ETV Bharat / bharat

ಭಾರತದಲ್ಲಿ ತರಬೇತಿಯಲ್ಲಿರುವ ಆಫ್ಘನ್ ಸೈನಿಕರಿಗೆ 6 ತಿಂಗಳ ಇ-ವೀಸಾ ವಿತರಣೆ - ಅಫ್ಘನ್ ಸೈನಿಕರಿಗೆ 6 ತಿಂಗಳ ಇ-ವೀಸಾ ವಿತರಣೆ

ಆಫ್ಘನ್ ಸೇನೆಯ ಸಾಮರ್ಥ್ಯ ವೃದ್ಧಿಯ ಭಾಗವಾಗಿ ಭಾರತೀಯ ಸೇನೆ ಆಫ್ಘನ್ ಸೈನಿಕರಿಗೆ ತರಬೇತಿ ನೀಡುತ್ತಿದ್ದು, ಅವರಿಗೆ ತರಬೇತಿ ಮುಗಿದ ನಂತರ ಆರು ತಿಂಗಳ ಕಾಲ ಇ-ವೀಸಾ ನೀಡಲಾಗುತ್ತದೆ.

6 months visa to be granted to Afghan soldiers being trained in India
ಭಾರತದಲ್ಲಿ ತರಬೇತಿಯಲ್ಲಿರುವ ಅಫ್ಘನ್ ಸೈನಿಕರಿಗೆ 6 ತಿಂಗಳ ಇ-ವೀಸಾ ವಿತರಣೆ
author img

By

Published : Sep 29, 2021, 8:45 AM IST

ನವದೆಹಲಿ: ದೇಶದ ವಿವಿಧ ಮಿಲಿಟರಿ ಅಕಾಡೆಮಿಗಳಲ್ಲಿ ತರಬೇತಿ ಪಡೆಯುತ್ತಿರುವ ಸುಮಾರು 180 ಆಫ್ಘನ್ ಸೈನಿಕರು ಮತ್ತು ಕೆಡೆಟ್‌ಗಳಿಗೆ ಇಲ್ಲಿ ತರಬೇತಿ ಪೂರ್ಣಗೊಳಿಸಿದ ನಂತರ ಸುಮಾರು ಆರು ತಿಂಗಳ ಅವಧಿಯ ಇ-ವೀಸಾ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.

ಆದರೂ ಸುಮಾರು 140 ಆಫ್ಘನ್ ಸೈನಿಕರು ಮತ್ತು ಕೆಡೆಟ್‌ಗಳು ತಾವು ಕೆನಡಾ, ಇಂಗ್ಲೆಂಡ್ ಮತ್ತು ಜರ್ಮನಿ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ಹೊರಡಲು ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ನಮ್ಮ ಅಕಾಡೆಮಿಗಳಲ್ಲಿ ತರಬೇತಿ ಪಡೆಯುತ್ತಿರುವ ಎಲ್ಲ ಆಫ್ಘನ್ ಕೆಡೆಟ್‌ಗಳು ಮತ್ತು ಸೈನಿಕರಿಗೆ ಆರು ತಿಂಗಳ ಕಾಲ ಇ - ವೀಸಾಗಳನ್ನು ನೀಡಲಾಗುವುದು. ಈ ಅವಧಿಯಲ್ಲಿ ಅವರ ಭವಿಷ್ಯದ ಬಗ್ಗೆ ಅವರು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸರ್ಕಾರಿ ಮೂಲಗಳು ಎಎನ್​ಐಗೆ ಮಾಹಿತಿ ನೀಡಿವೆ.

ಕೆನಡಾ ಮತ್ತು ಯುರೋಪ್​ನ ವಿವಿಧ ದೇಶಗಳಿಗೆ ತೆರಳಲು ಸುಮಾರು 140 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕೆಲವರು ಭಾರತದಲ್ಲಿ ಉಳಿಯಲು ಬಯಸುತ್ತಾರೆ. ಈಗಾಗಲೇ ಅವರು ಆಫ್ಘನ್ನರಿಗಾಗಿ ಕೆಲಸ ಮಾಡುತ್ತಿರುವ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಸುಮಾರು 180 ಮಂದಿ ರಕ್ಷಣೆ ಪಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೇನೆಯ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದ ಭಾಗವಾಗಿ ಭಾರತೀಯ ಸೇನೆ ಅವರಿಗೆ ತರಬೇತಿ ನೀಡುತ್ತಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಭಾರಿ ಅವಾಂತರ, ಅಪಾರ ಪ್ರಾಣಹಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.