ಭೋಪಾಲ್ (ಮಧ್ಯಪ್ರದೇಶ) : ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಸೂಕ್ತ ಸಮಯಕ್ಕೆ ಆಂಬ್ಯುಲೆನ್ಸ್ ಸೌಲಭ್ಯ ದೊರೆಯುತ್ತಿಲ್ಲ ಎಂಬ ಆರೋಪಗಳು ಆಗಾಗ ಕೇಳಿಬರುತ್ತಿವೆ. ಇದಕ್ಕೆ ಕನ್ನಡಿ ಹಿಡಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಆರು ವರ್ಷದ ಬಾಲಕನೋರ್ವ ಮರದ ತಳ್ಳುವ ಗಾಡಿಯ ಮೇಲೆ ಅನಾರೋಗ್ಯದಿಂದ ಬಳಲುತ್ತಿರುವ ತಂದೆಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಮನಕಲಕುವ ಘಟನೆ ನಡೆದಿದೆ.
ವೈರಲ್ ವಿಡಿಯೋದಲ್ಲಿ, ಟಿ-ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿರುವ ಬಾಲಕನೋರ್ವ ತಂದೆಯನ್ನು ಮಲಗಿಸಿಕೊಂಡು ಕರೆತರುತ್ತಿದ್ದಾನೆ. ಆತನ ತಾಯಿ ಗಾಡಿಯೆದುರು ಬದಿಯಿಂದ ತಳ್ಳುತ್ತಿದ್ದಾರೆ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಬಲಿಯಾರಿ ಪಟ್ಟಣದಲ್ಲಿ ನಡೆದ ಘಟನೆ ಇದಾಗಿದೆ.
-
शायद मध्य प्रदेश की एंबुलेंस गरीबों के लिए नहीं है,
— Sadaf Afreen صدف (@s_afreen7) February 11, 2023 " class="align-text-top noRightClick twitterSection" data="
इसलिए मरीज़ को ठेले पर लिटाकर अस्पताल ले जाया जा रहा है!!
वीडियो मे मरीज़ की पत्नी और बेटे ठेले को धक्का लगाकर ले जा रहे है!#MadhyaPradesh #सिंगरौलीhttps://t.co/7uIlBCDFZq pic.twitter.com/VD6N5nSUow
">शायद मध्य प्रदेश की एंबुलेंस गरीबों के लिए नहीं है,
— Sadaf Afreen صدف (@s_afreen7) February 11, 2023
इसलिए मरीज़ को ठेले पर लिटाकर अस्पताल ले जाया जा रहा है!!
वीडियो मे मरीज़ की पत्नी और बेटे ठेले को धक्का लगाकर ले जा रहे है!#MadhyaPradesh #सिंगरौलीhttps://t.co/7uIlBCDFZq pic.twitter.com/VD6N5nSUowशायद मध्य प्रदेश की एंबुलेंस गरीबों के लिए नहीं है,
— Sadaf Afreen صدف (@s_afreen7) February 11, 2023
इसलिए मरीज़ को ठेले पर लिटाकर अस्पताल ले जाया जा रहा है!!
वीडियो मे मरीज़ की पत्नी और बेटे ठेले को धक्का लगाकर ले जा रहे है!#MadhyaPradesh #सिंगरौलीhttps://t.co/7uIlBCDFZq pic.twitter.com/VD6N5nSUow
ಬಡ ಕುಟುಂಬವೊಂದು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಆಂಬ್ಯುಲೆನ್ಸ್‌ಗಾಗಿ ಕಾದಿತ್ತು. ಆದರೆ, ವಾಹನ ಬರಲು ತಡವಾಗಿದ್ದು ಪುಟ್ಟ ಬಾಲಕನೇ ತನ್ನ ತಂದೆಯನ್ನು ಮರದ ಗಾಡಿಯಲ್ಲಿ ಆಸ್ಪತ್ರೆಗೆ ಕರೆತಂದಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಂಗ್ರೌಲಿ ಜಿಲ್ಲಾಡಳಿತ, ಶನಿವಾರ ಸಂಜೆ ಈ ಕುರಿತು ತನಿಖೆ ನಡೆಸುವಂತೆ ಆದೇಶಿಸಿದೆ.
ಇದನ್ನೂ ಓದಿ: ತಳ್ಳುವ ಗಾಡಿ ಐಸಾ.. ನಿಂತಿದ್ದ ಸರ್ಕಾರಿ ಆಂಬ್ಯುಲೆನ್ಸ್ ತಳ್ಳಿದ ಜನ: ವಿಡಿಯೋ ವೈರಲ್
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಸಿಂಗ್ರೌಲಿಯ ಅಪರ ಜಿಲ್ಲಾಧಿಕಾರಿ ಡಿ.ಪಿ. ಬರ್ಮನ್, "ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ರೋಗಿಯನ್ನು ಅವರ ಪತ್ನಿ ಮತ್ತು ಅಪ್ರಾಪ್ತ ಪುತ್ರ ತಳ್ಳುವ ಗಾಡಿ ಮೂಲಕ ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ. ಆಂಬ್ಯುಲೆನ್ಸ್ ಅಲಭ್ಯತೆಯ ಕಾರಣವನ್ನು ಕಂಡುಹಿಡಿಯಲು ಮುಖ್ಯ ವೈದ್ಯಾಧಿಕಾರಿ ಮತ್ತು ಸಿವಿಲ್ ಸರ್ಜನ್ ಅವರಿಗೆ ಈಗಾಗಲೇ ಸೂಚಿಸಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ವಾಹನ ಸಿಗದೆ ಪರದಾಟ.. ತಳ್ಳುವ ಗಾಡಿ ಮೇಲೆ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದ ದಂಪತಿ
ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ಅನೇಕ ಬಾರಿ ಗರ್ಭಿಣಿಯಯರು ಸೇರಿದಂತೆ ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಮತ್ತು ಮೃತದೇಹಗಳನ್ನು ಮನೆಗೆ ಹಿಂದಿರುಗಿಸಲು ಆಂಬ್ಯುಲೆನ್ಸ್ ಸೇವೆ ದೊರೆಯದೇ ಪರದಾಡಿದ ಹಲವು ಘಟನೆಗಳಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ.