ಡೆಹ್ರಾಡೂನ್ (ಉತ್ತರಾಖಂಡ): ಮೇ 3ರಿಂದ ಆರಂಭವಾಗಿರುವ ಪ್ರಸಿದ್ಧ ಚಾರ್ಧಾಮ್ ಯಾತ್ರೆಯಲ್ಲಿ ಇದುವರೆಗೆ 57 ಜನ ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಬಹುತೇಕ ಜನರು ಹೃದಯಾಘಾತ ಮತ್ತು ಯಾತ್ರಾ ಮಾರ್ಗಗಳಲ್ಲಿ ಮೌಂಟೇನ್ ಸಿಕ್ನೆಸ್ನಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಉತ್ತರಾಖಂಡದ ಆರೋಗ್ಯ ಇಲಾಖೆಯ ಮಹಾ ನಿರ್ದೇಶಕಿ ಶೈಲಜಾ ಭಟ್, ಪ್ರಸ್ತುತ ಪ್ರಯಾಣದ ಮಾರ್ಗಗಳಲ್ಲಿ ಯಾತ್ರಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಈ ತಪಾಸಣೆ ವೇಳೆ ತೊಂದರೆ ಕಂಡು ಬರುವವರಿಗೆ ಮುಂದೆ ತೆರಳದಂತೆ ಸಲಹೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಮ್ಮುಖದಲ್ಲಿ ಅಕ್ಷಯ ತೃತೀಯದಂದು ಗಂಗೋತ್ರಿ ಮತ್ತು ಯಮುನೋತ್ರಿ ಪೋರ್ಟಲ್ಗಳನ್ನು ತೆರೆಯುವುದರೊಂದಿಗೆ ಚಾರ್ಧಾಮ್ ಯಾತ್ರೆ ಆರಂಭವಾಗಿತ್ತು. ಮೇ 6ರಂದು ಕೇದಾರನಾಥ ಮತ್ತು ಮೇ 8ರಂದು ಬದ್ರಿನಾಥ ಬಾಗಿಲು ತೆರೆಯಲಾಗಿತ್ತು.
ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿ, ಔರಂಗಾಬಾದ್ ನಗರದ ಹೆಸರು ಬದಲಿಸಲು ರಾಜ್ ಠಾಕ್ರೆ ಆಗ್ರಹ