 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಿಳಿಸಿದೆ. ಬಿಹಾರದಲ್ಲಿ ಗರಿಷ್ಠ ಸಾವು ನೋವುಗಳು ವರದಿಯಾಗಿವೆ. ಬಿಹಾರದಲ್ಲಿ 115, ದೆಹಲಿಯಲ್ಲಿ 109, ಉತ್ತರಪ್ರದೇಶದಲ್ಲಿ 79 ಮಂದಿ ವೈದ್ಯರು ಸಾವನ್ನಪ್ಪಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ಆಂಧ್ರಪ್ರದೇಶ 38, ತೆಲಂಗಾಣ 37, ಕರ್ನಾಟಕ 9, ಕೇರಳ 24 ಮತ್ತು ಒಡಿಶಾದಲ್ಲಿ 31 ಮಂದಿ ವೈದ್ಯರು ಮೃತಪಟ್ಟಿದ್ದಾಗಿ ವರದಿಯಾಗಿದೆ.

ಭಾರತವು ಕಳೆದ 24 ಗಂಟೆಗಳಲ್ಲಿ 62,224 ಹೊಸ ಕೊರೊನಾ ಪ್ರಕರಣ ದಾಖಲಾಗಿದೆ. ಆದರೆ, ದೈನಂದಿನ ಪಾಸಿಟಿವಿಟಿ ಪ್ರಮಾಣವು ಶೇ. 3.22ಕ್ಕೆ ಇಳಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಸತತ 9 ದಿನಗಳವರೆಗೆ ದೈನಂದಿನ ಸಕಾರಾತ್ಮಕತೆ ಪ್ರಮಾಣವು ಶೇ.5ಕ್ಕಿಂತ ಕಡಿಮೆಯಾಗಿದೆ. ಸಕ್ರಿಯ ಪ್ರಕರಣಗಳು ಸದ್ಯ 8,65,432ಕ್ಕೆ ಇಳಿದಿವೆ. 70 ದಿನಗಳಲ್ಲಿ ಮೊದಲ ಬಾರಿಗೆ ಸುಮಾರು 9 ಲಕ್ಷಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿದೆ.

ಆರೋಗ್ಯ ಸಚಿವಾಲಯದ ಪ್ರಕಾರ, ರಾಷ್ಟ್ರೀಯ ಕೋವಿಡ್​ ಚೇತರಿಕೆ ಪ್ರಮಾಣವು ಶೇ.95.80ಕ್ಕೆ ಸುಧಾರಿಸಿದೆ. ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿ ಕೊರೊನಾ ಸಂಖ್ಯೆ 2,96,33,105ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 2,542 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ, ಒಟ್ಟು ಮೃತರ ಸಂಖ್ಯೆ 3,79,573 ಕ್ಕೆ ಏರಿದೆ. ಇನ್ನು 1,07,628 ಚೇತರಿಕೆಯಾಗಿದ್ದು, ಚೇತರಿಕೆಯ ಪ್ರಮಾಣವನ್ನು 2,83,88,100 ಕ್ಕೆ ತಲುಪಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.