ನವದೆಹಲಿ : ಫ್ರಾನ್ಸ್‌ನ ಮಿಲಿಟರಿ ಏರ್‌ಬೇಸ್‌ನಿಂದ ಹೊರಟಿದ್ದ ಐದನೇ ಬ್ಯಾಚ್‌ನ ಅತ್ಯಾಧುನಿಕ ರಫೇಲ್ ಫೈಟರ್ ಜೆಟ್‌ಗಳು ಭಾರತಕ್ಕೆ ಬಂದು ತಲುಪಿವೆ.
ಐದು ದಿನಗಳ ಅಧಿಕೃತ ಫ್ರಾನ್ಸ್ ಪ್ರವಾಸದಲ್ಲಿರುವ ಭಾರತೀಯ ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ ಫ್ರಾನ್ಸ್‌ನ ಮೆರಿಗ್ನಾಕ್ ಏರ್ ಬೇಸ್ನಲ್ಲಿ ರಫೇಲ್ ಫೈಟರ್ ಜೆಟ್ಗಳ ಹಾರಾಟಕ್ಕೆ ಚಾಲನೆ ನೀಡಿದ್ದರು. ಆ ಬಳಿಕ ಸುಮಾರು 8 ಸಾವಿರ ಕಿ.ಮೀ ದೂರವನ್ನು ಕ್ರಮಿಸಿ ಯುದ್ಧ ವಿಮಾನಗಳು ಭಾರತವನ್ನು ತಲುಪಿವೆ.
ಫ್ರಾನ್ಸ್ನಿಂದ ಭಾರತಕ್ಕೆ ಬರುವ ಮಧ್ಯೆ ಫ್ರಾನ್ಸ್ ಮತ್ತು ಯುಎಇ ವಾಯುಸೇನೆಗಳು ಫೈಟರ್ ಜೆಟ್ಗಳಿಗೆ ಇಂಧನ ಪೂರೈಕೆ ಮಾಡಿವೆ.