ETV Bharat / bharat

ಆನ್​ಲೈನ್​ ಮೂಲಕ ಕ್ಯಾನ್ಸರ್​ ನಕಲಿ ಔಷಧ ಮಾರಾಟ..7 ಮಂದಿ ಬಂಧನ, 8 ಕೋಟಿ ಮೌಲ್ಯದ ಸರಕು ಜಪ್ತಿ

author img

By

Published : Nov 16, 2022, 7:51 PM IST

ಕ್ಯಾನ್ಸರ್​ಗೆ ನಕಲಿ ಔಷಧ ತಯಾರಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ದೆಹಲಿ ಅಪರಾಧ ವಿಭಾಗ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 8 ಕೋಟಿ ರೂಪಾಯಿ ಮೊತ್ತದ ನಕಲಿ ಸರಕನ್ನು ಜಪ್ತಿ ಮಾಡಲಾಗಿದೆ.

fake-cancer-medicines-in-online
ಆನ್​ಲೈನ್​ ಮೂಲಕ ಕ್ಯಾನ್ಸರ್​ ನಕಲಿ ಔಷಧಿ ಮಾರಾಟ

ನವದೆಹಲಿ: ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್​ಗೆ ಆನ್​ಲೈನ್​ ಮೂಲಕ ನಕಲಿ ಔಷಧ ಮಾರಾಟ ಮಾಡುತ್ತಿದ್ದ ಗ್ಯಾಂಗ್​ ಅನ್ನು ದೆಹಲಿ ಅಪರಾಧ ವಿಭಾಗ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 5 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಕಲಿ ಔಷಧವನ್ನು ಜಪ್ತಿ ಮಾಡಲಾಗಿದೆ.

ಬಂಧಿತರಾದ ಏಳು ಜನರಲ್ಲಿ ವೈದ್ಯ, ಇಂಜಿನಿಯರ್‌ ಮತ್ತು ಎಂಬಿಎ ಪದವೀಧರರು ಇದ್ದಾರೆ. ಈ ಗ್ಯಾಂಗ್​ನಲ್ಲಿ ಇನ್ನಷ್ಟು ಜನರಿದ್ದು ತಲೆಮರೆಸಿಕೊಂಡ ಅವರನ್ನು ಪತ್ತೆ ಮಾಡಲು ಪೊಲೀಸರು ಜಾಲ ಬೀಸಿದ್ದಾರೆ. ರೋಗಿಯ ಸಹಚರರನ್ನು ಫೇಸ್​ಬುಕ್​, ಇನ್​ಸ್ಟಾಗ್ರಾಮ್​ ಮೂಲಕ ಸಂಪರ್ಕಿಸಿ ನಕಲಿ ಔಷಧಗಳನ್ನು ಆನ್​ಲೈನ್​​ ಮೂಲಕ ಸರಬರಾಜು ಮಾಡುತ್ತಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಉತ್ತರಪ್ರದೇಶ, ಹರಿಯಾಣದಲ್ಲಿ ದಾಳಿ: ಈ ನಕಲಿ ಔಷಧ ತಯಾರು ಮಾಡುವ ಗ್ಯಾಂಗ್​ ದೆಹಲಿಯಲ್ಲದೇ ಉತ್ತರಪ್ರದೇಶ, ಪಂಜಾಬ್​ನಲ್ಲಿ ಕಾರ್ಖಾನೆಗಳನ್ನು ಹೊಂದಿದ್ದು, ಅವುಗಳ ಮೇಲೆ ದಾಳಿ ಮಾಡಲಾಗಿದೆ. ದೇಶದಲ್ಲಿ ಈ ಔಷಧ ಸಿಗುವುದಿಲ್ಲ ಎಂದು ಹೇಳಿ ದುಬಾರಿ ಬೆಲೆಗೆ ಅಗತ್ಯವಿರುವ ರೋಗಿಗಳಿಗೆ ಔಷಧಗಳನ್ನು ಮಾರಾಟ ಮಾಡುತ್ತಿದ್ದರು.

ಹರಿಯಾಣದ ಸೋನಿಪತ್​, ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಔಷಧ ದಾಸ್ತಾನಿಡುವ ಗೋದಾಮನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಆ ರಾಜ್ಯದಲ್ಲೂ ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದೆ. ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ರೋಗಿಗಳನ್ನು ಸಂಪರ್ಕಿಸಿ ಪರಿಣಾಮಕಾರಿ ಔಷಧ ಎಂದು ನಂಬಿಸುತ್ತಿದ್ದರು.

8 ಕೋಟಿ ಸರಕು ವಶ: ಎರಡು ಕಡೆ ನಡೆದ ದಾಳಿಯಲ್ಲಿ ದಾಸ್ತಾನಿಟ್ಟಿದ್ದ 8 ಕೋಟಿ ರೂಪಾಯಿ ಮೌಲ್ಯದ ನಕಲಿ ಔಷಧವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಗ್ಯಾಂಗ್​ ಮೂರ್ನಾಲ್ಕು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಅಂತಾರಾಷ್ಟ್ರೀಯ ಗ್ಯಾಂಗ್ ಜತೆ ನಂಟು ಶಂಕೆ: ಪ್ರಾಥಮಿಕ ತನಿಖೆಯ ಪ್ರಕಾರ ಬಂಧಿತ 7 ಮಂದಿ ಡ್ರಗ್ಸ್​ ಮಾರಾಟಗಾರರು ಅಂತಾರಾಷ್ಟ್ರೀಯ ಗ್ಯಾಂಗ್​ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ತಿಳಿದು ಬಂದಿದೆ. ನೇಪಾಳ, ಬಾಂಗ್ಲಾದೇಶ ಮತ್ತು ಚೀನಾದಲ್ಲಿ ಇವರ ನಂಟಿದೆ ಎಂದು ಹೇಳಲಾಗಿದೆ. ವಿದೇಶಿ ಡ್ರಗ್ಸ್​ ಮಾರಾಟಗಾರರು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಲಾಗಿದೆ.

ಓದಿ: ಮಹಿಳಾ ರೋಗಿಗಳ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿದ ಆರೋಪ: ವೈದ್ಯ ಅರೆಸ್ಟ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.