ಮಧುರೈ (ತಮಿಳುನಾಡು): ಹೊಸ ಸಂಸತ್ ಕಟ್ಟಡ ನಿರ್ಮಾಣಕ್ಕಾಗಿ ಮಧುರೈನ ಆರನೇ ತರಗತಿ ವಿದ್ಯಾರ್ಥಿ ಅಜಯ್ ಪ್ರಣವ್ ತಮ್ಮ ಹುಟ್ಟುಹಬ್ಬದ ಉಡುಗೊರೆ ಮೊತ್ತ 1,145 ರೂಪಾಯಿ ಅನ್ನು ದೇಣಿಯಾಗಿ ನೀಡಿದ್ದಾರೆ.
ಮಧುರೈ ಮೂಲದ ಬಾಲನ್ ಎಂಬ ಉದ್ಯಮಿಯ ಪುತ್ರ ಅಜಯ್, ಡಿಸೆಂಬರ್ 11 ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಅವರ ಹುಟ್ಟುಹಬ್ಬದಂದು ಉಡುಗೊರೆಯಾಗಿ 1,145 ರೂಪಾಯಿ ಹಣ ಪಡೆದಿದ್ದರು.
ಡಿಸೆಂಬರ್ 10 ರಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದ ಹೊಸ ಸಂಸತ್ ಭವನ ನಿರ್ಮಾಣಕ್ಕೆ ದೇಣಿಗೆ ರೂಪದಲ್ಲಿ 1,145 ರೂಪಾಯಿ ನೀಡಿದ್ದಾರೆ. ಬಾಲಕನ ಕೊಡುಗೆಯನ್ನು ಲೋಕಸಭಾ ಸ್ಪೀಕರ್ ಓ ಬಿರ್ಲಾ ಶ್ಲಾಘಿಸಿದ್ದು, ಅಜಯ್ಗೆ ಮೆಚ್ಚುಗೆ ಪತ್ರವನ್ನು ಕಳುಹಿಸಿದ್ದಾರೆ.
ಓದಿ ಭಾರತದಲ್ಲಿ ಬೌದ್ಧ ಸಾಹಿತ್ಯ ಮತ್ತು ಗ್ರಂಥಗಳ ಲೈಬ್ರರಿ ನಿರ್ಮಾಣವಾಗಲಿದೆ: ಪ್ರಧಾನಿ ಮೋದಿ
ಸ್ಪೀಕರ್ ಅವರ ಮೆಚ್ಚುಗೆಯ ಪತ್ರದಿಂದ ಬಾಲಕನ ಪೋಷಕರು ಉಲ್ಲಾಸಗೊಂಡಿದ್ದು, ರಾಷ್ಟ್ರ ನಿರ್ಮಾಣದ ಮೇಲಿನ ಹಂಬಲ ಮತ್ತು ಉತ್ಸಾಹವೇ ಈ ಕೆಲಸದ ಹಿಂದಿನ ಕಾರಣ ಎಂದು ಹೇಳಿದ್ದಾರೆ.