ETV Bharat / bharat

ಸೊಳ್ಳೆ ಕಾಯಿಲ್ ಹಾಸಿಗೆಗೆ ಬಿದ್ದು ಬೆಂಕಿ ಅನಾಹುತ: ಒಂದೇ ಕುಟುಂಬದ 6 ಮಂದಿ ಸಾವು

ರಾತ್ರಿ ಮಲಗುವಾಗ ಹಚ್ಚಿಟ್ಟ ಸೊಳ್ಳೆ ಕಾಯಿಲ್​ನಿಂದ ಮನೆಯೊಳಗೆ ಬೆಂಕಿ ಹೊತ್ತಿಕೊಂಡಿದೆ.

6 people died in a house in Shastri Park delhi
ದೆಹಲಿ ಶಾಸ್ತ್ರಿ ಪಾರ್ಕ್​ ಮನೆಯಲ್ಲಿ ಬೆಂಕಿ: ಒಂದೇ ಕುಟುಂಬದ 6 ಮಂದಿ ಉಸಿರುಗಟ್ಟಿ ಸಾವು
author img

By

Published : Mar 31, 2023, 12:56 PM IST

ನವದೆಹಲಿ: ರಾತ್ರಿ ಮಲಗಿದ್ದಾಗ ಹಚ್ಚಿಟ್ಟಿದ್ದ ಸೊಳ್ಳೆ ಕಾಯಿಲ್​ ಹಾಸಿಗೆಗೆ ಬಿದ್ದು ಕಿಡಿ ಮೂಡಿದ ಕಾರಣ ಮನೆಯಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನವದೆಹಲಿಯ ಶಾಸ್ತ್ರಿ ಪಾರ್ಕ್​ ಪ್ರದೇಶದಲ್ಲಿ ನಡೆದಿದೆ. ಈಶಾನ್ಯ ದೆಹಲಿ ಜಿಲ್ಲಾ ಪೊಲೀಸ್​ ಅಧಿಕಾರಿ ಘಟನೆಯ ಬಗ್ಗೆ ಮಾಹಿತಿ ನೀಡಿದರು.

ಹಿರಿಯ ಪೊಲೀಸ್​ ಅಧಿಕಾರಿು ಹೇಳುವ ಪ್ರಕಾರ, ಮಜರ್​ ವಾಲಾ ರಸ್ತೆಯ ಮಚ್ಚಿ ಮಾರುಕಟ್ಟೆ ಬಳಿಯ ಶಾಸ್ತ್ರಿ ಪಾರ್ಕ್​ನಲ್ಲಿರುವ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಶುಕ್ರವಾರ ಬೆಳಗ್ಗೆ ಸುಮಾರು 9 ಗಂಟೆಗೆ ಶಾಸ್ತ್ರಿ ಪಾರ್ಕ್​ ಪೊಲೀಸ್​ ಠಾಣೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್​ ತಂಡ ರಕ್ಷಣಾ ಕಾರ್ಯ ಕೈಗೊಂಡಿತು.

ಗಾಯಾಳುಗಳನ್ನು ಜಗಪ್ರವೇಶಚಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 9 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆರು ಮಂದಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇಬ್ಬರಿಗೆ ಸುಟ್ಟ ಗಾಯಗಳಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮೃತರಲ್ಲಿ ನಾಲ್ವರು ಪುರುಷರು, ಓರ್ವ ಮಹಿಳೆ ಹಾಗೂ ಒಂದು ಒಂದೂವರೆ ವರ್ಷ ಮಗು ಸೇರಿದೆ. 15 ವರ್ಷದ ಬಾಲಕಿ ಸೇರಿ ಇಬ್ಬರು ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸೊಳ್ಳೆ ಕಾಯಿಲ್ ಬಗ್ಗೆ ಎಚ್ಚರಿಕೆ ಇರಲಿ: ಪ್ರಾಥಮಿಕ ವರದಿಗಳ ಪ್ರಕಾರ ರಾತ್ರಿ ಹೊತ್ತಿನಲ್ಲಿ ಮನೆಯವರು ಮಲಗುವ ವೇಳೆ ಸೊಳ್ಳೆ ಕಾಯಿಲ್​ ಹೊತ್ತಿಸಿ ಇಟ್ಟಿದ್ದಾರೆ. ಉರಿಯುತ್ತಿದ್ದ ಸೊಳ್ಳೆ ಕಾಯಿಲ್ ಹಾಸಿಗೆಯ ಮೇಲೆ ಬಿದ್ದಿದೆ. ಕಾಯಿಲ್ ಬಿದ್ದಿದ್ದರಿಂದ ಸ್ಥಳದಲ್ಲಿಯೇ ಹಾಸಿಗೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡಾಗ ಅದರಿಂದ ಹೊರ ಬಂದ ವಿಷಕಾರಿ ಹೊಗೆಯಿಂದಾಗಿ ಮನೆಯಲ್ಲಿದ್ದವರು ಮೂರ್ಛೆ ಹೋಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮುಂದಿನ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.