ETV Bharat / bharat

ದೇವರ ದರ್ಶನಕ್ಕಾಗಿ ಹೊರಟಿದ್ದ ಏಳು ಯಾತ್ರಿಕರ ದುರ್ಮರಣ...! - Seven devotees were killed in a truck collision

ಜವರಾಯನ ಅಟ್ಟಹಾಸಕ್ಕೆ ಏಳು ಯಾತ್ರಿಕರು ಬಲಿ - ಖರಾಲಿ ಹೊಸ್ಯಾರ್‌ಪುರದ ಖುರಾಲ್‌ಘರ್ ಸಾಹಿಬ್‌ನಲ್ಲಿ ಟ್ರಕ್‌ ಡಿಕ್ಕಿ ಹೊಡೆದು ಏಳು ಯಾತ್ರಿಕರು ಮೃತಪಟ್ಟಿದ್ದಾರೆ.

Accident 7 death
ದೇವರ ದರ್ಶನಕ್ಕಾಗಿ ಹೊರಟಿದ್ದ ಏಳು ಯಾತ್ರಿಕರು ಮಸಣ ಸೇರಿದರು
author img

By

Published : Apr 13, 2023, 5:56 PM IST

ಹೋಶಿಯಾರ್‌ಪುರ(ಪಂಜಾಬ್​): ಜಿಲ್ಲೆಯ ಗರ್ಶಶಂಕರ್ ಉಪವಿಭಾಗದಲ್ಲಿ ಗುರುವಾರ ಭಾರಿ ರಸ್ತೆ ಅಪಘಾತ ಸಂಭವಿಸಿದೆ. ಗುರು ರವಿದಾಸ್ ಜಿ ಅವರ ಪವಿತ್ರ ಕ್ಷೇತ್ರವಾದ ಖುರಾಲ್‌ಗಢ್ ಸಾಹಿಬ್‌ನಲ್ಲಿ ದೇವರ ದರ್ಶನ ಪಡೆಯಲು ಹೋಗುತ್ತಿದ್ದ ಭಕ್ತರ ಮೇಲೆ ನಿಯಂತ್ರಿಣ ತಪ್ಪಿದ ಟ್ರಕ್​ ಹರಿದಿದೆ. ಈ ದುರ್ಘಟನೆಯಲ್ಲಿ ಒಟ್ಟು ಏಳು ಯಾತ್ರಿಕರು ಮೃತಪಟ್ಟಿದ್ದಾರೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗರ್‌ಶಂಕರ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಒಂದೇ ಕುಟುಂಬದ ಐದು ಮಂದಿ ಸಾವು: ಮೃತರಲ್ಲಿ ರಾಹುಲ್ ಅವರ ಪುತ್ರ ಮಹ್ ಪಾಲ್ (25), ಸುದೇಶ್ ಪಾಲ್ ಅವರ ಪುತ್ರ ರಾಮ್ ಫಾಲ್ (48), ರಾಮೋ ಅವರ ಪುತ್ರಿ ಶಿಸ್ ಪಾಲ್ (15), ಗೀತಾದೇವಿ ಅವರ ಪತ್ನಿ ಪುಷ್ಪಿಂದರ್ ಕುಮಾರ್ (40), ಉನ್ನತಿ ಅವರ ಪುತ್ರಿ ಪುಷ್ಪಿಂದರ್ ಕುಮಾರ್-2 (16), ಶಾಮೋ ದೇವಿ ಮತ್ತು ಸಂತೋಷ್ ದೇವಿ ಸೇರಿದಂತೆ ಇತರರು ಮುಜಾಫರ್‌ನಗರ ಯುಪಿ ಹಾಲ್ ಹಾಗೂ ಜಿಂದಾಲ್‌ಪುರ ಭಡ್ಸನ್‌ನ ಪ್ರದೇಶಕ್ಕೆ ಈ ನಿವಾಸಿಗಳು ಸೇರಿದ್ದಾರೆ ಎಂದು ಗುರುತಿಸಲಾಗಿದೆ ಎಂದು ಗರ್​ಶಂಕರ್ ಡಿಎಸ್​ಪಿ ದಲ್ಜಿತ್ ಸಿಂಗ್ ಖಾಖ್ ತಿಳಿಸಿದರು. ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ಐದು ಮಂದಿ ಇದ್ದಾರೆ ಎಂಬುದು ತಿಳಿದಿದೆ. ಈ ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಹನುಮ ಜಯಂತಿ ರ‍್ಯಾಲಿ ಮೇಲೆ ಕಲ್ಲು ತೂರಾಟ: ಇಂದಿನಿಂದ 48 ಗಂಟೆ ಇಂಟರ್​ನೆಟ್​ ಬಂದ್

ಚಂಡೀಗಢದ ಪಿಜಿಐನಲ್ಲಿ ಐವರಿಗೆ ಚಿಕಿತ್ಸೆ: ಈ ಘಟನೆಯಲ್ಲಿ ಸುಮಾರು 13 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಡಿಎಸ್​ಪಿ ದಲ್ಜಿತ್ ಸಿಂಗ್ ಖಾಖ್ ಹೇಳಿದ್ದಾರೆ. ಎಲ್ಲ ಗಾಯಾಳುಗಳನ್ನು ಜನರ ಸಹಾಯದಿಂದ ಸಿವಿಲ್ ಹಾಸ್ಪಿಟಲ್ ಗರ್​ಶಂಕರ್​ಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಐದು ಜನರ ಸ್ಥಿತಿ ಗಂಭೀರವಾಗಿದ್ದು, ಚಂಡೀಗಢದ ಪಿಜಿಐ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ಮಾಹಿತಿಯ ಪ್ರಕಾರ, ಅಪಘಾತ ಸಂಭವಿಸಿದ್ದು ತಡರಾತ್ರಿ, ಯಾತ್ರಿಕರು ಖುರಾಲ್ಗಢಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ, ಖುರಾಲ್‌ಗಢ್ ಕಡೆಗೆ ಹೋಗುತ್ತಿದ್ದ ಟ್ರಕ್ ಹಠಾತ್ ಆಗಿ ನಿಯಂತ್ರಣ ತಪ್ಪಿ ಪರಿಣಾಮ ಯಾತ್ರಾರ್ಥಿಗಳ ಮೇಲೆ ಹರಿದಿದೆ.

ಇದನ್ನೂ ಓದಿ:ಪಾಕ್​ನಿಂದ ಬಂದ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ: 500 ಮುಖ ಬೆಲೆಯ ನೋಟುಗಳು, ಶಸ್ತ್ರಾಸ್ತ್ರ ಪತ್ತೆ

ಅಪಘಾತದಲ್ಲಿ ಮೃತಪಟ್ಟವರು ಉತ್ತರಪ್ರದೇಶದ ನಿವಾಸಿಗಳು: ಮೃತ ಯಾತ್ರಿಕರು ಉತ್ತರ ಪ್ರದೇಶದ ಸಹರಾನ್‌ಪುರ ನಿವಾಸಿಗಳು ಎಂದು ಗುರು ರವಿದಾಸ್ ಜಿ ಅವರ ದೇವಾಲಯದ ಮುಖ್ಯ ಪರಿಚಾರಕರು ತಿಳಿಸಿದರು. ಇವರೆಲ್ಲರೂ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಯಾತ್ರಿಕರು ಸಾವನ್ನಪ್ಪಿದ್ದಾರೆ. ಬೈಸಾಖಿಯ ಸಂದರ್ಭದಲ್ಲಿ, ಜನರು ಗುರು ರವಿದಾಸ್ ಜಿ, ಖುರಾಲ್ಗಢ ಸಾಹಿಬ್ ಅವರ ಪವಿತ್ರ ಮಂದಿರದಲ್ಲಿ ನಮನ ಸಲ್ಲಿಸಲು ಬರುತ್ತಿದ್ದರು.

ಇದನ್ನೂ ಓದಿ: ಎನ್​ಕೌಂಟರ್​ನಲ್ಲಿ ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸದ್ ಹತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.