ETV Bharat / bharat

ಆಪರೇಷನ್​ ವೇಳೆ ಐವರು ರೋಗಿಗಳ ಜೀವ ತೆಗೆಯಿತಾ ಅರವಳಿಕೆ ಇಂಜೆಕ್ಷನ್​!? - ರೋಗಿಗಳ ಜೀವ ತೆಗೆಯಿತು ಅರವಳಿಕೆ ಇಂಜೆಕ್ಷನ್

ಆಸ್ಪತ್ರೆಯಲ್ಲಿ ಜೀವ ಉಳಿಸಿಕೊಳ್ಳಲು ಹೋದರೆ, ಅಲ್ಲಿ ನೀಡಿದ ಮದ್ದೇ ಜೀವ ಕಳೆದಿದೆ. ಆಪರೇಷನ್​ ವೇಳೆ ಪ್ರಜ್ಞಾಹೀನರನ್ನಾಗಿ ಮಾಡಲು ನೀಡುವ ಅರವಳಿಕೆ ಚುಚ್ಚುಮದ್ದಿಗೆ ರೋಗಿಗಳು ಬಲಿ ಆದ ಬಗ್ಗೆ ವರದಿಯಾಗಿದೆ.

due-to-propofol-injection
ಪ್ರಜ್ಞೆ ತಪ್ಪಿಸಲು ನೀಡಿದ ಇಂಜೆಕ್ಷನ್​
author img

By

Published : Sep 8, 2022, 4:20 PM IST

ಚಂಡೀಗಢ: ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಆಪರೇಷನ್​ ವೇಳೆ ಪ್ರಜ್ಞೆ ತಪ್ಪಿಸಲು ಬಳಸುವ ಅರವಳಿಕೆ ಚುಚ್ಚುಮದ್ದು ನೀಡಿದ್ದಕ್ಕೆ ಐವರು ರೋಗಿಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಒಂದು ವಾರದಲ್ಲಿ 5 ಸಾವುಗಳು ಇದೇ ಕಾರಣಕ್ಕಾಗಿ ಸಂಭವಿಸಿವೆ ಎಂದು ಹೇಳಲಾಗ್ತಿದೆ.

ಆಪರೇಷನ್​ ವೇಳೆ ಪ್ರಜ್ಞೆ ತಪ್ಪಿಸಲು ಔಷಧಿಯೊಂದನ್ನು ನೀಡಲಾಗುತ್ತದೆ. ಹೀಗೆ ನೀಡಿದ ಚುಚ್ಚುಮದ್ದಿನಿಂದ ರೋಗಿಗಳು ಮೃತಪಟ್ಟಿದ್ದಾರೆ. ಪಿಜಿಐನಲ್ಲಿ ವಿವಿಧ ಕಾರಣಕ್ಕಾಗಿ ಐದು ರೋಗಿಗಳಿಗೆ ಆಪರೇಷನ್​ ನಡೆಸಲಾಗಿದೆ. ಐವರಿಗೆ ಈ ವೇಳೆ ಮತ್ತು ಬರಿಸುವ ಚುಚ್ಚುಮದ್ದನ್ನು ನೀಡಲಾಗಿದೆ. ಬಳಿಕ ಅವರು ಮೃತಪಟ್ಟಿದ್ದಾರೆ. ಇದಕ್ಕೆ ಕಾರಣ ಚುಚ್ಚುಮದ್ದು ಎಂದು ಶಂಕಿಸಲಾಗಿದೆ.

ಅನುಮಾನದ ಮೇಲೆ ವೈದ್ಯಕೀಯ ಆಸ್ಪತ್ರೆಯಲ್ಲಿನ ಚುಚ್ಚುಮದ್ದಿನ ಎಲ್ಲ ದಾಸ್ತಾನನ್ನು ಜಪ್ತಿ ಮಾಡಲಾಗಿದೆ. ಬಳಿಕ ಇವುಗಳ ಮಾದರಿಯನ್ನು ಪರೀಕ್ಷೆ ನಡೆಸಲು ಕೋಲ್ಕತ್ತಾ ಲ್ಯಾಬ್​ಗೆ ಕಳುಹಿಸಲಾಗಿದೆ. ಈ ಚುಚ್ಚುಮದ್ದಿನಿಂದಾಗಿ ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪಿಜಿಐ ವೈದ್ಯರು ಹೇಳಿದ್ದಾರೆ. ಈಗಲೇ ಇದನ್ನು ದೃಢೀಕರಿಸುವುದು ಕಷ್ಟ. ಪರೀಕ್ಷಾ ವರದಿ ಬಂದ ನಂತರವಷ್ಟೇ ಈ ಬಗ್ಗೆ ನಿಖರ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಜಿಐ ಈ ಬಗ್ಗೆ ಕೇಂದ್ರೀಯ ಗುಣಮಟ್ಟದ ಔಷಧ ನಿಯಂತ್ರಣ ಸಂಸ್ಥೆಗೂ ಮಾಹಿತಿ ನೀಡಿದೆ. ಸಂಸ್ಥೆಯೂ ಕೂಡ ಚುಚ್ಚುಮದ್ದಿನ ಮಾದರಿಗಳನ್ನು ಪಡೆದುಕೊಂಡಿದೆ. ಪರೀಕ್ಷಾ ವರದಿ ಬರುವವರೆಗೆ ಈ ಚುಚ್ಚುಮದ್ದುಗಳ ಪೂರೈಕೆಯನ್ನು ನಿಲ್ಲಿಸಲಾಗಿದೆ. ಇದಲ್ಲದೇ, ಪಿಜಿಐ ಕೂಡ ಈ ಕುರಿತು ತನಿಖೆ ನಡೆಸಲು ಹಿರಿಯ ವೈದ್ಯ ಎಸ್‌ಕೆ ಗುಪ್ತಾ ಅವರ ನೇತೃತ್ವದಲ್ಲಿ ತಂಡ ರಚಿಸಿದೆ.

ಓದಿ: ತಮಿಳುನಾಡಿನ ಪ್ರಾಚೀನ ವಿಗ್ರಹಗಳು ಅಮೆರಿಕದಲ್ಲಿ ಪತ್ತೆ: ಮರಳಿ ತರಲು ಸಿಐಡಿ ಯತ್ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.