ETV Bharat / bharat

ಬ್ಲ್ಯಾಕ್​ ಫಂಗಸ್​ಗೆ ಔಷಧ ತಯಾರಿಸಲು 5 ಫಾರ್ಮಾಗಳಿಗೆ ಅನುಮತಿ

ಡೆಡ್ಲಿ ವೈರಸ್ ಕೊರೊನಾ ಜೊತೆಗೆ ಇದೀಗ ಬ್ಲ್ಯಾಕ್​ ಫಂಗಸ್​ ಕಾಟ ಶುರುವಾಗಿದ್ದು, ಇದರಿಂದ ಅನೇಕರು ಸಮಸ್ಯೆಗೊಳಗಾಗುತ್ತಿದ್ದಾರೆ.

5 More Firms To Make Anti-Black Fungus Drug

author img

By

Published : May 20, 2021, 10:37 PM IST

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ ಮಧ್ಯೆ ದೇಶದಲ್ಲಿ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಂಡಿದ್ದು, ಇದರಿಂದ ಅನೇಕರು ತಮ್ಮ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಬ್ಲ್ಯಾಕ್ ಫಂಗಸ್​​ಗೆ ಔಷಧ ತಯಾರಿಸಲು ಇದೀಗ ದೇಶದ 5 ಫಾರ್ಮಾಗಳಿಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸಚಿವ ಮನ್ಸುಖ್​ ಮಾಂಡವಿಯಾ ಟ್ವೀಟ್​ ಮಾಡಿದ್ದಾರೆ.

  • Black Fungus (Mucormycosis) curing drug #AmphotericinB 's shortage will be resolved soon!

    Within three days, 5 more Pharma companies have got New Drug Approval for producing it in India, in addition to the existing 6 pharma companies. (1/2) pic.twitter.com/hm9KiZgxr4

    — Mansukh Mandaviya (@mansukhmandviya) May 20, 2021 " class="align-text-top noRightClick twitterSection" data=" ">

ಬ್ಲ್ಯಾಕ್ ಫಂಗಸ್​ ವಿರುದ್ಧ ಆ್ಯಂಪೊಟೆರಿಸಿನ್​-ಬಿ ಬಳಕೆ ಮಾಡಲಾಗ್ತಿದ್ದು, ದೇಶದಲ್ಲಿ ಇದರ ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ದೇಶದಲ್ಲಿ ಐದು ಫಾರ್ಮಾ ಕಂಪನಿಗಳಿಗೆ ಔಷಧ ತಯಾರಿಕೆಗೋಸ್ಕರ ಅನುಮತಿ ನೀಡಲಾಗಿದೆ ಎಂಬ ಮಾಹಿತಿ ಶೇರ್​ ಮಾಡಿದ್ದಾರೆ.

ದೇಶದಲ್ಲಿ ಈಗಾಗಲೇ ಆರು ಫಾರ್ಮಾ ಕಂಪನಿಗಳು ಈ ಔಷಧ ತಯಾರಿಸುತ್ತಿದ್ದು, ಕೆಲವೇ ದಿನಗಳಲ್ಲಿ ಔಷಧ ಕೊರತೆ ನಿವಾರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಅಸಹಾಯಕತೆ: 100 ರೂಪಾಯಿಗೆ ಹಾರಿಹೋಯ್ತು ಮಗನ ಪ್ರಾಣ

ಆ್ಯಂಪೊಟೆರಿಸಿನ್​-ಬಿ 6 ಲಕ್ಷ ಬಾಟಲು ಆಮದು ಮಾಡಿಕೊಳ್ಳಲು ಭಾರತೀಯ ಕಂಪನಿಗಳು ಆದೇಶ ನೀಡಿವೆ ಎಂದಿದ್ದಾರೆ.

ಮಹಾಮಾರಿ ಕೊರೊನಾ ವೈರಸ್​ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಅನೇಕರಲ್ಲಿ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಳ್ಳುತ್ತಿದೆ. ಸ್ಟಿರಾಯ್ಡ್​​ ಬಳಕೆಯಿಂದಾಗಿ ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಅಂಶ ಏರಿಕೆಯಾಗುತ್ತಿದ್ದು, ರೋಗನಿರೋಧಕ ಶಕ್ತಿ ಕಡಿಮೆಯಾಗಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಬ್ಲ್ಯಾಕ್​ ಫಂಗಸ್​​ ತೀವ್ರತೆ ಹೆಚ್ಚಾಗಿರುವ ಕಾರಣ ಕೆಲವೊಂದು ರಾಜ್ಯಗಳಲ್ಲಿ ಇದೊಂದು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.