ETV Bharat / bharat

60 ವರ್ಷದ ಚಹಾ ಮಾರಾಟ, ಸಹೋದರರ ಹೊಸ ಇತಿಹಾಸ - ಪಂಬಾಬ್​ನಲ್ಲಿ ಚಹಾ ಅಂಗಡಿ ನಡೆಸುತ್ತಿರುವ ಸುರ್ಜಿತ್ ಸಿಂಗ್

ಪಂಜಾಬಿನ ಲೂಧಿಯಾನ ಕೃಷಿ ವಿವಿಯ ಮುಂದೆ ಕಳೆದ 60 ವರ್ಷಗಳಿಂದ ಚಹಾ ಅಂಗಡಿ ನಡೆಸಿಕೊಂಡು ಬಂದಿದ್ದಾರೆ. ಇದೀಗ ಅದು ಎರಡನೇ ತಲೆಮಾರಿನವರೆಗೂ ಮುಂದುವರೆದುಕೊಂಡು ಹೋಗುತ್ತಿದೆ.

60 ವರ್ಷದ ಚಹಾ ಮಾರಾಟ, ಸಹೋದರರ ಹೊಸ ಇತಿಹಾಸ
60 Years of Tea stall & the spirit of Brotherhood
author img

By

Published : Jul 29, 2021, 12:02 AM IST

ಪಂಜಾಬ್​​: ಲೂಧಿಯಾನದ ಕೃಷಿ ವಿವಿಯ ಹೊರಗೆ ಈ ರೀತಿ ಚಹಾ ಅಂಗಡಿಯಲ್ಲಿ ನಿಂತು ಚಹಾ ನೀಡುವ ಈ ಹಿರಿಯನ ಹಿಂದೆ ದಶಕದ ಹಿಂದಿನ ಕಥೆಯೇ ಇದೆ. ಈ ಇಬ್ಬರು ಸಹೋದರರಾದ ಸುರ್ಜಿತ್ ಸಿಂಗ್ ಹಾಗೂ ಸುಖದೇವ್ ಸಿಂಗ್ 60 ವರ್ಷದ ಹಿಂದೆ ಈ ಚಹಾ ಅಂಗಡಿ ತೆರೆದಿದ್ದರು. ಇದೀಗ 2ನೇ ತಲೆಮಾರಿನವರೆಗೂ ಇದೇ ಕಾಯಕ ಮುಂದುವರಿಸಿಕೊಂಡು ಬಂದಿದ್ದಾರೆ.

60 ವರ್ಷದ ಚಹಾ ಮಾರಾಟ, ಸಹೋದರರ ಹೊಸ ಇತಿಹಾಸ

ಈ ವಿವಿಯಲ್ಲಿ ಅಧ್ಯಯನ ನಡೆಸಿದ್ದ ವಿದ್ಯಾರ್ಥಿಗಳು ವಿವಿಗೆ ಭೇಟಿ ನೀಡಿದ ವೇಳೆ ಇಂದಿಗೂ ಈ ಟೀ ಅಂಗಡಿಗೆ ಬರುತ್ತಾರಂತೆ. ಚಹಾ ಮತ್ತು ತಿಂಡಿಯ ಸಿಹಿ ಸವಿದು ಬಳಿಕವಷ್ಟೇ ಇಲ್ಲಿಂದ ತೆರಳುತ್ತಾರೆ.

ಕೋವಿಡ್ ಕಾಲದಲ್ಲಿ ವಿವಿ ಬಂದ್ ಮಾಡಲಾಗಿತ್ತು. ಈ ವೇಳೆ ಸುರ್ಜಿತ್ ಸಿಂಗ್ ಬಹಳಷ್ಟು ತೊಂದರೆಗೆ ಒಳಗಾಗಿದ್ದರು. ಟೀ ಅಂಗಡಿ ನಂಬಿಕೊಂಡಿದ್ದ ಅವರಿಗೆ ದಿಕ್ಕು ತೋಚದಂತಾಗಿತ್ತು.

ವಿಶೇಷ ಅಂದರೆ ಈ ಟೀ ಅಂಗಡಿಯನ್ನ 60 ವರ್ಷದಿಂದಲೂ ಸಹೋದರರಿಬ್ಬರೂ ನಡೆಸಿಕೊಂಡು ಬಂದಿದ್ದಾರೆ.

ಇವರ ಅವಿಭಕ್ತ ಕುಟುಂಬದಲ್ಲೀಗ 20 ಮಂದಿ ಸದಸ್ಯರಿದ್ದಾರೆ. ಇತ್ತೀಚಿಗೆ ಮರೆಯಾಗುತ್ತಿರುವ ಅವಿಭಕ್ತ ಕುಟುಂಬಗಳ ನಡುವೆ ಇವರ ಕೂಡು ಕುಟುಂಬ ಇತರರಿಗೂ ಮಾದರಿಯಾಗಿದೆ. ಈ ಸಹೋದರರನ್ನು ಗುರು ಅಂಗದ್ ದೇವ್ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯವು ಗೌರವಿಸಿದೆ. ಸುಮಾರು 80 ವರ್ಷದವರಾದ ಇವರು ಈಗಲೂ ಒಟ್ಟಿಗೆ ಬದುಕುವ ಸಂದೇಶ ಸಾರುತ್ತಾರೆ. ಸುತ್ತಲೂ ಇವರ ಈ ಕಾರ್ಯ ಮೆಚ್ಚುಗೆ ಗಳಿಸಿರುವ ಜೊತೆಗೆ ಕೂಡು ಕುಟುಂಬದ ಜೀವನ ಸಂತೋಷಕ್ಕೆ ದಾರಿ ಎಂಬುದನ್ನ ಸಾಕಾರಗೊಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.