ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಆಂಧ್ರಪ್ರದೇಶದ ತಿರುಮಲದಲ್ಲಿರುವ ಭಗವಾನ್ ವೆಂಕಟೇಶ್ವರ ದೇಗುಲದ ಉಸ್ತುವಾರಿಯಾಗಿರುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗೆ ಮಜೀನ್ ಗ್ರಾಮದಲ್ಲಿ 62.02 ಎಕರೆ ಭೂಮಿಯನ್ನು ನೀಡಲು ಜಮ್ಮು ಮತ್ತು ಕಾಶ್ಮೀರ ಆಡಳಿತ ಮಂಡಳಿ ಅನುಮತಿ ನೀಡಿದೆ.
ಗುರುವಾರ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇತೃತ್ವದ ಕೌನ್ಸಿಲ್, ಶ್ರೀನಗರ-ಪಠಾಣ್‌ಕೋಟ್ ಹೆದ್ದಾರಿಯಲ್ಲಿ ಸಿಧ್ರಾ ಬೈಪಾಸ್‌ನಲ್ಲಿ ಟಿಟಿಡಿಗೆ ದೇವಾಲಯ ಮತ್ತು ಅದರ ಸಂಬಂಧಿತ ಮೂಲಸೌಕರ್ಯಕ್ಕಾಗಿ ಭೂಮಿಯನ್ನು 40 ವರ್ಷಗಳ ಗುತ್ತಿಗೆ ನೀಡುವ ಪ್ರಸ್ತಾಪವನ್ನು ಅಂಗೀಕರಿಸಿತು.
ಜಮ್ಮು ಮತ್ತು ಕಾಶ್ಮೀರದಲ್ಲಿ ದೇವಾಲಯ ಮತ್ತು ಸಂಬಂಧಿತ ಮೂಲಸೌಕರ್ಯಗಳನ್ನು ನಿರ್ಮಿಸಲು ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪ ದೇವಾಲಯದ ಆಡಳಿತ ಮಂಡಳಿ 'ತಿರುಮಲ ತಿರುಪತಿ ದೇವಸ್ಥಾನಂ' (ಟಿಟಿಡಿ) ಗುತ್ತಿಗೆ ಆಧಾರದ ಮೇಲೆ ಭೂಮಿಯನ್ನು ಪಡೆದಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ದೇವಾಲಯ ನಿರ್ಮಿಸಲಿರುವ ಟಿಟಿಡಿ
ಸರ್ಕಾರ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಲೀನ್ ಕಬ್ರಾ ಅವರು ಹೊರಡಿಸಿದ ಆದೇಶದಲ್ಲಿ ಯಾವುದೇ ಪ್ರೀಮಿಯಂ ಶುಲ್ಕವಿಲ್ಲದೆ ವರ್ಷಕ್ಕೆ ಒಂದು ಕನಾಲ್‌ಗೆ 10 ರೂ. ನಾಮಮಾತ್ರದ ಬಾಡಿಗೆಗೆ ಭೂಮಿಯನ್ನು ನೀಡಲಾಗುತ್ತಿದೆ.
ಈ ಪ್ರಸ್ತಾಪವನ್ನು ಅನುಮೋದಿಸುವಾಗ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಭವಿಷ್ಯದಲ್ಲಿ ಕ್ಯಾಂಪಸ್‌ನಲ್ಲಿ ವೈದ್ಯಕೀಯ ಮತ್ತು ಶೈಕ್ಷಣಿಕ ಸೌಲಭ್ಯಗಳೂ ಇರಲಿವೆ ಎಂದು ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಟಿಟಿಡಿಯ ಆಗಮನವು ಪ್ರವಾಸೋದ್ಯಮ ಸಾಮರ್ಥ್ಯವನ್ನು ವಿಶೇಷವಾಗಿ ದೇವಾಲಯಗಳ ನಗರವಾದ ಜಮ್ಮುವಿನಲ್ಲಿ ಯಾತ್ರಾ ಪ್ರವಾಸೋದ್ಯಮಕ್ಕೆ ತಕ್ಕಂತೆ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.