ಕಛ್(ಗುಜರಾತ್): ಗುಜರಾತ್ನ ಮೊರ್ಬಿ ಸೇತುವೆ ದುರಂತ ಮಾಸುವ ಮುನ್ನವೇ ಕಛ್ನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಕಛ್ ಜಿಲ್ಲೆಯ ಮುಂಡ್ರಾ ಪ್ರದೇಶದಲ್ಲಿ ನರ್ಮದಾ ನದಿ ಕಾಲುವೆಗೆ ಬಿದ್ದು ಒಂದೇ ಕುಟುಂಬದ ಐವರು ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಸೋಮವಾರ ರಾತ್ರಿ ನಡೆದಿದೆ. ಐವರ ಶವಗಳನ್ನು ಪತ್ತೆ ಮಾಡಲಾಗಿದೆ.
ಮೂವರು ಮಹಿಳೆಯರು, ಇಬ್ಬರು ಪುರುಷರು: ನಾಲೆಯಲ್ಲಿ ಬಿದ್ದ ಐವರಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರಿದ್ದಾರೆ. ಕಛ್ ಜಿಲ್ಲೆಯ ಮುಂಡ್ರಾದ ಗುಂಡಾಲ ಮೂಲಕ ಹಾದುಹೋಗುವ ನರ್ಮದಾ ಕಾಲುವೆಯಲ್ಲಿ ಐವರು ಮುಳುಗಿದ್ದಾರೆ. ಸ್ಥಳೀಯರು ಇದನ್ನು ಕಂಡು ಎಲ್ಲಾ ಮೃತದೇಹಗಳನ್ನು ಕಾಲುವೆಯಿಂದ ಹೊರತೆಗೆದಿದ್ದಾರೆ.