ETV Bharat / bharat

ಸುರಕ್ಷಿತ, ಆರೋಗ್ಯಕರ ಗರ್ಭಧಾರಣೆಗಾಗಿ ಇಲ್ಲಿವೆ ಪ್ರಮುಖ ಸಲಹೆಗಳು - ತಾಯಿ ಮಗುವಿನ ಆರೋಗ್ಯ

ಗರ್ಭಾವಸ್ಥೆಯು ಮಹಿಳೆಯ ಜೀವನದಲ್ಲಿ ಅತ್ಯಂತ ಪ್ರಮುಖವಾದ ಮತ್ತು ಸವಾಲಿನ ಸಮಯವಾಗಿದೆ.ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ, ಅದಕ್ಕಾಗಿಯೇ ಈ ಹಂತದಲ್ಲಿ ವಿಶೇಷ ಕಾಳಜಿಯು ಪ್ರಮುಖ ಪಾತ್ರ ವಹಿಸುತ್ತದೆ. ತಾಯಿ ಆಗುವ ಆಸೆ ಈಡೇರಿಸಿಕೊಳ್ಳಲು ಸಂತೋಷ ಮತ್ತು ಸುರಕ್ಷಿತ ಗರ್ಭಧಾರಣೆಯನ್ನು ಹೊಂದಲು ಅನುಸರಿಸಬೇಕಾದ ಕೆಲವು ಮುನ್ನೆಚ್ಚರಿಕೆಗಳು ಇಲ್ಲಿವೆ..

pregnancy
ಆರೋಗ್ಯಕರ ಗರ್ಭಧಾರಣೆ
author img

By

Published : Oct 31, 2021, 7:52 PM IST

ಯಾವುದೇ ಮಹಿಳೆಯ ಜೀವನದಲ್ಲಿ ಗರ್ಭಧಾರಣೆಯು ಅತ್ಯಂತ ಸುಂದರವಾದ ಸಮಯ. ಗರ್ಭಧರಿಸಿದ ನಂತರ ಹೊಟ್ಟೆಯಲ್ಲಿ ಮಗು ಬೆಳವಣಿಗೆ ಆಗುವ ಪ್ರತಿ ಹಂತವು ತಾಯಿಗೆ ಬಹಳ ಸಂತೋಷಕರವಾದ ಭಾವನೆ ಉಂಟು ಮಾಡುತ್ತದೆ. ಆದಾಗ್ಯೂ, ಈ ಸಮಯದಲ್ಲಿ ಅವಳು ಕೆಲವು ಸಮಸ್ಯೆಗಳನ್ನು ಎದುರಿಸುತ್ತಾಳೆ ಮತ್ತು ಅವಳ ಬಗ್ಗೆ ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.

ಗರ್ಭಿಣಿಯರು ತಮ್ಮ ಜೀವನಶೈಲಿ ಮತ್ತು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಅಂತಾರೆ ಉತ್ತರಾಖಂಡ ಮೂಲದ ಸ್ತ್ರೀರೋಗ ತಜ್ಞೆ ಡಾ.ವಿಜಯಲಕ್ಷ್ಮಿ. ಎಲ್ಲಾ ಮೂರು ತ್ರೈಮಾಸಿಕಗಳಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವುದರ ಜೊತೆಗೆ, ಅನುಸರಿಸಬೇಕಾದ ಅನೇಕ ವಿಷಯಗಳಿವೆ. ಅವರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ.

ನಿಯಮಿತ ತಪಾಸಣೆ, ಆರೋಗ್ಯಕರ ಆಹಾರ ನಿರ್ಣಾಯಕ: ಗರ್ಭಾವಸ್ಥೆಯಲ್ಲಿ ಊಟವು ಹೆಚ್ಚು ಪೌಷ್ಟಿಕವಾಗಿರಬೇಕು. ಯಾಕೆಂದರೆ, ಹೊಟ್ಟೆಯಲ್ಲಿರುವ ಮಗು ಸಹ ಅದರ ಮೇಲೆ ಅವಲಂಬಿತವಾಗಿದೆ. ಅವಳ ಆಹಾರವು ಹಗುರವಾಗಿರಬೇಕು, ಜೀರ್ಣಿಸಿಕೊಳ್ಳಲು ಸುಲಭ ಮತ್ತು ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರಬೇಕು. ಗರ್ಭಾವಸ್ಥೆಯಲ್ಲಿ ಯಾವುದೇ ರೀತಿಯ ಜಂಕ್ ಮತ್ತು ತುಂಬಾ ಮಸಾಲೆಯುಕ್ತ ಆಹಾರವನ್ನು ಸಾಧ್ಯವಾದಷ್ಟು ತ್ಯಜಿಸಬೇಕು.

ಹಾಲು ಮತ್ತು ಇತರ ಡೈರಿ ಉತ್ಪನ್ನಗಳನ್ನು ನಿಯಮಿತವಾಗಿ ಸೇವಿಸುವುದು ಸಹ ಅಗತ್ಯ. ಆದಾಗ್ಯೂ, ಗರ್ಭಾವಸ್ಥೆಯಲ್ಲಿ ಕೆಲವು ಆಹಾರಗಳು ಹಾನಿಕಾರಕವಾಗಬಹುದು. ಆದ್ದರಿಂದ, ನೀವು ಗರ್ಭಿಣಿ ಎಂದು ದೃಢಪಡಿಸಿದ ನಂತರ, ನಿಮ್ಮ ಆಹಾರ ಸೇವನೆಯ ಬಗ್ಗೆ ವೈದ್ಯರ ಬಳಿ ಸಲಹೆ ಪಡೆಯಿರಿ. ಇದಲ್ಲದೆ, ನಿಯಮಿತ ತಪಾಸಣೆಗಳನ್ನು ನಿರ್ಲಕ್ಷಿಸಬೇಡಿ ಮತ್ತು ತಾಯಿ-ಮಗು ಇಬ್ಬರ ಆರೋಗ್ಯದ ಬಗ್ಗೆ ತಿಳಿಯಲು ಅಲ್ಟ್ರಾಸೌಂಡ್ ಮತ್ತು ಸೋನೋಗ್ರಫಿ ಅಗತ್ಯ.

ನಿಮ್ಮ ದಿನಚರಿ ಲವಲವಿಕೆಯಿಂದ ಕೂಡಿರಲಿ : ಮೊದಲ ತ್ರೈಮಾಸಿಕದ ನಂತರ ಗರ್ಭಾವಸ್ಥೆಯಲ್ಲಿ ಮಹಿಳೆಯರು ದೈಹಿಕವಾಗಿ ಸಕ್ರಿಯವಾಗಿರಬೇಕು. ಮೊದಲ ತ್ರೈಮಾಸಿಕದಲ್ಲಿ ಗರ್ಭಾವಸ್ಥೆಯು ಮೊದಲ ಹಂತದಲ್ಲಿರುವುದರಿಂದ ಮತ್ತು ಸಣ್ಣದೊಂದು ಅಜಾಗರೂಕತೆಯು ಗರ್ಭಪಾತಕ್ಕೆ ಕಾರಣವಾಗಬಹುದು.

ಮಹಿಳೆಯು ಯಾವುದೇ ರೀತಿಯ ಕೆಲಸವನ್ನು ಮಾಡುವಾಗ ಅತ್ಯಂತ ಜಾಗರೂಕರಾಗಿರಬೇಕು. ಈ ಕಾರಣದಿಂದಲೇ ಮೊದಲ ತ್ರೈಮಾಸಿಕದಲ್ಲಿ ಮಹಿಳೆಯರು ಲೈಂಗಿಕ ಸಂಪರ್ಕದಿಂದ ದೂರವಿರುತ್ತಾರೆ ಎನ್ನುತ್ತಾರೆ ಡಾ.ವಿಜಯಲಕ್ಷ್ಮಿ.

ಆದಾಗ್ಯೂ, ಮೊದಲ ತ್ರೈಮಾಸಿಕದ ನಂತರ, ಮಹಿಳೆಯರು ಎಲ್ಲಾ ಮನೆಕೆಲಸಗಳು ಮತ್ತು ಇತರ ಕೆಲಸಗಳನ್ನು ಮಾಡಬಹುದು, ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ವೈದ್ಯರು ಸೂಚಿಸಿದ ನಂತರ, ವಾಕ್ ಮಾಡಲು ಹೋಗಬಹುದು ಮತ್ತು ಲಘು ವ್ಯಾಯಾಮ ಅಥವಾ ಯೋಗ ಮಾಡಬಹುದು.

ಆದರೆ, ಈ ಅವಧಿಯಲ್ಲಿ ಯಾವುದೇ ಭಾರವಾದ ವಸ್ತುಗಳನ್ನು ಎತ್ತುವುದನ್ನು ಅಥವಾ ಶ್ರಮದಾಯಕ ವ್ಯಾಯಾಮಗಳನ್ನು ಮಾಡಬಾರದು ಮತ್ತು ನಿಮ್ಮ ಆರೋಗ್ಯದಲ್ಲಿ ಅಲ್ಪಸ್ವಲ್ಪ ಏರುಪೇರು ಅನಿಸಿದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇದರೊಂದಿಗೆ ನಿಯಮಿತವಾದ ಸರಿಯಾದ ವಿಶ್ರಾಂತಿ ಅಗತ್ಯ.

ಧೂಮಪಾನ ಮಾಡಬೇಡಿ, ಕುಡಿಯಬೇಡಿ ಅಥವಾ ಇತರ ಯಾವುದೇ ಅಮಲು ಪದಾರ್ಥಗಳನ್ನು ಸೇವಿಸಬೇಡಿ. ಗರ್ಭಾವಸ್ಥೆಯಲ್ಲಿ ಧೂಮಪಾನ ಮಾಡುವ ಮಹಿಳೆಯರ ಮಕ್ಕಳು ಕಡಿಮೆ ತೂಕದೊಂದಿಗೆ ಜನಿಸುವ ಅಥವಾ ಕಲಿಕೆಯಲ್ಲಿ ಹಿಂದುಳಿಯುವ ಸಾಧ್ಯತೆಯಿದೆ. ಈ ಪದಾರ್ಥಗಳಲ್ಲಿರುವ ನಿಕೋಟಿನ್ ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಮತ್ತೊಂದೆಡೆ, ಗರ್ಭಾವಸ್ಥೆಯಲ್ಲಿ ಆಲ್ಕೋಹಾಲ್ ಸೇವಿಸುವ ಮಹಿಳೆಯರು ಭ್ರೂಣದ ಆಲ್ಕೋಹಾಲ್ ಸಿಂಡ್ರೋಮ್ನಿಂದ ಬಳಲುತ್ತಿರುವ ಮಗುವಿಗೆ ಜನ್ಮ ನೀಡಬಹುದು. ಅಂದರೆ ಕಡಿಮೆ ತೂಕ, ಕಲಿಕೆಯಲ್ಲಿ ಅಸಮರ್ಥತೆ ಮತ್ತು ವರ್ತನೆಯಲ್ಲಿ ಸಮಸ್ಯೆಗಳಿರುವ ಮಗು ಹುಟ್ಟಬಹುದು.

ಮಾಂಸವನ್ನು ಹೆಚ್ಚು ಸೇವಿಸುವುದು ಒಳ್ಳೆಯದಲ್ಲ: ಗರ್ಭಾವಸ್ಥೆಯಲ್ಲಿ, ಮಹಿಳೆಯರಿಗೆ ಮಾಂಸಾಹಾರಿ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಲು ಸಲಹೆ ನೀಡುತ್ತಾರೆ. ಯಾಕೆಂದರೆ, ಈ ರೀತಿಯ ಆಹಾರವು ಹೆಚ್ಚಿನ ಎಣ್ಣೆ ಮತ್ತು ಮಸಾಲೆ ಅಂಶದಿಂದಾಗಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ಗ್ಯಾಸ್, ಅಸಿಡಿಟಿ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಇದು ಒಳ್ಳೆಯದಲ್ಲ.

ಒಂದು ವೇಳೆ ಗರ್ಭಿಣಿ ಮಾಂಸಾಹಾರ ಸೇವಿಸಲು ಬಯಸಿದ್ರೆ, ಕಡಿಮೆ ಮಸಾಲೆ ಹಾಗೂ ಕಡಿಮೆ ಎಣ್ಣೆ ಬಳಸಿ ಬೇಯಿಸಿ ಕೊಡಬಹುದು. ಮಾಂಸ ಸಂಪೂರ್ಣ ಬೆಂದಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಹಸಿ ಅಥವಾ ಬೇಯಿಸದ ಮಾಂಸ ಮತ್ತು ಹಸಿ ಮೊಟ್ಟೆಗಳನ್ನು ತಿನ್ನುವುದು ಲಿಸ್ಟೀರಿಯೊಸಿಸ್ ಮತ್ತು ಟಾಕ್ಸೊಪ್ಲಾಸ್ಮಾಸಿಸ್ ಅಪಾಯವನ್ನು ಹೆಚ್ಚಿಸುತ್ತದೆ ಜೊತೆಗೆ ಫುಡ್​ ಪಾಯಿಸನ್​​ ಅಪಾಯವನ್ನು ಹೆಚ್ಚಿಸುತ್ತದೆ. ಇದು ತಾಯಿ ಮತ್ತು ಹುಟ್ಟಲಿರುವ ಮಗುವಿಗೆ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ.

ಹೆಚ್ಚು ಕೆಫಿನ್ ಸೇವನೆ ಬೇಡ : ಅತಿಯಾದ ಕೆಫಿನ್ ಸೇವನೆಯು ಹುಟ್ಟಲಿರುವ ಮಗುವಿನ ಹೃದಯ ಬಡಿತವನ್ನು ಹೆಚ್ಚಿಸುತ್ತದೆ.ಇದು ಮಹಿಳೆಯ ರಕ್ತದೊತ್ತಡದ ಮೇಲೂ ಪರಿಣಾಮ ಬೀರಬಹುದು .ಹೀಗಾಗಿ ದಿನಕ್ಕೆ ಒಂದು ಕಪ್​ ಅಥವಾ ಎರಡು ಕಪ್​​ ಅಷ್ಟೇ ಚಹಾ ಸೇವಿಸಬೇಕು. ಅದಕ್ಕಿಂತ ಹೆಚ್ಚು ಕಾಫಿ ಸೇವನೆ ಗರ್ಭಿಣಿಯರಿಗೆ ಒಳ್ಳೆಯದಲ್ಲ.

ಹಸಿ ಹಾಲು ಸೇವನೆ ಬೇಡ : ಹಸಿ ಮಾಂಸದಂತೆಯೇ, ಗರ್ಭಿಣಿಯರು ಹಸಿ ಹಾಲನ್ನು ಕುಡಿಯುವುದರಿಂದ ದೂರ ಇರಬೇಕು.ಏಕೆಂದರೆ ಕುದಿಸದ ಹಾಲು ಲಿಸ್ಟೇರಿಯಾ ಎಂಬ ಬ್ಯಾಕ್ಟೀರಿಯಾವನ್ನು ಒಳಗೊಂಡಿರುತ್ತದೆ, ಇದು ಆರೋಗ್ಯಕ್ಕೆ ಹಾನಿಕಾರಕ ಮತ್ತು ಗರ್ಭಪಾತಕ್ಕೆ ಕಾರಣವಾಗಬಹುದು. ಆದರೆ ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಹಾಲು ಅವಶ್ಯವಿರುವುರಿಂದ ಕುದಿಸಿದ ಹಾಲನ್ನ ಕುಡಿಯಬೇಕು. ಯಾವುದೇ ಕಾರಣಕ್ಕೂ ಹಸಿ ಹಾಲು ಕುಡಿಯಬಾರದು.

ಒಳ್ಳೆಯ ನಿದ್ದೆ ಮಾಡಿ : ಗರ್ಭಿಣಿಯರು ಸಾಕಷ್ಟು ನಿದ್ದೆ ಮತ್ತು ಆರೋಗ್ಯಕರ ನಿದ್ರೆಯ ಮಾದರಿಯನ್ನು ಹೊಂದಿರುವುದು ಮುಖ್ಯ ಎನ್ನುತ್ತಾರೆ ಡಾ.ವಿಜಯಲಕ್ಷ್ಮಿ. ಕೆಲಸದ ಮಧ್ಯೆ ಆಗಾಗ್ಗೆ ವಿಶ್ರಾಂತಿ ಪಡೆಯರಿ, ನಿದ್ದೆ ಮಾಡಿ.ಸಾಮಾನ್ಯವಾಗಿ, ಗರ್ಭಧಾರಣೆಯ ಎರಡನೇ ತ್ರೈಮಾಸಿಕದ ನಂತರ, ತೂಕ ಹೆಚ್ಚಾಗುವುದು ಮತ್ತು ಇತರ ಕಾರಣಗಳಿಂದಾಗಿ, ಮಹಿಳೆಯರಿಗೆ ದೇಹ ಭಾರವೆನಿಸುತ್ತದೆ. ಬಹುಬೇಗ ದಣಿವು ಆವರಿಸುತ್ತದೆ. ಹೀಗಾಗಿ ಸರಿಯಾದ ವಿಶ್ರಾಂತಿ ಮತ್ತು ರಾತ್ರಿಯ ನಿದ್ರೆಯು ನಿರ್ಣಾಯಕವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.