ETV Bharat / bharat

ಪೆಟ್ರೋಲ್​ ಹಾಕಿಸಿಕೊಳ್ಳಲು ಬಂದ ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ದಿಢೀರ್​ ದಾಳಿ! - Haryana latest news

ಅರ್ಧ ಡಜನ್​ಗೂ ಅಧಿಕ ಜನರು ಏಕಾಏಕಿ ಯುವಕನೊಬ್ಬನ ಮೇಲೆ ಪೆಟ್ರೋಲ್​ ಪಂಪ್​ ಬಳಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

Jagadhri petrol pump
Jagadhri petrol pump
author img

By

Published : Apr 22, 2021, 3:24 PM IST

ಯಮುನಾನಗರ(ಹರಿಯಾಣ): ಪೆಟ್ರೋಲ್​ ಹಾಕಿಸಿಕೊಳ್ಳಲು ಪಂಪ್​ಗೆ ಆಗಮಿಸಿದ್ದ ವ್ಯಕ್ತಿಯೊಬ್ಬನ ಮೇಲೆ ಅರ್ಧ ಡಜನ್​ಗೂ ಅಧಿಕ ದುಷ್ಕರ್ಮಿಗಳು ದಿಢೀರ್​ ಆಗಿ ದಾಳಿ ನಡೆಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ವ್ಯಕ್ತಿ ಮೇಲೆ ದಿಢೀರ್ ಹಲ್ಲೆ ನಡೆಸಿದ ದುಷ್ಕರ್ಮಿಗಳು

ಹರಿಯಾಣದ ಯಮುನಾನಗರ ಜಗಧ್ರಿಯ ಪೆಟ್ರೋಲ್​ ಪಂಪ್​​ನಲ್ಲಿ ಈ ಘಟನೆ ನಡೆದಿದ್ದು, ಶಕ್ತಿ ನಗರದ ನಿವಾಸಿ ರೋಹಿತ್​ ಪೆಟ್ರೋಲ್​ ಹಾಕಿಸಿಕೊಳ್ಳಲು ಆಗಮಿಸಿದ್ದನು. ಇದಕ್ಕಿದ್ದಂತೆ ಬೈಕ್​​ನಿಂದ ಇಳಿದ ಇಬ್ಬರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ನಾಲ್ವರು ಕೈಯಲ್ಲಿ ಕೋಲು ಹಿಡಿದು ಅಲ್ಲಿಗೆ ಬಂದು ರೋಹಿತ್​ ಮೇಲೆ ಹಲ್ಲೆ ನಡೆಸಿದ್ದಾರೆ. ಆಶ್ಚರ್ಯ ಎಂದರೆ ಪೆಟ್ರೋಲ್​ ಪಂಪ್​​ನಲ್ಲಿ ನಿಂತಿದ್ದ ಜನರು ಯುವಕನ ರಕ್ಷಣೆ ಮಾಡಲು ಮುಂದಾಗಿಲ್ಲ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಹಲ್ಲೆಗೊಳಗಾಗಿರುವ ರೋಹಿತ್​ ಗಂಭೀರವಾಗಿ ಗಾಯಗೊಂಡಿದ್ದು, ಕ್ಷಣಾರ್ಧದಲ್ಲಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.