ETV Bharat / bharat

ಮುಸ್ಲಿಂ ಸಮುದಾಯದ 600 ಜನರಿಂದ ದಯಾಮರಣ ಕೋರಿ ಹೈಕೋರ್ಟ್‌ನಲ್ಲಿ ಸಾಮೂಹಿಕ ಅರ್ಜಿ - ಪೋರಬಂದರ್‌ನ ಗೋಸಾಬರ ಬಂದರಿನಲ್ಲಿ ದೋಣಿ ನಿಲುಗಡೆಗೆ ಸರ್ಕಾರದ ನಿಷೇಧಿ

2016 ರಿಂದ ಪೋರಬಂದರ್‌ನ ಗೋಸಾಬರ ಬಂದರಿನಲ್ಲಿ ದೋಣಿ ನಿಲುಗಡೆಯನ್ನು ಸರ್ಕಾರ ನಿಷೇಧಿಸಿದೆ. ಈ ನಿಷೇಧದಿಂದ ತೊಂದರೆಗೀಡಾದ 100 ಮುಸ್ಲಿಂ ಕುಟುಂಬಗಳು ದಯಾಮರಣ ಕೋರಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್‌ನಲ್ಲಿ ಸಾಮೂಹಿಕ ಅರ್ಜಿ
ಹೈಕೋರ್ಟ್‌ನಲ್ಲಿ ಸಾಮೂಹಿಕ ಅರ್ಜಿ
author img

By

Published : May 5, 2022, 7:51 PM IST

ಅಹಮದಾಬಾದ್(ಗುಜರಾತ್​): ಮೀನುಗಾರಿಕೆಯಲ್ಲಿ ತೊಡಗಿರುವ ಸುಮಾರು 100 ಮುಸ್ಲಿಂ ಕುಟುಂಬಗಳು ದಯಾಮರಣ ಕೋರಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. 2016 ರಿಂದ ಪೋರಬಂದರ್‌ನ ಗೋಸಾಬರ ಬಂದರಿನಲ್ಲಿ ದೋಣಿ ನಿಲುಗಡೆಯನ್ನು ಸರ್ಕಾರ ನಿಷೇಧಿಸಿದೆ. ಈ ನಿಷೇಧದಿಂದ ತೊಂದರೆಗೀಡಾದವರಿಗೆ ದಯಾಮರಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮೀನುಗಾರಿಕೆ ಮತ್ತು ಬೋಟಿಂಗ್ ಪರವಾನಗಿ ಇದ್ದರೂ ಅವರ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ ಈ ಕುಟುಂಬಗಳು ಆರೋಪಿಸಿವೆ. ಈ ನಿಟ್ಟಿನಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು, ಪೋರಬಂದರ್ ಜಿಲ್ಲಾಧಿಕಾರಿಗೆ ಜ್ಞಾಪಕ ಪತ್ರವನ್ನೂ ಸಹ ನೀಡಲಾಗಿದೆ. ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿ ಸಂತ್ರಸ್ತರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪೀಠದ ರಜಾ ದಿನಗಳು ಮುಗಿದ ನಂತರ ಈ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಜಮ್ಮ& ಕಾಶ್ಮೀರ ಕುರಿತು ವರದಿ ಸಲ್ಲಿಸಿದ ಡಿಲಿಮಿಟೇಷನ್ ಆಯೋಗ: ಕ್ಷೇತ್ರಗಳ ಸಂಖ್ಯೆ ಹೆಚ್ಚಿಸಲು ಸೂಚನೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.