ETV Bharat / bharat

ಗುಲಾಂ ನಬಿ ಆಜಾದ್​ಗೆ ಭಾರಿ ಬೆಂಬಲ.. 64 ಕಾಂಗ್ರೆಸ್​​ ನಾಯಕರ ಸಾಮೂಹಿಕ ರಾಜೀನಾಮೆ - ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್​ನಲ್ಲಿ ಕಂಪನ

73 ವರ್ಷದ ಗುಲಾಂ ನಬಿ ಆಜಾದ್​ ಅವರು ಕಾಂಗ್ರೆಸ್​ನೊಂದಿಗೆ 50 ವರ್ಷಗಳ ಸಂಬಂಧವನ್ನು ಕಳೆದುಕೊಂಡ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್​​ ನಾಯಕರು ಸಾಮೂಹಿಕವಾಗಿಯೇ ರಾಜೀನಾಮೆ ನೀಡುತ್ತಿದ್ದಾರೆ.

64-j-k-congress-leaders-quit-party-in-support-of-azad
ಗುಲಾಂ ನಬಿ ಆಜಾದ್​ಗೆ ಭಾರಿ ಬೆಂಬಲ: 64 ಕಾಂಗ್ರೆಸ್​​ ನಾಯಕರ ಸಾಮೂಹಿಕ ರಾಜೀನಾಮೆ
author img

By

Published : Aug 30, 2022, 5:21 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಹಿರಿಯ ರಾಜಕಾರಣಿ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್​ ಅವರ ರಾಜೀನಾಮೆಯಿಂದ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್​ನಲ್ಲಿ ಕಂಪನ ಸೃಷ್ಟಿಸಿದೆ. ಆಜಾದ್​ ಅವರನ್ನು ಬೆಂಬಲಿಸಿ 64 ಜನ ಹಿರಿಯ ನಾಯಕರು ಕಾಂಗ್ರೆಸ್​ಅನ್ನು ತೊರೆದಿದ್ದಾರೆ.

ಉಪ ಮುಖ್ಯಮಂತ್ರಿ ತಾರಾ ಚಂದ್​ ಹಾಗೂ ಮಾಜಿ ಸಚಿವರಾದ ಅಬ್ದುಲ್ ಮಜೀದ್ ವಾನಿ, ಮನೋಹರ್ ಲಾಲ್ ಶರ್ಮಾ, ಘರು ರಾಮ್ ಮತ್ತು ಮಾಜಿ ಶಾಸಕ ಬಲ್ವಾನ್ ಸಿಂಗ್ ಸೇರಿದಂತೆ ಹಲವು ಪ್ರಮುಖರು ಕಾಂಗ್ರೆಸ್​​ಗೆ ರಾಜೀನಾಮೆ ನೀಡಿದ್ದು, ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದಾರೆ.

ಎಲ್ಲ ನಾಯಕರು ಇಂದು ಮಾಧ್ಯಮಗೋಷ್ಟಿಯನ್ನು ನಡೆಸಿ ತಮ್ಮ ನಿರ್ಧಾರ ಪ್ರಕಟಿಸಿದರು. ಆಜಾದ್ ಅವರ ದೃಷ್ಟಿಕೋನವು ಜಮ್ಮು ಮತ್ತು ಕಾಶ್ಮೀರಕ್ಕೆ ಹೊಸ ಮತ್ತು ಉಜ್ವಲ ಭವಿಷ್ಯವನ್ನು ರೂಪಿಸುತ್ತದೆ ಎಂದು ಪ್ರತಿಪಾದಿಸಿದರು. ನಾವೆಲ್ಲರೂ ಆಜಾದ್​ ಅವರನ್ನು ಸಂರ್ಪೂಣವಾಗಿ ಬೆಂಬಲಿಸುತ್ತೇವೆ. ರಾಜ್ಯದ ಪ್ರಗತಿಗಾಗಿ ಅವರ ಮಾರ್ಗದುದ್ದಕ್ಕೂ ಅವರೊಂದಿಗೆ ಇರುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ಸ್ಪರ್ಧೆ ಸಾಧ್ಯತೆ.. ಭಿನ್ನಮತೀಯ ನಾಯಕನಿಗೆ ಸಿಗುತ್ತಾ ಚಾನ್ಸ್​​

ಅಲ್ಲದೇ, ನಾವೆಲ್ಲರೂ ದಶಕಗಳಿಂದ ಪಕ್ಷದೊಂದಿಗೆ ಬಹಳ ದೀರ್ಘವಾದ ಸಂಬಂಧವನ್ನು ಹೊಂದಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಷವನ್ನು ವಿಸ್ತರಿಸಲು ನಮ್ಮೆಲ್ಲ ಶಕ್ತಿ ಮತ್ತು ಸಂಪನ್ಮೂಲಗಳನ್ನು ವಿನಿಯೋಗಿಸಿದ್ದೇವೆ. ಆದರೆ, ದುರದೃಷ್ಟವಶಾತ್ ಈ ರೀತಿಯ ವರ್ತನೆಯಿಂದ ನಮಗೆ ಅವಮಾನಕರವಾಗಿದೆ ಎಂದು ಸಾಮೂಹಿಕವಾಗಿ ರಾಜೀನಾಮೆ ಪತ್ರದಲ್ಲಿ 64 ಜನರು ಸಹಿ ಮಾಡಿದ್ದಾರೆ.

ಆಜಾದ್​ ರಾಜೀನಾಮೆ ನೀಡಿದ ದಿನದಿಂದಲೂ ಅವರನ್ನು ಬೆಂಬಲಿಸಿ ಕಾಂಗ್ರೆಸ್​ ತೊರೆಯುತ್ತಿರುವ ಸಂಖ್ಯೆ ಬೆಳೆಯುತ್ತಿದೆ. ಈಗಾಗಲೇ ಮಾಜಿ ಸಚಿವರು ಮತ್ತು ಶಾಸಕರು ಸೇರಿದಂತೆ ಹನ್ನೆರಡು ಪ್ರಮುಖ ಕಾಂಗ್ರೆಸ್ ನಾಯಕರು ಹಾಗೂ ನೂರಾರು ಪಂಚಾಯಿತಿ ಸದಸ್ಯರು, ಪುರಸಭೆ ಕಾರ್ಪೊರೇಟರ್‌ಗಳು ಮತ್ತು ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ನಾಯಕರು ಕಾಂಗ್ರೆಸ್ ಬಿಟ್ಟು ಆಜಾದ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಒಂದು ಆಕಾರ, ಹಿಂದೂಸ್ತಾನ​ ಹೆಸರು ಕೊಟ್ಟಿದ್ದು ಮೊಘಲರು: ಕಾಂಗ್ರೆಸ್ ಸಂಸದ ಅಬ್ದುಲ್ ಖಾಲಿಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.