ETV Bharat / bharat

ಶೋಪಿಯಾನ ಎನ್​ಕೌಂಟರ್​: ಐವರು ಉಗ್ರರ ಸದೆಬಡಿದ ಭದ್ರತಾ ಪಡೆ

ಜಮ್ಮುಮತ್ತು ಕಾಶ್ಮೀರದ ಶೋಪಿಯಾನದಲ್ಲಿ ನಡೆಯುತ್ತಿರುವ ಎನ್​ಕೌಂಟರ್​ನಲ್ಲಿ ಐವರು ಉಗ್ರರನ್ನು ಭದ್ರತಾ ಪಡೆ ಹತ್ಯೆಗೈದಿದೆ.

author img

By

Published : Apr 9, 2021, 12:19 PM IST

Shopian encounter
ಶೋಪಿಯಾನ ಎನ್​ಕೌಂಟರ್

ಶೋಪಿಯಾನ (ಜಮ್ಮು-ಕಾಶ್ಮೀರ): ಶೋಪಿಯಾನದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆಯುತ್ತಿರುವ ಗುಂಡಿನ ಕಾಳಗದಲ್ಲಿ ಒಟ್ಟು ಐವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ನಿನ್ನೆ ರಾತ್ರಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಶೋಪಿಯಾನದಲ್ಲಿ ಸಿಆರ್​ಪಿಎಫ್​​​ ಮತ್ತು ಪೊಲೀಸ್​ ಜಂಟಿ ಪಡೆ ಕಾರ್ಯಾಚರಣೆ ಕೈಗೊಂಡಿದ್ದವು. ಮೊದಲು ಮೂವರು ಉಗ್ರರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಇಬ್ಬರು ಉಗ್ರರು ಮಸೀದಿಯೊಳಗೆ ಅಡಗಿಕೊಂಡಿದ್ದರು. ಅವರನ್ನೂ ಇದೀಗ ಸದೆಬಡಿಯಲಾಗಿದೆ.

ಇದನ್ನೂ ಓದಿ: ಪವನ್ ಕಲ್ಯಾಣ್​ ಸಿನಿಮಾ ಸ್ಥಗಿತ: ಅಭಿಮಾನಿಗಳಿಂದ ಚಿತ್ರಮಂದಿರ ಧ್ವಂಸ

ಕಾರ್ಯಾಚರಣೆಯ ವೇಳೆ ನಿಷೇಧಿತ ಅನ್ಸಾರ್ ಘಜ್ವತ್-ಉಲ್-ಹಿಂದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನನ್ನು ಸೆರೆಹಿಡಿಯಲಾಗಿದೆ. ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.